'ಶೋಕಿವಾಲಾ' ಅಜಯ್ ರಾವ್ ಗೆ ಸ್ಯಾಂಡಲ್ ವುಡ್ ನಿರ್ದೇಶಕರ ಸಾಥ್!
ನಿರ್ದೇಶಕರಾದ ನಂದ ಕಿಶೋರ್, ಹರಿ ಸಂತೋಷ್, ಶಶಾಂಕ್, ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರ್ ಮತ್ತು ನಾಗೇಂದ್ರ ಪ್ರಸಾದ್ ಹಾಡಿನ ಸೀಕ್ವೆನ್ಸ್ಗಾಗಿ ನಾಯಕ ಅಜಯ್ ರಾವ್ ಜೊತೆಗೆ ಸ್ಟೆಪ್ ಹಾಕಿದ್ದಾರೆ.
Published: 20th April 2022 01:12 PM | Last Updated: 20th April 2022 01:34 PM | A+A A-

ಶೋಕಿವಾಲಾ ಸಿನಿಮಾ ಸ್ಟಿಲ್
ಅಜಯ್ ರಾವ್ ಮತ್ತು ಸಂಜನಾ ಆನಂದ್ ಅಭಿನಯದ ಶೋಕಿವಾಲಾ ಏಪ್ರಿಲ್ 29 ರಂದು ತೆರೆಗೆ ಬರಲಿದೆ.
ಚಿತ್ರ ಬಿಡುಗಡೆಗೆ ಮುಂಚಿತವಾಗಿ ನಿರ್ದೇಶಕರು ಹಾಡು ಬಿಡುಗಡೆ ಮಾಡಿದ್ದಾರೆ. ಜಾಕಿ ಚೊಚ್ಚಲ ನಿರ್ದೇಶನದ ಈ ಸಿನಿಮಾಗೆ ಹಲವು ನಿರ್ದೇಶಕರು ಮತ್ತು ಸಂಗೀತ ಸಂಯೋಜಕರು ಒಂದಾಗಿದ್ದಾರೆ.
ನಿರ್ದೇಶಕರಾದ ನಂದ ಕಿಶೋರ್, ಹರಿ ಸಂತೋಷ್, ಶಶಾಂಕ್, ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರ್ ಮತ್ತು ನಾಗೇಂದ್ರ ಪ್ರಸಾದ್ ಹಾಡಿನ ಸೀಕ್ವೆನ್ಸ್ಗಾಗಿ ನಾಯಕ ಅಜಯ್ ರಾವ್ ಜೊತೆಗೆ ಸ್ಟೆಪ್ ಹಾಕಿದ್ದಾರೆ.
ಇದನ್ನು ಓದಿ: ಅಜಯ್ ರಾವ್ ನಟನೆಯ 'ಶೋಕಿವಾಲಾ' ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್!
ಹಾಡಿಗೆ ಸಾಹಿತ್ಯವನ್ನು ಜೇಮ್ಸ್ ನಿರ್ದೇಶಕ ಚೇತನ್ ಕುಮಾರ್ ಬರೆದಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಶೋಕಿವಾಲಾ ಚಿತ್ರವನ್ನು ಟಿ ಆರ್ ಚಂದ್ರಶೇಖರ್ ಅವರ ಕ್ರಿಸ್ಟಲ್ ಪಾರ್ಕ್ ಸಿನಿಮಾ ನಿರ್ಮಿಸಿದೆ. ರೋಮ್ಯಾಂಟಿಕ್ ಕಥೆಯುಳ್ಳ ಈ ಸಿನಿಮಾದಲ್ಲಿ ಅಜಯ್ ಹಳ್ಳಿಯ ಯುವಕನಾಗಿ ನಟಿಸಿದ್ದಾರೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಛಾಯಾಗ್ರಹಣವನ್ನು ಶಿವಸೇನಾ ವಹಿಸಿಕೊಂಡಿದ್ದಾರೆ.