ರಕ್ಷಿತ್ ಶೆಟ್ಟಿ ಅಭಿನಯದ 'ಸಕುಟುಂಬ ಸಮೇತ' ಚಿತ್ರ ಮೇ 27ಕ್ಕೆ ಬಿಡುಗಡೆ!
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಕುಟುಂಬ ಸಮೇತ ಚಿತ್ರ ಬಿಡುಗಡೆ ದಿನಾಂಕ ಹೊರಬಿದ್ದಿದೆ. ಮೇ.27 ರಂದು ಚಿತ್ರಮಂದಿರಗಳಲ್ಲಿ ಸಕುಟುಂಬ ಸಮೇತ ಚಿತ್ರ ಚಿತ್ರ ರಿಲೀಸ್ ಆಗಲಿದೆ.
Published: 23rd April 2022 01:41 PM | Last Updated: 23rd April 2022 01:44 PM | A+A A-

ಸಕುಟುಂಬ ಸಮೇತ
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಕುಟುಂಬ ಸಮೇತ ಚಿತ್ರ ಬಿಡುಗಡೆ ದಿನಾಂಕ ಹೊರಬಿದ್ದಿದೆ. ಮೇ.27 ರಂದು ಚಿತ್ರಮಂದಿರಗಳಲ್ಲಿ ಸಕುಟುಂಬ ಸಮೇತ ಚಿತ್ರ ಚಿತ್ರ ರಿಲೀಸ್ ಆಗಲಿದೆ.
ಟೀಸರ್ ಬಿಡುಗಡೆಯೊಂದಿಗೆ ಈಗಾಗಲೇ ಚಿತ್ರ ತಂಡ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಎರಡು ಕುಟುಂಬಗಳ ಕಥೆ ಚಿತ್ರದಲ್ಲಿದ್ದು, ಮದುವೆ ನಡೆಯುವಾಗ ಏನೆಲ್ಲಾ ನಡೆಯುತ್ತದೆ ಎನ್ನುವುದು ಸಿನಿಮಾದಲ್ಲಿದೆ. ಎರಡು ಕುಟುಂಬಗಳ ನಡುವಿನ ಸ್ಟೇಟಸ್ ಬೇರೆ ಬೇರೆ ಇರುತ್ತದೆ. ಮದುವೆ ವಿಚಾರದಲ್ಲಿ ಇದು ಹೇಗೆ ಪರಿಣಾಮ ಬೀರುತ್ತೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ: ನಟ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರ ಜೂ.10ಕ್ಕೆ ಅದ್ಧೂರಿ ಬಿಡುಗಡೆ!
ರಾಹುಲ್ ಪಿ ಕೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಲೆ, ಭರತ್ ಜಿ ಬಿ, ಸಿರಿ ರವಿಕುಮಾರ್, ಪುಷ್ಪ ಬೆಳವಾಡಿ, ರೇಖಾ ಕೂಡ್ಲಿಗಿ, ಜಯಲಕ್ಷ್ಮೀ ಪಾಟೀಲ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಕರಮ್ ಚಾವ್ಲಾ ಮತ್ತು ಸಂದೀಪ್ ವಲ್ಲೂರಿ ಛಾಯಾಗ್ರಾಹಣ, ಮಿಧುನ್ ಮುಕುಂದನ್ ಸಂಗೀತ ಚಿತ್ರಕ್ಕಿದೆ.