ಕೆಜಿಎಫ್ ಕ್ರೇಜ್: ನಟ ಯಶ್ violence ಡೈಲಾಗ್ ಲಗ್ನಪತ್ರಿಕೆಯಲ್ಲಿ ಮುದ್ರಣ, ವೈರಲ್!
ಯಶ್ ಅಭಿನಯದ ‘ಕೆಜಿಎಫ್ 2’ ಒಂದು ವಾರದಲ್ಲಿ ರೂ 720.31 ಕೋಟಿ ಗಳಿಸಿದ ನಂತರ ಬಾಕ್ಸ್ ಆಫೀಸ್ ಅನ್ನು 7ನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Published: 23rd April 2022 05:54 PM | Last Updated: 23rd April 2022 07:17 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಯಶ್ ಅಭಿನಯದ ‘ಕೆಜಿಎಫ್ 2’ ಒಂದು ವಾರದಲ್ಲಿ ರೂ 720.31 ಕೋಟಿ ಗಳಿಸಿದ ನಂತರ ಬಾಕ್ಸ್ ಆಫೀಸ್ ಅನ್ನು 7ನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಟ ಯಶ್ ಅವರ ಮೋಡಿ ಮತ್ತು ಸಖತ್ ಅಭಿನಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.
ಈಗ ಈ ಚಿತ್ರದ ಯಶ್ ಅವರ ಭಾರೀ ಫೇಮಸ್ ಆದ ವೈಲೆನ್ಸ್ ವೈಲೆನ್ಸ್ ಸಂಭಾಷಣೆ ಮದುವೆ ಆಹ್ಬಾನ ಪತ್ರಿಕೆಯಲ್ಲೂ ಮುದ್ರಿತವಾಗುವಷ್ಟು ಫೇಮಸ್ ಆಗಿದೆ. ಹೌದು ಇದೀಗ ಈ ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಕೆಜಿಎಫ್-2 ಸಿನಿಮಾ ನನ್ನ ಸ್ವಾಮರ್ಥ್ಯವನ್ನು ಮತ್ತೆ ನೆನಪಿಸಿತು: ಸಂಜಯ್ ದತ್
ಚಿತ್ರದ ಪ್ರಸಿದ್ಧ violence, violence, violence’ ಸಂಭಾಷಣೆಯನ್ನು ಅಭಿಮಾನಿ ಅಳವಡಿಸಿಕೊಂಡಿದ್ದರು ಮತ್ತು ‘violence’ ‘ ಪದವನ್ನು ‘marriage’ ಎಂದು ಬದಲಾಯಿಸಿದ್ದರು. ಅವರು ಬರೆದಿದ್ದಾರೆ, “marriage, marriage, marriage, I Don’t Like It, I Avoid, But My Relatives Like Marriage, I Can’t Avoid ಎಂದು ಮುದ್ರಿಸಿದ್ದಾರೆ. ಇದು ವೈರಲ್ ಆಗಿದೆ.
ತ್ರದಲ್ಲಿ ಶ್ರೀನಿಧಿ ಶೆಟ್ಟಿ, ಯಶ್, ಸಂಜಯ್ ದತ್, ರವೀನಾ ಟಂಡನ್, ಅನಂತ್ ನಾಗ್, ಮಾಳವಿಕಾ ಅವಿನಾಶ್, ಪ್ರಕಾಶ್ ರಾಜ್ ಮತ್ತು ಅಚ್ಯುತ್ ರಾಜ್ ನಟಿಸಿದ್ದಾರೆ.