ಹಿಂದಿ ರಾಷ್ಟ್ರ ಭಾಷೆ ಅಂದ ಅಜಯ್ ದೇವಗನ್ ಗೆ ಕಿಚ್ಚ ಸುದೀಪ್ ಕೊಟ್ಟ ಖಡಕ್ ತಿರುಗೇಟು ಏನು ಗೊತ್ತ?
ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರ 'ಹಿಂದಿ ಇನ್ನು ರಾಷ್ಟ್ರ ಭಾಷೆಯಲ್ಲ' ಎಂಬ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ಪ್ರತಿಕ್ರಿಯಿಸಿದ್ದಾರೆ.
Published: 27th April 2022 06:43 PM | Last Updated: 27th April 2022 06:48 PM | A+A A-

ಅಜಯ್ ದೇವಗನ್-ಕಿಚ್ಚ ಸುದೀಪ್
ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರ 'ಹಿಂದಿ ಇನ್ನು ರಾಷ್ಟ್ರ ಭಾಷೆಯಲ್ಲ' ಎಂಬ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ಪ್ರತಿಕ್ರಿಯಿಸಿದ್ದಾರೆ. ಕೆಲವು ದಿನಗಳ ಹಿಂದೆ R: The Deadliest Gangster Ever ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಸುದೀಪ್ ಈ ಕಾಮೆಂಟ್ ಮಾಡಿದ್ದರು.
ಪ್ಯಾನ್-ಇಂಡಿಯನ್ ಚಿತ್ರಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುದೀಪ್, 'ಯಾರೋ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ಕೇಳಿದ್ದರು. ನಾನು ಸಣ್ಣ ತಿದ್ದುಪಡಿ ಮಾಡಲು ಬಯಸುತ್ತೇನೆ. ಹಿಂದಿ ರಾಷ್ಟ್ರ ಭಾಷೆಯಲ್ಲ. ಬಾಲಿವುಡ್ ನವರು ಇಂದು ಪ್ಯಾನ್-ಇಂಡಿಯಾ ಚಲನಚಿತ್ರಗಳನ್ನು ಮಾಡುತ್ತಿದ್ದಾರೆ. ಅವರು ತೆಲುಗು ಮತ್ತು ತಮಿಳಿನಲ್ಲಿ ಡಬ್ಬಿಂಗ್ ಮಾಡುವ ಮೂಲಕ ಹೆಣಗಾಡುತ್ತಿದ್ದಾರೆ ಆದರೆ ಅವು ಯಶಸ್ಸು ಆಗುತ್ತಿಲ್ಲ. ಇಂದು ನಾವು ಎಲ್ಲರನ್ನೂ ಮುಟ್ಟುವಂತ ಚಲನಚಿತ್ರಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಟ ಅಜೇಯ್ ದೇವಗನ್ ಹಿಂದಿಯಲ್ಲಿ ಟ್ವೀಟ್ ಮಾಡುತ್ತಾ ಆಗಿದ್ದರೆ ನಿಮ್ಮ ಸಿನಿಮಾಗಳನ್ನು ಭಾಷೆಗೆ ಏಕೆ ಡಬ್ ಮಾಡುತ್ತೀರಿ ಎಂದು ಕೇಳಿದರು. ನನ್ನ ಸಹೋದರ, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲದಿದ್ದರೆ, ನಿಮ್ಮ ಮಾತೃಭಾಷೆಯಲ್ಲಿ ಚಲನಚಿತ್ರಗಳನ್ನು ನಿರ್ಮಿಸಿ ಅದನ್ನು ಹಿಂದಿಯಲ್ಲಿ ಡಬ್ ಮಾಡಿ ಏಕೆ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರ ಭಾಷೆಯಾಗಿದೆ. ಜನ ಗಣ ಮನ ಎಂದು ಅಜಯ್ ಬರೆದಿದ್ದಾರೆ.
Hello @ajaydevgn sir.. the context to why i said tat line is entirely different to the way I guess it has reached you. Probably wil emphasis on why the statement was made when I see you in person. It wasn't to hurt,Provoke or to start any debate. Why would I sir https://t.co/w1jIugFid6
— Kichcha Sudeepa (@KicchaSudeep) April 27, 2022
ಭಾರತದಲ್ಲಿ ಇಂಗ್ಲಿಷ್‌ಗೆ ಪರ್ಯಾಯ ಭಾಷೆಯಾಗಿ ಹಿಂದಿ ಏರಿಕೆಯ ಚರ್ಚೆಯ ನಡುವೆ ಅಜಯ್ ಅವರ ಟ್ವೀಟ್ ಬಂದಿದೆ. ಈ ತಿಂಗಳ ಆರಂಭದಲ್ಲಿ ನಡೆದ ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂತಹ ಸಲಹೆಯನ್ನು ನೀಡಿದ್ದರು. ಅಮಿತ್ ಶಾ ಎಲ್ಲಾ ರಾಜ್ಯಗಳ ಜನರನ್ನು ಹಿಂದಿಯಲ್ಲಿ ಪರಸ್ಪರ ಸಂವಹನ ನಡೆಸುವಂತೆ ಹೇಳಿದ್ದರು. ಇದು ಕೋಲಾಹಲಕ್ಕೆ ಕಾರಣವಾಯಿತು.
ಅಜೇಯ್ ದೇವಗನ್ ಸರ್, ನೀವು ಹಿಂದಿಯಲ್ಲಿ ಕಳುಹಿಸಿದ ಸಂದೇಶ ನನಗೆ ಅರ್ಥವಾಯಿತು. ನಾವೆಲ್ಲರೂ ಗೌರವಿಸಿದ್ದೇವೆ, ಪ್ರೀತಿಸುತ್ತೇವೆ ಮತ್ತು ಹಿಂದಿಯನ್ನು ಕಲಿತಿದ್ದೇವೆ. ತಪ್ಪಿಲ್ಲ ಸರ್, ಆದರೆ ನನ್ನ ಪ್ರತಿಕ್ರಿಯೆಯನ್ನು ನಾನು ಕನ್ನಡದಲ್ಲಿ ಟೈಪ್ ಮಾಡಿದರೆ ಪರಿಸ್ಥಿತಿ ಏನಾಗಬಹುದು ಎಂದು ಆಶ್ಚರ್ಯ ಪಡುತ್ತಿದ್ದೇನೆ. ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
And sir @ajaydevgn ,,
— Kichcha Sudeepa (@KicchaSudeep) April 27, 2022
I did understand the txt you sent in hindi. Tats only coz we all have respected,loved and learnt hindi.
No offense sir,,,but was wondering what'd the situation be if my response was typed in kannada.!!
Don't we too belong to India sir.
ಏತನ್ಮಧ್ಯೆ, RRR ಮತ್ತು KGF 2 ನಂತಹ ಚಲನಚಿತ್ರಗಳ ಯಶಸ್ಸು ಬಾಲಿವುಡ್ ನ ಶ್ರೇಷ್ಠತೆಯ ಮೇಲೆ ಸವಾರಿ ಮಾಡುತ್ತಿದೆ.