ಶೋಕಿವಾಲಾ ನನ್ನ ವೃತ್ತಿ ಜೀವನದ ಮೊಟ್ಟ ಮೊದಲ ಕಾಮಿಡಿ ಸಿನಿಮಾ: ಅಜಯ್ ರಾವ್
ಮಾಗಡಿಯಿಂದ ಬೆಂಗಳೂರಿಗೆ ಬಂದ ತಿಮ್ಮೇಗೌಡ ಕನ್ನಡ ಸಿನಿಮಾರಂಗದಲ್ಲಿ ಜಾಕಿ ಎಂದೇ ಪರಿಚಿತ. 2009 ರಲ್ಲಿ ಬೆಂಗಳೂರಿಗೆ ಬಂದ ತಿಮ್ಮೇಗೌಡ ಲೈಟ್ ಬಾಯ್ ಆಗುವ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು.
Published: 28th April 2022 02:07 PM | Last Updated: 28th April 2022 02:37 PM | A+A A-

ಶೋಕಿವಾಲಾ ಸಿನಿಮಾ ಸ್ಟಿಲ್
ಮಾಗಡಿಯಿಂದ ಬೆಂಗಳೂರಿಗೆ ಬಂದ ತಿಮ್ಮೇಗೌಡ ಕನ್ನಡ ಸಿನಿಮಾರಂಗದಲ್ಲಿ ಜಾಕಿ ಎಂದೇ ಪರಿಚಿತ. 2009 ರಲ್ಲಿ ಬೆಂಗಳೂರಿಗೆ ಬಂದ ತಿಮ್ಮೇಗೌಡ ಲೈಟ್ ಬಾಯ್ ಆಗುವ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು.
ನಂತರ ವಿಕ್ಟರಿ, ರಾಣಾ, ಲಕ್ಕಿ, ಸಂತು ಸ್ಟ್ರೈಟ್ ಫಾರ್ವರ್ಡ್ ಮತ್ತು ಪ್ರಶಾಂತ್ ನೀಲ್ ಅವರ ಕೆಜಿಎಫ್ ಚಾಪ್ಟರ್ 1 ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಸದ್ಯ ಶೋಕಿವಾಲಾ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿದ್ದಾರೆ. ಅಜಯ್ ರಾವ್ ಮತ್ತು ಸಂಜನಾ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶುಕ್ರವಾರ ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ. ಇನ್ನೂ ತಮ್ಮ ಪಾತ್ರದ ಬಗ್ಗ ಮಾತನಾಡಿರುವ ಅಜಯ್ ರಾವ್, ಶೋಕಿವಾಲಾ ಒಬ್ಬ ವ್ಯಕ್ತಿಯ ‘ಶೋ ಆಫ್’ ಆಗಿದೆ.
ನಾನು ಗ್ರಾಮೀಣ ಸೊಗಡಿನ ಸಿಿಮಾ ಮಾಡಿದ್ದೇನೆ, ಮಧ್ಯಮ ವರ್ಗದ ವ್ಯಕ್ತಿ ಪಾತ್ರ ಮಾಡಿದ್ದೇನೆ, ಈಗ ಇದೇ ಮೊದಲ ಬಾರಿಗೆ ಕಾಮಿಡಿ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: 'ಶೋಕಿವಾಲಾ' ಅಜಯ್ ರಾವ್ ಗೆ ಸ್ಯಾಂಡಲ್ ವುಡ್ ನಿರ್ದೇಶಕರ ಸಾಥ್!
ಶೋಕಿವಾಲಾದಲ್ಲಿ ಪ್ರತಿಯೊಂದು ಪಾತ್ರವೂ ಅಷ್ಟೇ ಮುಖ್ಯ ವಾಗಿದೆ "ಇದು ನಾಯಕನನ್ನು ಮಾತ್ರ ಅವಲಂಬಿಸಿರುವ ಚಿತ್ರವಲ್ಲ, ತೆರೆಯ ಮೇಲೆ ಕಾಣಿಸಿಕೊಳ್ಳುವ ಪ್ರತಿಯೊಂದು ಪಾತ್ರವೂ ನಾಯಕನಂತೆಯೇ ಮುಖ್ಯವಾಗಿದೆ.
ಹಳ್ಳಿ ಹುಡುಗನಾಗಿ ನಟಿಸುವುದು ಆಸಕ್ತಿದಾಯಕವಾಗಿತ್ತು. ಈ ಪಾತ್ರವನ್ನು ನಿರ್ವಹಿಸಲು ನಾನು ನನ್ನ ಕೆಲವು ಸ್ನೇಹಿತರ ಮ್ಯಾನರಿಸಂಗಳನ್ನು ಅಳವಡಿಸಿಕೊಂಡಿದ್ದೇನೆ ಎಂದು ಅಜಯ್ ರಾವ್ ಹೇಳಿದ್ದಾರೆ.
ನಾವು ಕೋವಿಡ್ ಗೆ ಮುಂಚಿತವಾಗಿಯೇ ಚಿತ್ರೀಕರಣ ಆರಂಭಿಸಿದ್ದೇವು, ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಶೋಕಿವಾಲಾ ಹೊಸ ಕಾನ್ಸೆಪ್ಟ್ ಆಗಿದೆ. ಚಿತ್ರಕ್ಕೆ ಟಿ ಆರ್ ಚಂದ್ರಶೇಖರ್ ಅವರ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಿರ್ಮಾಣ ಮಾಡಿದೆ, ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ.