'ಇದು ನಿಮ್ಮ ನಿಜವಾದ ಸೌಂದರ್ಯ': ಐಶ್ವರ್ಯಾ ರಜನಿಕಾಂತ್ ಗೆ ಕಮೆಂಟ್ ಹಾಕಿದ ಅಭಿಮಾನಿ!
ತಮಿಳು ನಟ ಧನುಷ್ ಅವರೊಂದಿಗೆ ವೈವಾಹಿಕ ಜೀವನದಿಂದ ಬೇರ್ಪಟ್ಟ ಮೇಲೆ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ.
Published: 29th April 2022 08:16 PM | Last Updated: 30th April 2022 01:05 PM | A+A A-

ಐಶ್ವರ್ಯ ರಜನಿಕಾಂತ್
ಚೆನ್ನೈ: ತಮಿಳು ನಟ ಧನುಷ್ ಅವರೊಂದಿಗೆ ವೈವಾಹಿಕ ಜೀವನದಿಂದ ಬೇರ್ಪಟ್ಟ ಮೇಲೆ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ವರ್ಕೌಟ್ ಗೆ ಸಂಬಂಧಿಸಿದ ವಿಡಿಯೋ ಫೋಟೋ ಹಾಕುವ ಮೂಲಕ ಫಿಟ್ ಆಂಡ್ ಫೈನ್ ಆಗಿರುವಂತೆ ಸಲಹೆ ನೀಡುತ್ತಿರುತ್ತಾರೆ.
ಇದೀಗ ಐಶ್ವರ್ಯ ಅವರು, ಸೂರ್ಯ ಮತ್ತು ಬೆವರು.. ಬೈಕ್ ಗಳು ಮತ್ತು ಬಾಟಲಿಗಳು. ಟ್ರ್ಯಾಕ್ಗಳು ಮತ್ತು ಆಲೋಚನೆಗಳು! ಮುಂಬರುವ ವಾರಾಂತ್ಯ ಏನು? ಎಂಬ ಅಡಿಬರಹದಡಿ ಒಂದೆಡೆ ಕುಳಿತು ಕೈಯಲ್ಲಿ ಪ್ರೋಟೀನ್ ವಾಟರ್ ಬಾಟಲಿ ಮತ್ತು ಐಫೋನ್ ಹಿಡಿದು ಕುಳಿತಿರುವ ಚಿತ್ರವನ್ನು ಶೇರ್ ಮಾಡಿದ್ದಾರೆ.
ಈ ಫೋಟೋವಲ್ಲದೇ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ ಮೊದಲ ಫೋಟೋದಲ್ಲಿ ಸುಂದರವಾದ ಗುಲಾಬಿ ಆಕಾಶ, ಮದ್ರಾಸ್ ಲವ್ ಎಂದು ಬರೆದಿದ್ದಾರೆ. ಮತ್ತೆ ತಾವು ಹೋಗುತ್ತಿರುವ ದಾರಿಯಲ್ಲಿ ಬಿದ್ದಿರುವ ಹೂವಿನ ಮಧ್ಯೆ ಸೈಕಲಿನಲ್ಲಿ ನಿಂತಿರುವ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.
ಸೈಕ್ಲಿಂಗ್ ಪಯಣದ ಹಲವಾರು ಫೋಟೋಗಳನ್ನು ಹಂಚಿಕೊಂಡಿರುವ ಐಶ್ವರ್ಯ ಅವರಿಗೆ ಬಳಕೆದಾರರ, ಕಮ್ ಆನ್ ಚಾಂಪಿಯನ್ ಎಂದು ಕಮೆಂಟ್ ಮಾಡಿದರೆ, ಮತ್ತೊಬ್ಬರು, ಇದು ನಿಮ್ಮ ನಿಜವಾದ ಸೌಂದರ್ಯ ಎಂದು ಹೇಳಿದ್ದಾರೆ.