ಹಿಂದಿ ರಾಷ್ಟ್ರ ಭಾಷೆ ವಿವಾದ: ಬಾಲಿವುಡ್ ಸ್ಟಾರ್ಸ್ ಗಳಿಗೆ ಸವಾಲು ಹಾಕಿದ ಆರ್ ಜಿವಿ!
ಹಿಂದಿ ರಾಷ್ಟ್ರ ಭಾಷೆ ವಿಚಾರವಾಗಿ ನಟರಾದ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ನಡುವಿನ ವಾಗ್ಯುದ್ದ ದೇಶಾದ್ಯಂತ ತೀವ್ರ ಚರ್ಚೆಯಾಗುತ್ತಿರುವಂತೆಯೇ, ತಮ್ಮ ನೇರ ನುಡಿ ಮತ್ತು ಮುಕ್ತ ಅಭಿಪ್ರಾಯಕ್ಕೆ ಹೆಸರಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಬಾಲಿವುಡ್ ಸ್ಟಾರ್ ಗಳಿಗೆ ಸವಾಲು ಹಾಕಿದ್ದಾರೆ.
Published: 29th April 2022 05:25 PM | Last Updated: 29th April 2022 05:43 PM | A+A A-

ರಾಮ್ ಗೋಪಾಲ್ ವರ್ಮಾ
ಬೆಂಗಳೂರು: ಹಿಂದಿ ರಾಷ್ಟ್ರ ಭಾಷೆ ವಿಚಾರವಾಗಿ ನಟರಾದ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ನಡುವಿನ ವಾಗ್ಯುದ್ದ ದೇಶಾದ್ಯಂತ ತೀವ್ರ ಚರ್ಚೆಯಾಗುತ್ತಿರುವಂತೆಯೇ, ತಮ್ಮ ನೇರ ನುಡಿ ಮತ್ತು ಮುಕ್ತ ಅಭಿಪ್ರಾಯಕ್ಕೆ ಹೆಸರಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಬಾಲಿವುಡ್ ಸ್ಟಾರ್ ಗಳಿಗೆ ಸವಾಲು ಹಾಕಿದ್ದಾರೆ.
ರಾಕಿಂಗ್ ಸ್ಟಾರ್ ಯಶ್, ಪ್ರಭಾಸ್, ರಾಮ್ ಚರಣ್, ಅಲ್ಲು ಅರ್ಜುನ್ ಮತ್ತಿತರರು ತಮ್ಮ ಚಿತ್ರಗಳನ್ನು ಹಿಂದಿಗೆ ಡಬ್ ಮಾಡುವ ಮೂಲಕ ಹೆಚ್ಚಿನ ಕಲೆಕ್ಷನ್ ಮಾಡಿ ಬಾಲಿವುಡ್ ಸ್ಟಾರ್ ಗಳಾದ ರಣವೀರ್ ಸಿಂಗ್, ರಣಬೀರ್ ಕಫೂರ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ಜಾನ್ ಅಬ್ರಹಾಂ ಮತ್ತಿತರನ್ನು ಬ್ಲಾಸ್ಟ್ ಮಾಡಿದ್ದಾರೆ. ಈ ಬಾಲಿವುಡ್ ಸ್ಟಾರ್ಸ್ ಗಳು ಇದನ್ನೇ ಸವಾಲು ಆಗಿ ತೆಗೆದುಕೊಂಡು ತಮ್ಮ ಹಿಂದಿ ಚಿತ್ರಗಳನ್ನು ತೆಲುಗು, ಕನ್ನಡ ಮತ್ತಿತರ ಭಾಷೆಗಳಿಗೆ ಡಬ್ಬಿಂಗ್ ಮಾಡಿ ದಕ್ಷಿಣದ ಸ್ಟಾರ್ ಗಳನ್ನು ಬ್ಲಾಸ್ಟ್ ಮಾಡಿ ಎಂದಿದ್ದಾರೆ.
As a challenge #RanvirSingh #RanbirKapoor @akshaykumar @ajaydevgan @TheJohnAbraham etc should dub their Hindi films into Telugu, Kannada etc and BLAST #Prabhas @TheNameIsYash @alwaysramcharan @tarak9999 @alluarjun etc by making their Hindi films collect more there
— Ram Gopal Varma (@RGVzoomin) April 29, 2022
ನಿರಾಕರಿಸಲಾಗದಂತಹ ಸತ್ಯ ಏನೆಂದರೆ ಪ್ರಭಾಸ್, ಯಶ್, ಅಲ್ಲು ಅರ್ಜುನ್, ರಾಮ್ ಚರಣ್ ಮತ್ತಿತರರು ಬಾಲಿವುಡ್ ನಲ್ಲಿ ಮಿಂಚುತ್ತಿರುವುದರಿಂದ ಹಿಂದಿ ಸ್ಟಾರ್ ಗಳು ಹತಾಶೆಗೊಳಾಗಿದ್ದಾರೆ. ಈ ಭಾಷೆಗಳ ನಡುವಿನ ಸಮರದ ಬದಲಿಗೆ ದೇಶದಲ್ಲಿನ ಎಲ್ಲಾ ಸ್ಟಾರ್ ಗಳು ಮತ್ತು ನಿರ್ದೇಶಕರ ನಡುವಿನ ಆರೋಗ್ಯಕರ ಸ್ಪರ್ಧೆಯಿಂದ ಎಲ್ಲಾ ಭಾಷೆಗಳಲ್ಲಿ ಉತ್ತಮ ಚಿತ್ರಗಳು ಹೊರಬಂದರೆ ಪ್ರೇಕ್ಷಕರು ಎಲ್ಲಾ ಸಿನಿಮಾಗಳನ್ನು ವೀಕ್ಷಿಸಿ, ಯಾವುದು ಉತ್ತಮ, ಯಾರು ಉತ್ತಮ ಎಂದು ನಿರ್ಧರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
The undeniable fact is that #Prabhas @TheNameIsYash @alwaysramcharan @tarak9999 @alluarjun went to Hindi aka Bollywood and BLASTED the Hindi stars #RanvirSingh #RanbirKapoor @akshaykumar @ajaydevgan @TheJohnAbraham etc
— Ram Gopal Varma (@RGVzoomin) April 29, 2022
Instead of waging language wars If a healthy competition starts between all the stars and directors of india to outdo each other in all languages ,the audience will get to taste everything from everywhere and then let the PUBLIC OF INDIA decide what’s best and who’s best
— Ram Gopal Varma (@RGVzoomin) April 29, 2022
ಪ್ರಸ್ತುತ ಕನ್ನಡ ಮತ್ತು ತೆಲುಗು ಡಬ್ಬಿಂಗ್ ಚಿತ್ರಗಳು ಬಾಲಿವುಡ್ ನಲ್ಲಿ ಬ್ಲಾಕ್ ಬಸ್ಟರ್ ಆಗಿದ್ದರಿಂದ ಬಾಲಿವುಡ್ ಆಘಾತಕ್ಕೊಳಗಾಗಿದೆ. ಈ ಚಿತ್ರಗಳು ಜನರು ಚಿತ್ರದ ಕಥೆ ಇಷ್ಟಪಡುತ್ತಾರೆ ಹೊರತು, ಅದು ಎಲ್ಲಿಂದ ಬಂತು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂಬುದು ಸಾಬೀತಾಗಿದೆ. ಈ ಹಿಂದೆ ಮೈನೆ ಪ್ಯಾರ್ ಕಿಯಾ, ಹಮ್ ಆಪ್ ಕೆ ಹೈ ಕೌನ್ ಮತ್ತು ಇತ್ತೀಚಿಗೆ ದಂಗಲ್ ಕೂಡಾ ಹಿಂದಿಯೇತರ ರಾಜ್ಯಗಳಲ್ಲಿ ಉತ್ತಮ ಕಲೆಕ್ಷನ್ ಮಾಡಿದ್ದವು. ಆದರೆ, ಈಗಿನ ಬ್ಲಾಕ್ ಬಸ್ಟರ್ ಪ್ರಾದೇಶಿಕ ಸಿನಿಮಾಗಳಿಗೆ ಹೋಲಿಸಿದರೆ ಆ ಚಿತ್ರಗಳಿಗೆ ಕಲೆಕ್ಷನ್ ಎಲ್ಲಿಯೂ ಇರಲಿಲ್ಲ ಎಂದು ಆರ್ ಜಿವಿ ಹೇಳಿದ್ದಾರೆ.