3ನೇ ವಾರವೂ ತಗ್ಗಲ್ಲ ರಾಕಿ ಭಾಯ್ ಹವಾ; ಸಾವಿರ ಕೋಟಿ ಕ್ಲಬ್ ಸೇರಿದ ಕೆಜಿಎಫ್-2, ಕನ್ನಡದ ಮೊದಲ, ಭಾರತದ 4ನೇ ಚಿತ್ರ!!!
ಬಾಕ್ಸಾಫೀಸ್ ನಲ್ಲಿ ಸತತ ಮೂರನೇ ವಾರವೂ ರಾಕಿ ಭಾಯ್ ಹವಾ ಮುಂದುವರೆದಿದ್ದು, ಶುಕ್ರವಾರದ ಕಲೆಕ್ಷನ್ ನೊಂದಿಗೆ ಚಿತ್ರದ ಗಳಿಕೆ ಸಾವಿರ ಕೋಟಿ ರೂ ದಾಟಿದೆ.
Published: 30th April 2022 11:52 AM | Last Updated: 30th April 2022 11:53 AM | A+A A-

ಕೆಜಿಎಫ್-2
ನವದೆಹಲಿ: ಬಾಕ್ಸಾಫೀಸ್ ನಲ್ಲಿ ಸತತ ಮೂರನೇ ವಾರವೂ ರಾಕಿ ಭಾಯ್ ಹವಾ ಮುಂದುವರೆದಿದ್ದು, ಶುಕ್ರವಾರದ ಕಲೆಕ್ಷನ್ ನೊಂದಿಗೆ ಚಿತ್ರದ ಗಳಿಕೆ ಸಾವಿರ ಕೋಟಿ ರೂ ದಾಟಿದೆ.
ಇದನ್ನೂ ಓದಿ: ಬಾಲಿವುಡ್ ಕಲೆಕ್ಷನ್ ನಲ್ಲಿ ಟೈಗರ್ ಜಿಂದಾ ಹೈ, ಪಿಕೆ, ಸಂಜು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದ ಕೆಜಿಎಫ್-2!
ಹೌದು.. ಥಿಯೇಟರ್ ಗಳಲ್ಲಿ ಕೆಜಿಎಫ್ ಚಾಪ್ಟರ್ 2 ತಂಡದ ಜೈತ್ರಯಾತ್ರೆ ಮುಂದುವರೆದಿದ್ದು, ಚಿತ್ರ ಇದೀಗ ಸಾವಿರ ಕೋಟಿ ರೂ ಗಳಿಕೆ ಕಂಡ ಚಿತ್ರಗಳ ಸಾಲಿಗೆ ಸಾರಿದೆ. ಆ ಮೂಲಕ ಸಾವಿರ ಕೋಟಿ ರೂ ಗಳಿಕೆ ಕಂಡ ಭಾರತದ ನಾಲ್ಕನೇ ಚಿತ್ರ ಮತ್ತು ಕನ್ನಡದ ಮೊದಲ ಚಿತ್ರ ಎಂಬ ಹಿರಿಮೆಗೆ ಕೆಜಿಎಫ್ 2 ಪಾತ್ರವಾಗಿದೆ.
It's 1000 not out! #KGFChapter2 zooms past the Rs 1000 crore club at the global box office. #Yash starrer becomes the fourth Indian film after #Dangal, #Bahubali2, and #RRR to attain this feat. First ever film of Kannada origin to clock four digit number. HISTORIC INDEED
— Himesh (@HimeshMankad) April 29, 2022
ಇದನ್ನೂ ಓದಿ: ಗೋವಾ ಪ್ರವಾಸದಲ್ಲಿ ‘ರಾಕಿ ಭಾಯ್’, ಪತಿ ಮುತ್ತಿಟ್ಟ ಫೋಟೋ ಹಂಚಿಕೊಂಡ ರಾಧಿಕಾ
ಈ ಕುರಿತಂತೆ ಖ್ಯಾತ ಬಾಕ್ಸಾಫೀಸ್ ತಜ್ಞ ಹಿಮೇಶ್ ಮಂಕಂಡ್ ಅವರು ಬರೆದುಕೊಂಡಿದ್ದು, ಕೆಜಿಎಫ್ ಚಾಪ್ಟರ್ 2 ಚಿತ್ರ 1000 ಕೋಟಿ ಬಾಚಿ ಮುನ್ನಡೆಯುತ್ತಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಈ ಸಾಧನೆ ಮಾಡಿದ ನಾಲ್ಕನೇ ಚಿತ್ರ ಎಂಬ ಕೀರ್ತಿಗೆ ಕೆಜಿಎಫ್ 2 ಭಾಜನವಾಗಿದೆ. ಈ ಹಿಂದೆ ದಂಗಲ್, ಬಾಹುಬಲಿ-2 ಮತ್ತು ಇತ್ತೀಚೆಗೆ ತೆರೆಕಂಡ RRR ಚಿತ್ರಗಳು ಈ ಸಾಧನೆ ಮಾಡಿದ್ದವು. ಆದರೀಗ ಈ ಚಿತ್ರಗಳ ಸಾಲಿಗೆ ಕೆಜಿಎಫ್ 2 ಕೂಡ ಸೇರ್ಪಡೆಯಾಗಿದೆ. ನಾಲ್ಕು ಅಂಕಿಗಳ ಗಳಿಕೆ ಕಂಡ ಮೊದಲ ಕನ್ನಡ ಮೂಲದ ಚಿತ್ರ. ನಿಜವಾಗಿಯೂ ಐತಿಹಾಸಿಕ ಎಂದು ಅವರು ಬಣ್ಣಿಸಿದ್ದಾರೆ.
ಇದನ್ನೂ ಓದಿ: ಕೆಜಿಎಫ್ 2 ರಣಾರ್ಭಟ: ಹಿಂದಿಯ ಹಳೆಯ ದಾಖಲೆಗಳೆಲ್ಲ ಧೂಳಿಪಟ, 7 ದಿನಕ್ಕೆ 250 ಕೋಟಿ. ಒಟ್ಟಾರೆ 720 ಕೋಟಿ ರೂ. ಕಲೆಕ್ಷನ್!
ಕೆಜಿಎಫ್ ಚಾಪ್ಟರ್ 2 ಚಿತ್ರ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಎರಡನೇ ವಾರದಲ್ಲಿ 203 ಕೋಟಿ ರೂ. ಗಳಿಕೆ ಮಾಡಿದ್ದು, ಕಳೆದ ವಾರಾಂತ್ಯಕ್ಕೆ 826 ಕೋಟಿ. ಗಳಿಕೆ ಮಾಡಿತ್ತು. ಬಿಡುಗಡೆಯಾದಾಗಿನಿಂದ, ಕೆಜಿಎಫ್ ಚಾಪ್ಟರ್ 2 ಸತತವಾಗಿ ನಾಲ್ಕು ದಿನಗಳವರೆಗೆ ಪ್ರತಿದಿನ ಶತಕ (100 ಕೋಟಿ ರೂ ಗಳಿಕೆ)ವನ್ನು ತಲುಪಿದ ಭಾರತದ ಮೊದಲ ಚಲನಚಿತ್ರವಾಗಿದೆ.
#KGF2 shows amazing hold, despite two prominent films [#Runway34 and #Heropanti2] invading the marketplace... The trends suggest, biz will multiply over the weekend + #Eid holidays... [Week 3] Fri 4.25 cr. Total: ₹ 353.06 cr. #India biz. #Hindi pic.twitter.com/FqMrKe23YZ
— taran adarsh (@taran_adarsh) April 30, 2022
ಇದು ಯಾವುದೇ ಹಿಂದಿ ಚಲನಚಿತ್ರದ ಅತ್ಯಧಿಕ ಆರಂಭಿಕ ದಿನ, ಆರಂಭಿಕ ವಾರಾಂತ್ಯ ಮತ್ತು ಆರಂಭಿಕ ವಾರದ ಗಳಿಕೆಯನ್ನು ಮೀರಿಸಿದೆ. ಅಂತೆಯೇ ಇದು ಇತಿಹಾಸದಲ್ಲಿ ಹಿಂದಿಯಲ್ಲಿ ಆರ್ಆರ್ಆರ್ ಮತ್ತು ಬಾಹುಬಲಿ 2 ನಂತರ ರೂ 250 ಕೋಟಿ ನಿವ್ವಳ ಮೈಲಿಗಲ್ಲನ್ನು ಮೀರಿದ ಅತ್ಯಂತ ವೇಗದ ಚಲನಚಿತ್ರವಾಗಿದೆ.
ಇದನ್ನೂ ಓದಿ: ಕೆಜಿಎಫ್-2 ಸಿನಿಮಾ ನನ್ನ ಸ್ವಾಮರ್ಥ್ಯವನ್ನು ಮತ್ತೆ ನೆನಪಿಸಿತು: ಸಂಜಯ್ ದತ್
ಅಂತೆಯೇ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಭಾರತದಲ್ಲಿ ಅತಿ ಹೆಚ್ಚು ಓಪನಿಂಗ್ ಕಲೆಕ್ಷನ್ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಲ್ಲದೆ ಟೈಗರ್ ಜಿಂದಾ ಹೈ, PK ಮತ್ತು ಸಂಜು ಚಿತ್ರಗಳ ಜೀವಿತಾವಧಿಯ ಗಳಿಕೆಗಳನ್ನು ಹಿಂದಿಕ್ಕಿ ಮೂರನೇ ಅತಿ ಹೆಚ್ಚು ಗಳಿಕೆಯ ಹಿಂದಿ ಚಲನಚಿತ್ರವಾಗಿದೆ. ಟೈಗರ್ ಜಿಂದಾ ಹೈ, ಪಿಕೆ ಮತ್ತು ಸಂಜು ಕ್ರಮವಾಗಿ 339.16 ಕೋಟಿ, 340.80 ಕೋಟಿ ಮತ್ತು 342.53 ಕೋಟಿ ಒಟ್ಟು ಕಲೆಕ್ಷನ್ ಮಾಡಿದೆ.