'ತಿಮ್ಮಯ್ಯ & ತಿಮ್ಮಯ್ಯ' ಸಿನಿಮಾ ನನ್ನ ಹೃದಯಕ್ಕೆ ಹತ್ತಿರವಾಗಿ ಉಳಿಯುತ್ತದೆ: ದಿಗಂತ್
ರಿಯಲ್ ಲೈಫ್‌ನ ಜೋಡಿಗಳು ತೆರೆಯ ಮೇಲೂ ಜೋಡಿಯಾಗಿ ಮೋಡಿ ಮಾಡುವುದನ್ನು ನೋಡುವುದು ಸಂತೋಷವನ್ನುಂಟು ಮಾಡುತ್ತದೆ. ಅಂತಹ ಜೋಡಿಗಳಲ್ಲಿ ಒಬ್ಬರಾದ ದಿಗಂತ್ ಮತ್ತು ಐಂದ್ರಿತಾ ರೇ, ಅವರು ಮುಂದಿನ ಚಿತ್ರವಾದ ತಿಮಯ್ಯ & ತಿಮಯ್ಯ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ.
Published: 01st December 2022 04:26 PM | Last Updated: 02nd December 2022 01:33 PM | A+A A-

ತಿಮ್ಮಯ್ಯ & ತಿಮ್ಮಯ್ಯ ಚಿತ್ರದಲ್ಲಿ ದಿಗಂತ್ ಮತ್ತು ಅನಂತ್ ನಾಗ್
ರಿಯಲ್ ಲೈಫ್‌ನ ಜೋಡಿಗಳು ತೆರೆಯ ಮೇಲೂ ಜೋಡಿಯಾಗಿ ಮೋಡಿ ಮಾಡುವುದನ್ನು ನೋಡುವುದು ಸಂತೋಷವನ್ನುಂಟು ಮಾಡುತ್ತದೆ. ಅಂತಹ ಜೋಡಿಗಳಲ್ಲಿ ಒಬ್ಬರಾದ ದಿಗಂತ್ ಮತ್ತು ಐಂದ್ರಿತಾ ರೇ, ಅವರು ಮುಂದಿನ ಚಿತ್ರವಾದ ತಿಮಯ್ಯ & ತಿಮಯ್ಯ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್ ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಅನಂತ್ ನಾಗ್ ಮತ್ತು ಶುಭ್ರಾ ಅಯ್ಯಪ್ಪ ಕೂಡ ನಟಿಸಿದ್ದಾರೆ.
ಈ ವಾರ ಚಲನಚಿತ್ರದ ಬಿಡುಗಡೆಗೂ ಮುನ್ನ ದಂಪತಿ ತಮ್ಮ ಅನುಭವವನ್ನು ಸಿನಿಮಾ ಎಕ್ಸ್‌ಪ್ರೆಸ್ ಜೊತೆಗೆ ಹಂಚಿಕೊಂಡಿದ್ದಾರೆ.
'ಟ್ರೇಲರ್ ಅನ್ನು ನೋಡಿದರೆ, ಚಿತ್ರವು ವಿವಿಧ ಭಾವನೆಗಳ ಮಿಶ್ರಣ ಎಂಬುದನ್ನು ಸುಲಭವಾಗಿ ವೀಕ್ಷಿಸಬಹುದು. ಸಾಕಷ್ಟು ಹಾಸ್ಯ ಮತ್ತು ಬಲವಾದ ಭಾವನೆಗಳಿವೆ. ಸಂಬಂಧಗಳ ಬಗ್ಗೆ ಒಳ್ಳೆಯ ಸಂದೇಶವಿದೆ. ಮುಖ್ಯವಾಗಿ ಅನಂತ್ ಸರ್ ಮತ್ತು ದಿಗಂತ್ ಅವರ ಕಾಂಬಿನೇಷನ್ ತಿಮ್ಮಯ್ಯ & ತಿಮ್ಮಯ್ಯ ಸಿನಿಮಾಗೆ ಹೆಚ್ಚುವರಿ ಆಕರ್ಷಣೆಯಾಗಿದೆ' ಎಂದು ಐಂದ್ರಿತಾ ಹೇಳುತ್ತಾರೆ.
ಚಿತ್ರದ ವಿವಿಧ ಪಾತ್ರಗಳ ಬಗ್ಗೆ ಮಾತನಾಡಿದ ದಿಗಂತ್, 'ಚಿತ್ರದಲ್ಲಿನ ಒಂದು ಬೈಕ್ ಕೂಡ ಹಳೆಯ ಕಥೆಯೊಂದನ್ನು ಹೊಂದಿರುತ್ತದೆ ಎನ್ನುತ್ತಾರೆ.
'ಉಡುಪುಗಳು ಸಹ ಪಾತ್ರಗಳಿಗೆ ಒಂದು ನಿರ್ದಿಷ್ಟ ಗುಣಮಟ್ಟವನ್ನು ನೀಡುತ್ತವೆ. ಬೈಕಿನಂತೆಯೇ ಕೆಫೆಯು ಪ್ರಮುಖ ಪಾತ್ರ ವಹಿಸುತ್ತದೆ. ಸಂಜಯ್ ಶರ್ಮಾ ಮತ್ತು ಅವರ ಪತ್ನಿ ವಿನೀತಾ ಅವರು ತಮ್ಮ ಹೃದಯ ಮತ್ತು ಆತ್ಮವನ್ನು ಈ ಚಿತ್ರದಲ್ಲಿ ಇರಿಸಿದ್ದಾರೆ ಮತ್ತು ಆರ್ಟ್ಸ್ ಮತ್ತು ಉಡುಪುಗಳಿಗಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆ' ಎನ್ನುತ್ತಾರೆ ಐಂದ್ರಿತಾ.
ಇದನ್ನೂ ಓದಿ: ತಿಮ್ಮಯ್ಯ & ತಿಮ್ಮಯ್ಯ: ಮತ್ತೆ ಬಂದ್ರು ವಜ್ರಕಾಯದ ಬೆಡಗಿ ಶುಭ್ರಾ ಅಯ್ಯಪ್ಪ
ಹಿರಿಯ ತಿಮ್ಮಯ್ಯ ಪಾತ್ರದಲ್ಲಿ ಅನಂತ್ ನಾಗ್ ನಟಿಸಿದ್ದರೆ, ವಿನ್ಸಿ ತಿಮ್ಮಯ್ಯನಾಗಿ ದಿಗಂತ್ ನಟಿಸಿದ್ದಾರೆ ಮತ್ತು ಅವರ ನೆರೆಹೊರೆಯವರಾದ ಜ್ಯೋತ್ಸನಾ ಪಾತ್ರದಲ್ಲಿ ಐಂದ್ರಿತಾ ನಟಿಸಿದ್ದಾರೆ. ಶುಭ್ರ ಅಯ್ಯಪ್ಪ ಅವರು ವಿನ್ಸಿಯ ಹುಡುಗಿ ಸೌಮ್ಯ ಪಾತ್ರದಲ್ಲಿ ನಟಿಸಿದ್ದಾರೆ. ವಿನ್ಸಿ ತನ್ನ ಪೂರ್ವಜರ ಆಸ್ತಿಯನ್ನು ಮಾರಾಟ ಮಾಡಲು ಬಯಸುತ್ತಾನೆ ಮತ್ತು ತನ್ನ ಫಿಯಾನ್ಸೆಯೊಂದಿಗೆ ವಿದೇಶಕ್ಕೆ ಹೋಗುವುದನ್ನು ಈ ಚಿತ್ರ ಹೊಂದಿದೆ. ವಿನ್ಸಿ ತನ್ನ ಅಜ್ಜನನ್ನು ಮೊದಲ ಬಾರಿಗೆ ಭೇಟಿಯಾದಾಗ, ಮತ್ತು ಇಬ್ಬರ ಪ್ರಯಾಣವು ಪ್ರಾರಂಭವಾಗುತ್ತದೆ.
ದಿಗಂತ್ ಅವರ ವೃತ್ತಿಜೀವನದಲ್ಲಿ ಈ ಚಿತ್ರಕ್ಕೆ ಎಷ್ಟು ಮಹತ್ವವಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ತಿಮಯ್ಯ & ತಿಮ್ಮಯ್ಯ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಸಿನಿಮಾ. ಹತ್ತು ವರ್ಷಗಳ ನಂತರ ಹಿಂತಿರುಗಿ ನೋಡಿದಾಗ ನಾನು ಈ ಚಿತ್ರವನ್ನು ಮಾಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತದೆ. ನಿರ್ದೇಶಕ ಸಂಜಯ್ ಅವರನ್ನು ಸೌತೆಕಾಯಿಯಂತೆ ಕೂಲ್ ಎನ್ನುತ್ತಾರೆ.
'ನನ್ನ ಕನ್ನಡ ಸ್ಥಳೀಯರಷ್ಟು ಪರಿಪೂರ್ಣವಾಗಿಲ್ಲದಿದ್ದರೂ, ನಿರ್ದೇಶಕರು ಅದನ್ನು ಹೊರಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಾಕಷ್ಟು ಡಾಕ್ಯುಮೆಂಟರಿಗಳನ್ನು ಮಾಡಿರುವ ಅವರು ಕೆಫೆಗಳ ಬಗ್ಗೆ ಸಂಶೋಧನೆಯನ್ನೂ ಮಾಡಿದ್ದಾರೆ. ಆಗಲೇ ತಿಮ್ಮಯ್ಯ & ತಿಮ್ಮಯ್ಯನವರ ಕಥೆ ಅವರ ಮನಸ್ಸಿನಲ್ಲಿ ಮೂಡಿತು. ಅವರು ತುಂಬಾ ತಾಳ್ಮೆಯಿಂದ ಇರುತ್ತಾರೆ. ಅವರು ಬಲವಾದ ವೃತ್ತಿಪರ ನೈತಿಕತೆಗಳನ್ನು ಹೊಂದಿದ್ದಾರೆ ಮತ್ತು ಕಾರ್ಪೊರೇಟ್ ಶೈಲಿಯಲ್ಲಿ ಕೆಲಸ ಮಾಡಿದರು' ಎಂದು ಐಂದ್ರಿತಾ ಹೇಳುತ್ತಾರೆ.
ಇದನ್ನೂ ಓದಿ: ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ: ಮೊಮ್ಮಗನನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ವಿಶಿಷ್ಟ ಪಾತ್ರದಲ್ಲಿ ಅನಂತ್ ನಾಗ್!
ಮುಂಗಾರು ಮಳೆ, ಗಾಳಿಪಟ, ಪಂಚರಂಗಿ, ಮನಸಾರೆ ಮತ್ತು ಗಾಳಿಪಟ 2 ನಂತರ ದಿಗಂತ್ ಮತ್ತು ಅನಂತ್ ನಾಗ್ ನಡುವಿನ ಐದನೇ ಸಹಯೋಗ ಇದಾಗಿದೆ. 'ಅವರ ಮೋಡಿ ಅದ್ಭುತವಾಗಿದೆ ಮತ್ತು ನಾವು ಪರಸ್ಪರ ಪೂರಕವಾಗಿರುತ್ತೇವೆ. ವಾಸ್ತವವಾಗಿ, ಅವರೊಂದಿಗಿನ ನನ್ನ ಹಿಂದಿನ ಎಲ್ಲಾ ಸಿನಿಮಾಗಳು ಕ್ಲಿಕ್ ಆಗಿವೆ ಮತ್ತು ಈ ಚಿತ್ರದಲ್ಲೂ ಅದು ಮುಂದುವರಿಯುತ್ತದೆ ಎಂದು ನಾನು ಭಾವಿಸುತ್ತೇನೆ. ಅನಂತ್ ನಾಗ್ ಸರ್ ಅವರು 3 ಪುಟಗಳ ಸಂಭಾಷಣೆಯನ್ನು ಸುಲಭವಾಗಿ ಹೇಳಬಲ್ಲರು ಮತ್ತು ದೃಶ್ಯಗಳನ್ನು ಸುಧಾರಿಸಬಲ್ಲರು. ಅವರ ಅಭಿನಯದ ಮಟ್ಟದಲ್ಲಿ ನಾನು ಅಭಿನಯಿಸಬಹುದೇ ಎಂದು ನಾನು ಹೆದರುತ್ತಿದ್ದೆ' ಎನ್ನುತ್ತಾರೆ ದಿಗಂತ್.
'ದಿಗಂತ್ ಮತ್ತು ಅನಂತ್ ಸರ್ ನಡುವೆ ತುಂಬಾ ಹೊಂದಾಣಿಕೆಯಿದೆ. ಅನಂತ್ ಸರ್ ಅವರನ್ನು ಎದುರಿಸಬೇಕಾದಾಗ ನಾನು ನರ್ವಸ್ ಆಗಿದ್ದೆ. ನಾನು ಅವರ ಮುಂದೆ ತಪ್ಪು ಮಾಡಲು ಬಯಸಲಿಲ್ಲ, ವಿಶೇಷವಾಗಿ ನನ್ನ ಕನ್ನಡ ಸಂಭಾಷಣೆಗಳೊಂದಿಗೆ. ಕೆಲವು ದೃಶ್ಯಗಳ ನಂತರ, ನಾನು ಹರಿವಿನಲ್ಲಿದ್ದೆ' ಎಂದು ಅವರು ಹೇಳುತ್ತಾರೆ.
ದಿಗಂತ್ ರಿಯಲ್ ಲೈಫ್‌ನಲ್ಲಿ ಜೂನಿಯರ್ ತಿಮ್ಮಯ್ಯನಿಗೆ ಸಾಮ್ಯತೆ ಇದೆಯಾ? ಎಂದು ಕೇಳಿದ್ದಕ್ಕೆ ಉತ್ತರಿಸಿದ ದಿಗಂತ್, 'ವಿನ್ಸಿ ತಿಮ್ಮಯ್ಯ ಅವರು ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ ಮತ್ತು ಬಹಳಷ್ಟು ವ್ಯವಹಾರಗಳಿಗೆ ಕೈ ಹಾಕಿದ್ದಾರೆ, ಆದರೆ ಯಶಸ್ಸು ಸಿಕ್ಕಿಲ್ಲ. ಆತ ಬೈಕರ್ ಮತ್ತು ನಿರಾತಂಕ ಮತ್ತು ಈ ಪಾತ್ರಕ್ಕೆ ನನಗೆ ಸಾಕಷ್ಟು ಹೋಲಿಕೆಗಳಿವೆ' ಎನ್ನುತ್ತಾರೆ.
ಬಾಲಕೃಷ್ಣ ತೋಟ ಅವರ ಛಾಯಾಗ್ರಹಣ ಮತ್ತು ಅನೂಪ್ ಸೀಳಿನ್ ಅವರ ಸಂಗೀತದೊಂದಿಗೆ, ರಾಜೇಶ್ ಶರ್ಮಾ ಅವರು ತಿಮ್ಮಯ್ಯ & ತಿಮ್ಮಯ್ಯ ಸಿನಿಮಾವನ್ನು ನಿರ್ಮಿಸಿದ್ದಾರೆ. 'ಇದು ತಾಜಾ ವಿಷಯವಾಗಿದೆ ಮತ್ತು ಅಜ್ಜ ಮತ್ತು ಅವರ ಮೊಮ್ಮಗನ ನಡುವಿನ ಸುಂದರವಾದ ಸಂಬಂಧದ ಬಗ್ಗೆ ಮಾತನಾಡುತ್ತದೆ. ಕೌಟುಂಬಿಕ ಬಾಂಧವ್ಯದ ಪ್ರಾಮುಖ್ಯತೆಯನ್ನು ಈ ಚಿತ್ರ ಎತ್ತಿ ತೋರಿಸಲಿದೆ' ಎಂದು ದಿಗಂತ್ ಹೇಳಿದರು.