'ಥಗ್ಸ್ ಆಫ್ ರಾಮಘಡ' ಮೂಲಕ ನಿರ್ದೇಶಕರಾಗಿ ಕಾರ್ತಿಕ್ ಮರಳಭಾವಿ ಎಂಟ್ರಿ!

'ಥಗ್ಸ್ ಆಫ್ ರಾಮಘಡ’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ‘ನಗು ನಗುತ ಆವರಿಸೋ ಈ ಹುಡುಗಿ’ ಹಾಡನ್ನು ದಿಯಾ ಖ್ಯಾತಿಯ ನಾಯಕ ನಟ ಪೃಥ್ವಿ ಅಂಬಾರ್ ಬಿಡುಗಡೆ ಮಾಡಿದರು.
ಥಗ್ಸ್ ಆಫ್ ರಾಮಘಡ ಸಿನಿಮಾ ಸ್ಟಿಲ್
ಥಗ್ಸ್ ಆಫ್ ರಾಮಘಡ ಸಿನಿಮಾ ಸ್ಟಿಲ್

'ಥಗ್ಸ್ ಆಫ್ ರಾಮಘಡ’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ‘ನಗು ನಗುತ ಆವರಿಸೋ ಈ ಹುಡುಗಿ’ ಹಾಡನ್ನು ದಿಯಾ ಖ್ಯಾತಿಯ ನಾಯಕ ನಟ ಪೃಥ್ವಿ ಅಂಬಾರ್ ಬಿಡುಗಡೆ ಮಾಡಿದರು. ನಿರ್ದೇಶಕ ಕಾರ್ತಿಕ್ ಮರಳಭಾವಿ ನಿರ್ದೇಶಿಸಿರುವ ಮೊದಲ ಸಿನಿಮಾ ಇದು.

ನಗು ನಗುತಾ ಆವರಿಸೋ ಈ ಹುಡುಗಿ’ ಹಾಡಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಈ ಹಾಡಿಗೆ ರಾಜೇಶ್ ಕೃಷ್ಣನ್, ಅನುರಾಧ ಭಟ್ ದನಿಯಾಗಿದ್ದಾರೆ. ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜನೆ ಈ ಹಾಡಿಗಿದೆ. ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮೂವರು ಕೂಡ ರಂಗಭೂಮಿ ಕಲಾವಿದರಾಗಿದ್ದು, ಈ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ್ದಾರೆ. ಸೂರ್ಯ ಕಿರಣ್, ಪ್ರಭು ಹೊಸದುರ್ಗ, ಅಶ್ವಿನ್ ಹಾಸನ್,ಚಂದನ್ ರಾಜ್, ಮಹಾಲಕ್ಷ್ಮಿ, ಟೈಗರ್ ಗಂಗ, ಜಗದೀಶ್, ಸೂರ್ಯಕಿರಣ್, ರಾಘವೇಂದ್ರ, ವಿಶಾಲ್ ಪಾಟೀಲ್, ರವಿ ಸಾಲಿಯನ್, ಲೋಕೇಶ್ ಗೌಡ, ಭೀಷ್ಮ, ಸುಧೀನ್ ನಾಯರ್ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

<strong>ಕಾರ್ತಿಕ್ ಮರಳಭಾವಿ</strong>
ಕಾರ್ತಿಕ್ ಮರಳಭಾವಿ

ಹಾಡು ಬಿಡುಗಡೆ ಮಾತನಾಡಿದ ನಟ ಪೃಥ್ವಿ ಅಂಬಾರ್, ‘ಥಗ್ಸ್ ಆಫ್ ರಾಮಘಡ’ ತುಂಬಾ ಕ್ರಿಯೇಟಿವ್ ತಂಡ ಅಂತ ಹೇಳಬಹುದು. ಪ್ರತಿ ಶಾಟ್, ಎಲಿಮೆಂಟ್‌ನಲ್ಲೂ ಹೊಸತನವಿದೆ. ಹಾಡು ನೋಡಿ ತುಂಬಾ ಖುಷಿ ಆಯಿತು. ನಿರ್ದೇಶಕರು ತುಂಬಾ ಚೆನ್ನಾಗಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ’ ಎಂದರು.

‘ಮೂಲತಃ ನಾನು ಯಾದಗಿರಿಯವನು. ಈ ಚಿತ್ರದ ಕಥೆ ಉತ್ತರ ಕರ್ನಾಟಕ ಭಾಗದಲ್ಲಿ 1995ರಲ್ಲಿ ನಡೆದ ಸತ್ಯ ಘಟನೆ ಆಧರಿಸಿದೆ. ಅದಕ್ಕೆ ಒಂದಿಷ್ಟು ಸಿನಿಮೀಯ ಸ್ಪರ್ಶ ಕೊಟ್ಟು ಕ್ರೈಂ ಕಲ್ಟ್ ಕಥಾಹಂದರದ ಸಿನಿಮಾ ಮಾಡಿದ್ದೇವೆ. ಉತ್ತರ ಕರ್ನಾಟಕ ಭಾಗದ ಒಂದು ಚಿಕ್ಕ ಹಳ್ಳಿಯಲ್ಲಿ ನಡೆಯುವ ಕಥೆ ಇದು. ಅದಕ್ಕೆಂದೇ ಪೂರ್ತಿ ಸಿನಿಮಾವನ್ನು ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಣ ನಡೆಸಲಾಗಿದೆ. ಆದಷ್ಟು ನೈಜವಾಗಿಯೇ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದೇವೆ. ಮುಂದಿನ ವರ್ಷ ಸಿನಿಮಾ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ’ ಎಂದು ನಿರ್ದೇಶಕ ಕಾರ್ತಿಕ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ಚಂದನ್ ರಾಜ್, ಅಶ್ವಿನ್ ಹಾಸನ್, ಮತ್ತು ಮಹಾಲಕ್ಷ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಥಗ್ಸ್ ಆಫ್ ರಾಮಘಡದಲ್ಲಿ ರಂಗಭೂಮಿ ಕಲಾವಿದರಾದ ಪ್ರಭು ಹೊಸದುರ್ಗ, ಟೈಗರ್ ಗಂಗಾ, ಜಗದೀಶ್ ಮತ್ತು ಸೂರ್ಯಕಿರಣ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com