ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ 'ತಿಮ್ಮನ ಮೊಟ್ಟೆಗಳು' ಸಿನಿಮಾ ಶೂಟಿಂಗ್ ಮುಕ್ತಾಯ
ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ಮುಂಬರುವ ತಿಮ್ಮನ ಮೊಟ್ಟೆಗಳು ಸಿನಿಮಾದ ಚಿತ್ರೀಕರಣ ಮುಗಿದಿದೆ. ಈ ಹಿಂದೆ ಹೊಂಬಣ್ಣ ಮತ್ತು ಎಂಥಾ ಕಥೆ ಮಾರಾಯ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕರು ಇದೀದ ತಿಮ್ಮನ ಮೊಟ್ಟೆಗಳು ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
Published: 07th December 2022 04:03 PM | Last Updated: 07th December 2022 05:17 PM | A+A A-

ತಿಮ್ಮನ ಮೊಟ್ಟೆಗಳು ಸಿನಿಮಾದ ಪೋಸ್ಟರ್
ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ಮುಂಬರುವ ತಿಮ್ಮನ ಮೊಟ್ಟೆಗಳು ಸಿನಿಮಾದ ಚಿತ್ರೀಕರಣ ಮುಗಿದಿದೆ. ಈ ಹಿಂದೆ ಹೊಂಬಣ್ಣ ಮತ್ತು ಎಂಥಾ ಕಥೆ ಮಾರಾಯ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕರು ಇದೀದ ತಿಮ್ಮನ ಮೊಟ್ಟೆಗಳು ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
ತಿಮ್ಮನ ಮೊಟ್ಟೆಗಳು ಸಿನಿಮಾ ರಕ್ಷಿತ್ ತೀರ್ಥಹಳ್ಳಿ ಅವರ ಸ್ವರಚಿತ ಕಾಡಿನ ನೆಂಟರು ಕಾದಂಬರಿಯನ್ನು ಆಧರಿಸಿದ್ದು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಬೆಟ್ಟಗುಡ್ಡಗಳಲ್ಲಿ ವಾಸಿಸುವ ಜನರ ಜೀವನಶೈಲಿ, ಸ್ವಭಾವ, ಮಾನವೀಯ ಮೌಲ್ಯಗಳನ್ನು ಚಿತ್ರ ಒಳಗೊಂಡಿದೆ.
ತಿಮ್ಮನ ಮೊಟ್ಟೆಗಳು ಸಿನಿಮಾವನ್ನು ಶಿವಮೊಗ್ಗ ಮೂಲದ ಅಮೆರಿಕ ನಿವಾಸಿ ಆದರ್ಶ ಅಯ್ಯಂಗಾರ್ ಅವರು ಶ್ರೀ ಕೃಷ್ಣ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ಸಿನಿಮಾ ಆಗುತ್ತಿದೆ ರಕ್ಷಿತ್ ತೀರ್ಥಹಳ್ಳಿ ಅವರ 'ಕಾಡಿನ ನೆಂಟರು' ಕಾದಂಬರಿ!
ತಿಮ್ಮನ ಮೊಟ್ಟೆಗಳು ತಾರಾಬಳಗದಲ್ಲಿ ಶೃಂಗೇರಿಯ ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಕರ್, ಪ್ರಗತಿ, ವಿನಯ್ ಕಣಿವೆ ಮತ್ತು ಮಾಸ್ಟರ್ ಶ್ರೀಹರ್ಷಾ ಮುಂತಾದವರು ನಟಿಸಿದ್ದಾರೆ.
ಪ್ರವೀಣ್ ಎಸ್ ಅವರ ಛಾಯಾಗ್ರಹಣ ಹಾಗೂ ಹೇಮಂತ್ ಜೋಯಿಸ್ ಅವರ ಸಂಗೀತ ಚಿತ್ರಕ್ಕಿದೆ.