ಸಾಮಾಜಿಕ-ರಾಜಕೀಯ ಕಥೆಯುಳ್ಳ 'ಪ್ರಜೆಯೇ ಪ್ರಭು' ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ನಟನೆ
ಸ್ಯಾಂಡಲ್‌ವುಡ್‌ನಲ್ಲಿ ಅತ್ಯಂತ ಬ್ಯುಸಿಯಾಗಿರುವ ನಟಿಯರಲ್ಲಿ ಪ್ರಿಯಾಂಕಾ ಉಪೇಂದ್ರ ಕೂಡ ಒಬ್ಬರು. ಈಗಾಗಲೇ ‘ಉಗ್ರಾವತಾರ’ ಮತ್ತು ‘ಲೈಫ್ ಈಸ್ ಬ್ಯೂಟಿಫುಲ್’ ಚಿತ್ರಗಳನ್ನು ಪೂರ್ಣಗೊಳಿಸಿರುವ ಅವರು, ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.
Published: 14th December 2022 01:25 PM | Last Updated: 14th December 2022 03:56 PM | A+A A-

ಪ್ರಜೆಯೇ ಪ್ರಭು ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ
ಸ್ಯಾಂಡಲ್‌ವುಡ್‌ನಲ್ಲಿ ಅತ್ಯಂತ ಬ್ಯುಸಿಯಾಗಿರುವ ನಟಿಯರಲ್ಲಿ ಪ್ರಿಯಾಂಕಾ ಉಪೇಂದ್ರ ಕೂಡ ಒಬ್ಬರು. ಈಗಾಗಲೇ ‘ಉಗ್ರಾವತಾರ’ ಮತ್ತು ‘ಲೈಫ್ ಈಸ್ ಬ್ಯೂಟಿಫುಲ್’ ಚಿತ್ರಗಳನ್ನು ಪೂರ್ಣಗೊಳಿಸಿರುವ ಅವರು, ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.
'ಪ್ರಜೆಯೇ ಪ್ರಭು' ಎಂಬ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ನಟಿಸುತ್ತಿದ್ದಾರೆ. ಚಿತ್ರದ ಹೆಸರೇ ಹೇಳುವಂತೆ ಇದೊಂದು ಸಾಮಾಜಿಕ-ರಾಜಕೀಯ ಕಥೆಯುಳ್ಳ ಚಿತ್ರವಾಗಿದೆ.
ಈ ಚಿತ್ರದಲ್ಲಿ ಪ್ರಿಯಾಂಕಾ ಮೊದಲ ಬಾರಿಗೆ ರಾಜಕಾರಣಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜಕಾರಣಿಯಾಗಿ ಅವರು ಏನೆಲ್ಲಾ ಮಾಡುತ್ತಾರೆ ಮತ್ತು ಪ್ರಜೆಗಳಿಗೆ ಹೇಗೆ ಸ್ಪಂದಿಸುತ್ತಾರೆ ಎಂಬ ವಿಷಯ ಇನ್ನಷ್ಟೇ ತಿಳಿಯಬೇಕಿದೆ.
ಸೌಭಾಗ್ಯ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಚಿತ್ರವನ್ನು ಸಾಯಿಲಕ್ಷ್ಮಣ್ ಅವರು ನಿರ್ದೇಶಿಸುತ್ತಿದ್ದಾರೆ. ಇದು ಸಾಯಿಲಕ್ಷ್ಮಣ್ ಅವರ ಚೊಚ್ಚಲ ನಿರ್ದೇಶಿತ ಚಿತ್ರವಾಗಿದೆ.
ಪ್ರಜೆಯೇ ಪ್ರಭು ಒಂದು ಸಾಮಾಜಿಕ-ರಾಜಕೀಯ ಥ್ರಿಲ್ಲರ್ ಮತ್ತು ಇದು ಮಹಿಳಾ ಕೇಂದ್ರಿತ ಕಥೆಯನ್ನು ಹೊಂದಿದೆ. ಹಲವು ಪಾತ್ರಗಳಲ್ಲಿ ನಾನು ನಟಿಸಿದ್ದೇನೆ. ಈ ಚಿತ್ರವು ಆಸಕ್ತಿದಾಯಕ ಕಥೆಯನ್ನು ಹೊಂದಿತ್ತು. ಹೀಗಾಗಿ ನಟಿಸಲು ಒಪ್ಪಿಕೊಂಡೆ ಎಂದು ಪ್ರಿಯಾಂಕಾ ಉಪೇಂದ್ರ ಅವರು ಹೇಳಿದ್ದಾರೆ.
Thank you https://t.co/Vx2qzWqHzh
— Priyanka Upendra (@priyankauppi) December 13, 2022
ಇದು ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು, ವಿದ್ಯಾವಂತ ಮಹಿಳೆಯೊಬ್ಬಳು ಭಾರತಕ್ಕೆ ಬರಲು ನಿರ್ಧರಿಸುತ್ತಾಳೆ. ಸಮಾಜದಲ್ಲಿ ಮತ್ತು ಜನರಲ್ಲಿ ಬದಲಾವಣೆಗಳ ತರಲು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾಳೆ. ಇದೊಂದು ಶಕ್ತಿಶಾಲಿ ಪಾತ್ರ. ಇದು ಯಾರನ್ನೂ ಆಧರಿಸಿಲ್ಲದಿದ್ದರೂ, ಪರಿಕಲ್ಪನೆಯು ಉಪೇಂದ್ರ ಅವರ ಪ್ರಜಾಕೀಯ ಪಕ್ಷವನ್ನು ಹೋಲುತ್ತದೆ ಎಂದು ಚಿತ್ರದ ಕುರಿತು ತಿಳಿಸಿದ್ದಾರೆ.
Prajaakaarmika Praja prabhu pic.twitter.com/Ce1NYpqas8
— Upendra (@nimmaupendra) August 17, 2017
ರಾಜಕೀಯದತ್ತ ತಮ್ಮ ಒಲವಿನ ಕುರಿತು ಮಾತನಾಡಿ, ಉಪೇಂದ್ರ ಅವರ ಪ್ರಜಾಕೀಯ ಪಕ್ಷ ಆರಂಭವಾದಾಗಿನಿಂದಲೂ ನಾನೂ ಕೂಡ ಅದರ ಭಾಗವಾಗಿದ್ದೇನೆ. ನಾವು ಪರಸ್ಪರ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತರುತ್ತೇವೆ. ಅವರನ್ನು ಭೇಟಿಯಾದ ಮೊದಲ ದಿನದಿಂದಲೂ ಅವರು ಜನರ ಸೇವೆ ಮಾಡುವ, ಬದಲಾವಣೆ ತರುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಸಮಾಜದಲ್ಲಿ ಬದಲಾವಣೆ ತರಲು ಸದಾ ಶ್ರಮಿಸಬೇಕು. ಮಹಿಳಾ ಸಮಸ್ಯೆಗಳು ಮತ್ತು ಶಿಕ್ಷಣ ವಿಚಾರಕ್ಕೆ ಬಂದಾಗ ನಾನು ಯಾವಾಗಲೂ ಅದರ ಪರ ಧ್ವನಯಾಗಿರುತ್ತೇನೆ. ಫೌಂಡೇಶನ್ ಮೂಲಕ ಈ ಕಾರ್ಯಗಳನ್ನು ಮಾಡಲಾಗುತ್ತದೆ. ಈ ವಿಷಯವನ್ನೇ ಚಿತ್ರವು ಹೊಂದಿದ್ದು, ಇದು ನನ್ನ ಆಸಕ್ತಿಯನ್ನು ಸೆಳೆಯಿತು ಎಂದಿದ್ದಾರೆ.
ಇದನ್ನೂ ಓದಿ: ಸನ್ನಿ ಲಿಯೋನ್ ಬಳಿಕ ಉಪೇಂದ್ರರ 'ಯುಐ' ಅಖಾಡಕ್ಕೆ ನಟಿ ರೀಷ್ಮಾ ನಾಣಯ್ಯ?

ಪ್ರಿಯಾಂಕಾ ಅಷ್ಟೇ ಅಲ್ಲದೆ, ಚಿತ್ರದಲ್ಲಿ ರವಿಶಂಕರ್, ಗಿರಿಜಾ ಲೋಕೇಶ್, ಯಶ್ ಶೆಟ್ಟಿ ಮತ್ತು ಚೆಲುವರಾಜು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ರಂಗಭೂಮಿ ಹಿನ್ನೆಲೆಯುಳ್ಳ ಕಲಾವಿದರನ್ನು ಕೂಡ ಒಳಗೊಂಡಿದೆ.
ಚಿತ್ರಕ್ಕೆ ವಿ.ನಾಗೇಂದ್ರಪ್ರಸಾದ್ ಸಂಗೀತ ನೀಡಿದ್ದು, ಕೆ ಎಂ ಇಂದ್ರ ಅವರು ಸಾಹಿತ್ಯ ಬರೆದಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ರಿಷಿಕೇಶ್ ಮತ್ತು ಸಹರಾ ರಂಜಿತ್ ನಿರ್ವಹಿಸಿದ್ದಾರೆ.
ಜನವರಿ ತಿಂಗಳಿನಲ್ಲಿ ಚಿತ್ರೀಕರಣ ಆರಂಭಿಸಲು ಚಿತ್ರ ತಂಡ ಮುಂದಾಗಿದ್ದು, ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ಸ್ಥಳಗಳನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಂಡಿದೆ.
ಇನ್ನು, 2023ರ ಮೊದಲ ಚಿತ್ರವಾಗಿ ಪ್ರಿಯಾಂಕಾ ಉಪೇಂದ್ರ ಅಭಿನಯದ ‘ಮಿಸ್ ನಂದಿನಿ’ ಬಿಡುಗಡೆಯಾಗಲಿದೆ. ಜನವರಿ 06ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಸದ್ಯದಲ್ಲೇ ಈ ಚಿತ್ರದ ಪ್ರಚಾರದ ಕೆಲಸಗಳಲ್ಲಿ ಪ್ರಿಯಾಂಕಾ ಭಾಗವಹಿಸುವ ಸಾಧ್ಯತೆ ಇದೆ.
ಇದಲ್ಲದೆ, ಲೈಫ್ ಈಸ್ ಬ್ಯೂಟಿಫುಲ್, ಉಗ್ರಾವತಾರ ಮತ್ತು ಡಿಟೆಕ್ಟಿವ್ ತೀಕ್ಷ ಇತರ ಚಿತ್ರಗಳಲ್ಲಿ ಕೂಡ ಪ್ರಿಯಾಂಕಾ ಉಪೇಂದ್ರ ನಟಿಸಿದ್ದು, ಈ ಚಿತ್ರಗಳ ನಿರ್ಮಾಣವು ವಿವಿಧ ಹಂತಗಳಲ್ಲಿವೆ.