ಪುಷ್ಫ ಸಿನಿಮಾದ ಸಾಮಿ ಸಾಮಿ ಹಾಡಿನ ದೃಶ್ಯ
ಪುಷ್ಫ ಸಿನಿಮಾದ ಸಾಮಿ ಸಾಮಿ ಹಾಡಿನ ದೃಶ್ಯ

'ಪುಷ್ಪ' ಬಿಡುಗಡೆಯಾಗಿ ವರ್ಷ; ಸಾಮಿ ಸಾಮಿ ಹಾಡಿಗಾಗಿ ಸಂಗೀತ ನಿರ್ದೇಶಕರಿಗೆ ಧನ್ಯವಾದ ತಿಳಿಸಿದ ರಶ್ಮಿಕಾ ಮಂದಣ್ಣ

'ಪುಷ್ಪ: ದಿ ರೈಸ್' ಸಿನಿಮಾ ಬಿಡುಗಡೆಯಾಗಿ ಶನಿವಾರಕ್ಕೆ (ಡಿ.17) ಒಂದು ವರ್ಷ ಪೂರೈಸಿದ್ದು, ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಚಿತ್ರ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.

ಮುಂಬೈ: 'ಪುಷ್ಪ: ದಿ ರೈಸ್' ಸಿನಿಮಾ ಬಿಡುಗಡೆಯಾಗಿ ಶನಿವಾರಕ್ಕೆ (ಡಿ.17) ಒಂದು ವರ್ಷ ಪೂರೈಸಿದ್ದು, ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಚಿತ್ರ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ನಟ ಅಲ್ಲು ಅರ್ಜುನ್, ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಮತ್ತು ಇತರರೊಂದಿಗೆ ತಾವೂ ಇರುವ ಖಾಸಗಿ ಜೆಟ್‌ನಲ್ಲಿರುವ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. 'ಸಾಮಿ ಸಾಮಿ ಹಾಡಿಗಾಗಿ ಡಿಎಸ್‌ಪಿ ಸರ್ ಜಿಗೆ ಧನ್ಯವಾದಗಳು' ಎಂದು ಬರೆದಿದ್ದಾರೆ.

ಸುಕುಮಾರ್ ನಿರ್ದೇಶನದ 'ಪುಷ್ಪ: ದಿ ರೈಸ್' ಆಕ್ಷನ್ ಎಂಟರ್‌ಟೈನರ್, 2021ರ ಡಿಸೆಂಬರ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಶನಿವಾರಕ್ಕೆ ಒಂದು ವರ್ಷವನ್ನು ಪೂರೈಸಿದೆ. ಸಿನಿಮಾವನ್ನು ನವೀನ್ ಯೆರ್‌ನೇನಿ ಮತ್ತು ವೈ. ರವಿಶಂಕರ್ ಅವರು ಮೈತ್ರಿ ಮೂವೀ ಮೇಕರ್ಸ್‌ನ ಮುತ್ತಂಶೆಟ್ಟಿ ಮೀಡಿಯಾ ಸಹಯೋಗದೊಂದಿಗೆ ನಿರ್ಮಿಸಿದ್ದಾರೆ.

ಇತ್ತೀಚೆಗೆ, ಚಿತ್ರತಂಡ ರಷ್ಯಾದ ಆವೃತ್ತಿಯ ಟ್ರೈಲರ್‌ ಅನ್ನು ಬಿಡುಗಡೆ ಮಾಡಿತ್ತು. ನಟ ಅಲ್ಲು ಅರ್ಜುನ್ ಮತ್ತು ಇತರರು ಅಂತರರಾಷ್ಟ್ರೀಯ ಪ್ರೀಮಿಯರ್‌ಗೆ ಹಾಜರಾಗಿದ್ದರು. ಮಾಸ್ಕೋ, ಸೇಂಟ್ ಪೀಟರ್ಸ್‌ಬರ್ಗ್, ಸೋಚಿ ಮತ್ತು ಇತರ ನಗರಗಳಲ್ಲಿನ ರಷ್ಯಾದ ನೆಟ್‌ವರ್ಕ್, ಸಿನಿಮಾ ಪಾರ್ಕ್‌ನ ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಪ್ರದರ್ಶಿಸಲಾಯಿತು.

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಎನಿಸಿಕೊಂಡಿತು. ಸಿನಿಮಾದ ಹಿಂದಿ ಆವೃತ್ತಿಯು ಅಮೆಡಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ.
ಕಳೆದ ತಿಂಗಳು 'ಪುಷ್ಪ 2' ಚಿತ್ರೀಕರಣ ಪ್ರಾರಂಭವಾಯಿತು. ಈವರೆಗೆ ಸಿನಿಮಾದ ಯಾವುದೇ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಆದರೆ, ಚಿತ್ರತಂಡ ಇದು 'ದೊಡ್ಡ ಮತ್ತು ಉತ್ತಮ' ಸಿನಿಮಾ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

ಪುಷ್ಪ: ದಿ ರೂಲ್ ಮೊದಲ ಭಾಗದಿಂದ ಫಹಾದ್ ಫಾಸಿಲ್ ಮತ್ತು ಉಳಿದ ಪ್ರಮುಖ ಪಾತ್ರಗಳನ್ನು ಹೊಂದಿರುತ್ತದೆ.

Related Stories

No stories found.

Advertisement

X
Kannada Prabha
www.kannadaprabha.com