ಜೈ ಎಲೆಕ್ಷನ್, ಓಟ್ ಹಾಕ್ರಿ... ಧನ್ ಧನಾ ದನ್: ಪ್ರಜಾ ರಾಜ್ಯಕ್ಕಾಗಿ ಉಪೇಂದ್ರ ಗಾಯನ
ಕಳೆದ ವಾರವಷ್ಟೇ ದೇವರಾಜ್, ಸುಧಾರಾಣಿ ಮುಂತಾದವರು ಅಭಿನಯಿಸಿರುವ ‘ಪ್ರಜಾರಾಜ್ಯ’ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಈಗ ಇದೇ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಈ ಹಾಡನ್ನು ಉಪೇಂದ್ರ ಬಿಡುಗಡೆ ಮಾಡಿದ್ದಾರೆ.
Published: 21st December 2022 10:48 AM | Last Updated: 21st December 2022 10:48 AM | A+A A-

ಉಪೇಂದ್ರ
ಕಳೆದ ವಾರವಷ್ಟೇ ದೇವರಾಜ್, ಸುಧಾರಾಣಿ ಮುಂತಾದವರು ಅಭಿನಯಿಸಿರುವ ‘ಪ್ರಜಾರಾಜ್ಯ’ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಈಗ ಇದೇ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಈ ಹಾಡನ್ನು ಉಪೇಂದ್ರ ಬಿಡುಗಡೆ ಮಾಡಿದ್ದಾರೆ.
ವಿಶೇಷವೆಂದರೆ, ‘ಜೈ ಎಲೆಕ್ಷನ್ ಧನ್ ಧನಾ ಧನ್ …’ ಎಂದು ಸಾಗುವ ಈ ಹಾಡನ್ನು ಉಪೇಂದ್ರ ಬಿಡುಗಡೆ ಮಾಡಿರುವುದಷ್ಟೇ, ಆ ಹಾಡನ್ನೂ ಅವರೇ ಹಾಡಿದ್ದಾರೆ. ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದರೆ, ವಿಜೇತ್ ಮಂಜಯ್ಯ ಸಂಗೀತ ಸಂಯೋಜಿಸಿದ್ದಾರೆ. ಇನ್ನು, ಆನಂದ್ ಆಡಿಯೂ ಮೂಲಕ ಈ ಹಾಡು ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ನಿರ್ಮಾಪಕ ವರದರಾಜು, ನಿರ್ದೇಶಕ ವಿಜಯ್ ಭಾರ್ಗವ್, ಸಂಗೀತ ನಿರ್ದೇಶಕ ವಿಜೇತ್ ಮಂಜಯ್ಯ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದಾರೆ.
ಈ ಹಾಡನ್ನು ಕುರಿತು ಮಾತನಾಡಿರುವ ಉಪೇಂದ್ರ, ‘ಯೋಗರಾಜ್ ಭಟ್ ಹಾಡನ್ನು ತುಂಬಾ ಚೆನ್ನಾಗಿ ಬರೆದಿದ್ದಾರೆ. ಎಲೆಕ್ಷನ್ ಕುರಿತಾದ ಈ ಹಾಡು ಸೊಗಸಾಗಿದೆ. ನೀವು ನಿಮ್ಮ ಮತವನ್ನು ದೇಶ, ರಾಜ್ಯಕ್ಕಾಗಿ ಎನ್ನುವುದಕ್ಕಿಂತ, ನನ್ನ ಮನೆ, ನನ್ನ ಮಕ್ಕಳು ಹಾಗೂ ನನ್ನ ಜೀವನಕ್ಕೆ ಬಹಳ ಮುಖ್ಯ ಎಂದು ಎಲ್ಲರೂ ಮತದಾನ ಮಾಡಿ’ ಎಂದು ಉಪೇಂದ್ರ ಹೇಳಿದ್ದಾರೆ.
ಮತದಾನ ಮತ್ತು ಚುನಾವಣೆಯ ಪ್ರಾಮುಖ್ಯತೆಯು ಮನೆಯಲ್ಲಿಯೇ ಪ್ರಾರಂಭವಾಗಬೇಕು, ಪ್ರತಿಯೊಬ್ಬ ವ್ಯಕ್ತಿಯೂ ಎಲ್ಲಾ ಕೆಲಸಗಳಿಗೆ ಸರ್ಕಾರವನ್ನು ಅವಲಂಬಿಸಬಾರದು ಎಂಬ ಸಂದೇಶ ನೀಡಲಾಗಿದೆ.
ಪ್ರಜಾಪ್ರಭುತ್ವದ ಮಹತ್ವ ಸಾರಲಿರುವ ಈ ಚಿತ್ರವನ್ನು ವೃತ್ತಿಯಲ್ಲಿ ವೈದ್ಯರಾಗಿರುವ ವರದರಾಜು ಡಿ.ಎನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡಿರುವ ‘ಪ್ರಜಾರಾಜ್ಯ’ ಚಿತ್ರದಲ್ಲಿ ದೇವರಾಜ್, ನಾಗಾಭರಣ, ಅಚ್ಯುತ್ ಕುಮಾರ್, ಸುಧಾರಾಣಿ, ಶೋಭರಾಜ್, ವಿಜಯ್ ಭಾರ್ಗವ, ದಿವ್ಯ ಗೌಡ, ತಬಲ ನಾಣಿ, ಸುಧಾ ಬೆಳವಾಡಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.