'ಮೇಡ್‌ ಇನ್‌ ಬೆಂಗಳೂರು’: ಹೊಸಬರ ಪ್ರಯತ್ನಕ್ಕೆ ಅನಂತ್‌ನಾಗ್, ಸಾಯಿಕುಮಾರ್ ಸಾಥ್!

'ಮೇಡ್‌ ಇನ್‌ ಬೆಂಗಳೂರು’ ಮೂಲಕ ಪ್ರದೀಪ್‌ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ತಮ್ಮ ಮೊದಲ ಚಿತ್ರದಲ್ಲಿ ಸ್ಟಾರ್ಟಪ್‌ ಆರಂಭಿಸಿ ಅದರಲ್ಲಿ ಸಕ್ಸಸ್‌ ಆದವರ ಬಗೆಗಿನ ಕಥೆಯನ್ನು ಹೇಳಿದ್ದಾರೆ.
ಮಧು ಸೂದನ್, ಅನಂತ್ ನಾಗ್ ಮತ್ತು ಪ್ರದೀಪ್ ಶಾಸ್ತ್ರಿ
ಮಧು ಸೂದನ್, ಅನಂತ್ ನಾಗ್ ಮತ್ತು ಪ್ರದೀಪ್ ಶಾಸ್ತ್ರಿ

'ಮೇಡ್‌ ಇನ್‌ ಬೆಂಗಳೂರು’ ಮೂಲಕ ಪ್ರದೀಪ್‌ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ತಮ್ಮ ಮೊದಲ ಚಿತ್ರದಲ್ಲಿ ಸ್ಟಾರ್ಟಪ್‌ ಆರಂಭಿಸಿ ಅದರಲ್ಲಿ ಸಕ್ಸಸ್‌ ಆದವರ ಬಗೆಗಿನ ಕಥೆಯನ್ನು ಹೇಳಿದ್ದಾರೆ. ಈ ಚಿತ್ರವು ವಿಶೇಷವಾಗಿ ನಗರಕ್ಕೆ ಬರುವ ಜನರಿಗೆ, ಅವರ ಕನಸುಗಳನ್ನು ಹುಡುಕುವ ಕಥೆ ಇದಾಗಿದೆ.

ತಮ್ಮ ಚಿತ್ರದಲ್ಲಿ ನಗರದ ಆಧ್ಯಾತ್ಮಿಕ ಭಾಗವನ್ನು ಹೈಲೈಟ್ ಮಾಡುತ್ತಿರುವ ನಿರ್ದೇಶಕರು, ಬೆಂಗಳೂರು ಕಾಸ್ಮೋಪಾಲಿಟನ್ ಸಿಟಿಯಾಗಿರಬಹುದು ಆದರೆ ಅದು ಖಂಡಿತವಾಗಿಯೂ ತನ್ನದೇ ಆದ ಗುರುತನ್ನು ಹೊಂದಿದೆ ಎಂದು ಹೇಳುತ್ತಾರೆ. “ಬೆಂಗಳೂರು ತನ್ನ ನಿವಾಸಿಗಳಿಗೆ ಹೇಗೆ ತಾಯ್ತನದ ಅನುಭವವನ್ನು ನೀಡುತ್ತದೆ ಎಂಬುದರ ಕುರಿತು ನಾವು ವ್ಯವಹರಿಸಿದ್ದೇವೆ. ನಾನು ಮೇಡ್ ಇನ್ ಬೆಂಗಳೂರು ಮೂಲಕ ಅನ್ವೇಷಿಸಲು ಪ್ರಯತ್ನಿಸಿದ್ದು ಇದನ್ನೇ ಎಂದಿದ್ದಾರೆ.

ಸಿನಿಮಾದಲ್ಲಿ ಮಧುಸೂದನ್‌ ಗೋವಿಂದ್‌ ಎಂಬವರು ನಾಯಕರಾಗಿ ನಟಿಸಿದ್ದಾರೆ. ಇದು ನಾಯಕರಾಗಿ ಇವರಿಗೆ ಮೊದಲ ಸಿನಿಮಾ. ಈ ಚಿತ್ರದಲ್ಲಿಅವರು ಯುವ ಉದ್ಯಮಿಯಾಗಿ ನಟಿಸುತ್ತಿದ್ದಾರೆ. ಒಳ್ಳೆಯ ಸಂಬಳವಿರುವ ಕೆಲಸ ಬಿಟ್ಟು ಹೊಸ ಹೊಸ ಉದ್ಯಮಗಳನ್ನು ಆರಂಭಿಸುತ್ತಾರೆ. ಹೀಗೆ ಅದರಲ್ಲಿಯೇ ಯಶಸ್ಸು ಪಡೆಯಬೇಕು ಎಂದು ಅವರು ಕಷ್ಟಪಡುತ್ತಿರುತ್ತಾರೆ.  ನಾನು ಬೆಂಗಳೂರನ್ನು ಪ್ರೀತಿಸುತ್ತೇನೆ ಮತ್ತು ಈ ಪಾತ್ರವು ನನ್ನ ಜೀವನದಲ್ಲಿ ನಾನು ಭೇಟಿಯಾದ ವಿವಿಧ ಮಾರ್ಗದರ್ಶಕರ ಬಗ್ಗೆ ಮತ್ತೆ ಯೋಚಿಸುವಂತೆ ಮಾಡಿದೆ ಎಂದಿದ್ದಾರೆ.

ಹಿರಿಯ ನಟ ಅನಂತನಾಗ್‌ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ. ಬಹುತೇಕ ಎಲ್ಲರೀತಿಯ ಪಾತ್ರಗಳಲ್ಲಿಯೂ ನಟಿಸಿರುವ ಅವರು ‘ಮೇಡ್‌ ಇನ್‌ ಬೆಂಗಳೂರು’ ಸಿನಿಮಾದಲ್ಲಿಉತ್ತರ ಭಾರತೀಯನ ಪಾತ್ರದಲ್ಲಿನಟಿಸಿದ್ದಾರೆ.  ಪಾತ್ರ ಉತ್ತರ ಭಾರತೀಯನದ್ದಾದ ಕಾರಣ ಆ ಶೈಲಿಯಲ್ಲಿಯೇ ಕನ್ನಡವನ್ನು ಮಾತನಾಡಿದ್ದಾರೆ. ಬೇರೆ ರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ಹೇಗೆ ನೆಲೆ ಕಂಡುಕೊಳ್ಳುತ್ತಾರೆ ಎಂಬುದನ್ನು ಈ ಪಾತ್ರದ ಮೂಲಕ ಹೇಳಿಸುವ ಒಂದು ಪ್ರಯತ್ನ ನಿರ್ದೇಶಕರಿಂದ ಆಗಿದೆ. ಸಿಂಧಿ ವ್ಯಾಪಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ಖ್ಯಾತ ವಿತರಕರಾದ ಪಾಲ್‌ ಚಾಂದಿನಿಯವರನ್ನು ತಲೆಯಲ್ಲಿಟ್ಟುಕೊಂಡು ನಿರ್ದೇಶಕರು ಈ ಪಾತ್ರ ಬರೆದಿದ್ದಾರಂತೆ.

ಮೇಡ್‌ ಇನ್‌ ಬೆಂಗಳೂರು’ ಸಿನಿಮಾದಲ್ಲಿ ಅವರು ರೆಡ್ಡಿಯೊಬ್ಬನ ಪಾತ್ರದಲ್ಲಿದ್ದಾರೆ. ಯಾರಾರ‍ಯರಿಗೆ ಸಾಲದ ಅವಶ್ಯಕತೆ ಇರುತ್ತದೋ ಅವರಿಗೆ ಸಾಲ ಕೊಡುತ್ತಿರುತ್ತಾರೆ. ನಾಯಕ ನಟ ಹಲವು ಕಡೆಗಳಲ್ಲಿ ಸಾಲ ಪಡೆದು ಉದ್ಯಮ ಮಾಡಿ ಲಾಸ್‌ ಆಗಿರುತ್ತಾರೆ. ರೆಡ್ಡಿಯ ಬಳಿ ಸಾಲ ಪಡೆಯುತ್ತಾರೆ. ಇವರದ್ದು ಫೈನಾನ್ಷಿಯರ್‌ ಮತ್ತು ಒಂದು ರೀತಿಯ ಗ್ಯಾಂಗ್‌ಸ್ಟರ್‌ ಪಾತ್ರ ಎನ್ನಬಹುದು. ಯಾವಾಗಲೂ ಬೌನ್ಸರ್‌ಗಳಿಂದ ಅವರು ಸುತ್ತುವರೆದಿರುತ್ತಾರೆ. ಇದು ಕೆಲವು ಕಡೆಗಳಲ್ಲಿ ಪ್ರೆಕ್ಷರನ್ನು ನಗಿಸುತ್ತದೆ.

ಪ್ರಕಾಶ್‌ ಬೆಳವಾಡಿ ಬಾಲಿವುಡ್‌, ಕಾಲಿವುಡ್‌, ಟಾಲಿವುಡ್‌ ಸೇರಿದಂತೆ ಎಲ್ಲ ಚಿತ್ರರಂದಲ್ಲಿಯೂ ಬಿಝಿಯಾಗಿದ್ದಾರೆ. ‘ಮೇಡ್‌ ಇನ್‌ ಬೆಂಗಳೂರು’ ಸಿನಿಮಾದಲ್ಲಿ ಅವರು ಕನಸುಗಳನ್ನು ಕದಿಯುವ ಪಾತ್ರದಲ್ಲಿದ್ದಾರಂತೆ. ಇವರ ಜತೆ ಪುನೀತ್‌ ಮಾಂಜಾ ಸೇರಿದಂತೆ ಹಲವು ಕಲಾವಿದರು ಸಿನಿಮಾದಲ್ಲಿದ್ದಾರೆ. ಈ ಚಿತ್ರದಲ್ಲಿ ಒಟ್ಟು 12 ಹಾಡುಗಳಿದ್ದು, ಅಶ್ವಿನ್‌ ಪಿ. ಸಂಗೀತ ನಿರ್ದೇಶನ ಮಾಡಿದ್ದಾರೆ. ಮೇಡ್ ಇನ್ ಬೆಂಗಳೂರಿನಲ್ಲಿ ಹಿಮಾಂಶಿ ವರ್ಮಾ, ಅನುರಾಗ್ ಪುತ್ತಿಗೆ, ಅರ್ಚನಾ ಕೊಟ್ಟಿಗೆ, ಸುಧಾ ಬೆಳವಾಡಿ ಮತ್ತು ಮಂಜುನಾಥ್ ಹೆಗಡೆ ಕುತೂಹಲಕಾರಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com