ಹಿನ್ನೋಟ 2022: ಸ್ಯಾಂಡಲ್​​ವುಡ್​ನಲ್ಲಿ ಬೆಳಕಿಗೆ ಬಂದ ಪ್ರತಿಭೆಗಳು!

ದಕ್ಷಿಣ ಭಾರತ ಚಿತ್ರರಂಗದಿಂದ ಅನೇಕ ವರ್ಷಗಳ ಕಾಲ ಒಂದು ಉದ್ಯಮವಾಗಿ ಹೊರಗುಳಿದ ನಂತರ, ಕಳೆದ ಕೆಲವು ವರ್ಷಗಳಲ್ಲಿ ವಿಶೇಷವಾಗಿ ಕೆಜಿಎಫ್ ನ ಬ್ಲಾಕ್ ಬಸ್ಟರ್ ಯಶಸ್ವಿನ ನಂತರ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್ ವುಡ್ ನತ್ತ ತಿರುಗಿದೆ.
ಕನ್ನಡದ ಚಿತ್ರರಂಗದ ಪ್ರತಿಭೆಗಳು
ಕನ್ನಡದ ಚಿತ್ರರಂಗದ ಪ್ರತಿಭೆಗಳು

ದಕ್ಷಿಣ ಭಾರತ ಚಿತ್ರರಂಗದಿಂದ ಅನೇಕ ವರ್ಷಗಳ ಕಾಲ ಒಂದು ಉದ್ಯಮವಾಗಿ ಹೊರಗುಳಿದ ನಂತರ, ಕಳೆದ ಕೆಲವು ವರ್ಷಗಳಲ್ಲಿ ವಿಶೇಷವಾಗಿ ಕೆಜಿಎಫ್ ನ ಬ್ಲಾಕ್ ಬಸ್ಟರ್ ಯಶಸ್ವಿನ ನಂತರ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್ ವುಡ್ ನತ್ತ ತಿರುಗಿದೆ. ಕೆಜಿಎಫ್ -2 ಚಿತ್ರ ಮತ್ತೊಮ್ಮೆ ಭಾರತ ಮಾತ್ರವಲ್ಲದೇ ಇಡೀ ವಿಶ್ವ ಚಿತ್ರೋದ್ಯಮವನ್ನು ಕನ್ನಡದತ್ತ ಕುತೂಹಲದಿಂದ ನೋಡುವಂತೆ ಮಾಡಿತು. 'ಕಾಂತಾರ'ದಂತಹ ಸಣ್ಣ ಬಜೆಟ್ ಸಿನಿಮಾ ಕೂಡಾ ದೇಶಾದ್ಯಂತ ಮನೆ ಮಾತಾಯಿತು. ಇದೀಗ ಸರಿಯಾದ ಪ್ರಚಾರದ ನಡುವೆ ಇಂಡಸ್ಟ್ರಿಯಲ್ಲಿ ಮಿಂಚಿದ ಹೊಸ ಪ್ರತಿಭೆಗಳನ್ನು ಇಲ್ಲಿ ನೋಡೋಣ.

ಸಪ್ತಮಿಗೌಡ (  ಕಾಂತಾರ)

ಪಾಪ್‌ಕಾರ್ನ್ ಮಂಕಿ ಟೈಗರ್ (2020) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಪ್ತಮಿ ಗೌಡ, ಈ ವರ್ಷದ ಸೂಪರ್ ಹಿಟ್  'ಕಾಂತಾರ' ಮೂಲಕ ದೇಶಾದ್ಯಂತ ಜನಪ್ರಿಯತೆ ಪಡೆದರು. ಈ ಚಿತ್ರದಲ್ಲಿ ಸಪ್ತಮಿಗೌಡ ತನ್ನ ಪಾತ್ರಕ್ಕೆ ಜೀವಂತಿಕೆ ತುಂಬುವ ಮೂಲಕ ಬಲವಾದ ಪ್ರಭಾವ ಬೀರಿದ್ದು, ದೇಶಾದ್ಯಂತ ಅನೇಕ ಆಫರ್‌ಗಳು ಹರಿದು ಬರುತ್ತಿದ್ದು,   ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಾರೆ. 

 ನಟಿ- ಸಪ್ತಮಿ ಗೌಡ
 ನಟಿ- ಸಪ್ತಮಿ ಗೌಡ

ಆಶಿಕಾ ರಂಗನಾಥ್ ( ಗರುಡ, ಅವತಾರ ಪುರುಷ, ರೇಮೋ, ಕಾಣೆಯಾದವರ ಬಗ್ಗೆ ಪ್ರಕಟಣೆ)

ಆಶಿಕಾ ರಂಗನಾಥ್ ಈ ವರ್ಷ ಬಿಡುಗಡೆಯಾದ  ಗರುಡ, ಅವತಾರ ಪುರುಷ, ಕಾಣೆಯಾದವರ ಬಗ್ಗೆ ಪ್ರಕಟಣೆ ಮತ್ತು ರೇಮೋ ಚಿತ್ರಗಳಲ್ಲಿ ಅದ್ಬುತ ಪ್ರದರ್ಶನ ನೀಡುವುದರ ಜೊತೆಗೆ ಅವರು ಅಥರ್ವ-ನಟಿಸಿದ ಪಟ್ಟತ್ತು ಅರಸನ್‌ ಚಿತ್ರದೊಂದಿಗೆ ತಮಿಳಿನಲ್ಲಿ ದೊಡ್ಡ ಬ್ರೇಕ್ ಪಡೆದರು. ಈ ಚಿತ್ರದ ಹೊರತಾಗಿ, ಅವರು ಸಿದ್ಧಾರ್ಥ್ ಜೊತೆಗಿನ ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ. ಅದು ಪ್ರಸ್ತುತ ನಿರ್ಮಾಣ ಹಂತದಲ್ಲಿದೆ. ಮುಂದಿನ ವರ್ಷ ಕಲ್ಯಾಣ್ ರಾಮ್ ನಾಯಕನಾಗಿ ನಟಿಸಿರುವ ಮೈತ್ರಿ ಮೂವೀ ಮೇಕರ್ಸ್‌ನ  ತೆಲುಗು ಚಿತ್ರದಲ್ಲೂ ಅವರು ಅಭಿನಯಿಸುತ್ತಿದ್ದಾರೆ. 

ನಟಿ ಆಶಿಕಾ ರಂಗನಾಥ್ 
ನಟಿ ಆಶಿಕಾ ರಂಗನಾಥ್ 

ಸಂಗೀತಾ ಶೃಂಗೇರಿ ( 777 ಚಾರ್ಲಿ)

ಕೆಲ ವರ್ಷಗಳ ಹಿಂದೆ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದರೂ ಕಿರುತೆರೆಯಿಂದ ಬೆಳ್ಳಿ ತೆರೆಗೆ ಕಾಲಿಟ್ಟವರಲ್ಲಿ ಸಂಗೀತಾ ಶೃಂಗೇರಿ ಕೂಡಾ ಒಬ್ಬರು. ರಕ್ಷಿತ್ ಶೆಟ್ಟಿ ಅಭಿಯನದ ಚಾರ್ಲಿ 777 ಚಿತ್ರದಲ್ಲಿ ಅವರ ದೇವಿಕಾ ಆರಾಧ್ಯ ಪಾತ್ರ ಸಾಕಷ್ಟು ಮೋಡಿ ಮಾಡಿತ್ತು. ಈ ಚಿತ್ರವು ಕನ್ನಡದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ನಂತರ ಸಂಗೀತಾ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡರು. ಅಲ್ಲದೇ ಪ್ಯಾನ್ ಇಂಡಿಯಾ ಸಿನಿಮಾವಾದ್ದರಿಂದ ದೇಶಾದ್ಯಂತ ತನ್ನನ್ನು ಪರಿಚಯಿಸಿಕೊಂಡರು.

ನಟಿ- ಸಂಗೀತಾ ಶೃಂಗೇರಿ
ನಟಿ- ಸಂಗೀತಾ ಶೃಂಗೇರಿ

 ಶ್ರೀನಿಧಿ ಶೆಟ್ಟಿ (ನಟಿ, ಕೆಜಿಎಫ್ 2)

ಒಬ್ಬ ನಟಿ ಕೇವಲ ಎರಡು ಚಿತ್ರಗಳಿಗೆ ಅದರಲ್ಲೂ ಅವರ ಮೊದಲ ಎರಡು ಚಿತ್ರಗಳಿಗೆ 4-5 ವರ್ಷ ಕಳೆಯುವುದನ್ನು ನಾವು ಸಾಮಾನ್ಯವಾಗಿ ನೋಡುವುದಿಲ್ಲ. ಆದಾಗ್ಯೂ, ಆ ಎರಡು ಚಿತ್ರಗಳು ಕೆಜಿಎಫ್ 1 ಮತ್ತು ಕೆಜಿಎಫ್ 2 ಆಗಿದ್ದರೆ ಕಾಯಲೇಬೇಕಾಗುತ್ತದೆ. ಈ ಫ್ರಾಂಚೈಸ್‌ನಲ್ಲಿ ರೀನಾ ದೇಸಾಯಿ ಪಾತ್ರದಲ್ಲಿ ತನ್ನ ಅಮೋಘ ಅಭಿನಯದ ಮೂಲಕ ಬಾಲಿವುಡ್, ಕಾಲಿವುಡ್, ತಾಲಿವುಡ್ ಎಲ್ಲಾ ಉದ್ಯಮಗಳತ್ತ ಶ್ರೀನಿಧಿ ಶೆಟ್ಟಿ ತನ್ನ ಗಮನ ಸೆಳೆದರು. ಇದರಿಂದಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ತಮಿಳಿನ ವಿಕ್ರಮ್ ಜೊತೆಗೆ ಕೊಬ್ರಾ ಚಿತ್ರದಲ್ಲಿ ಅಭಿನಯಿಸುವ ಆಫರ್ ಪಡೆದಿದ್ದಾರೆ. 

ನಟಿ- ಶ್ರೀನಿಧಿ ಶೆಟ್ಟಿ
ನಟಿ- ಶ್ರೀನಿಧಿ ಶೆಟ್ಟಿ


ಅರವಿಂದ್ ಕಶ್ಯಪ್ (ಛಾಯಾಗ್ರಾಹಕ, ಕಾಂತಾರ ಮತ್ತು 777 ಚಾರ್ಲಿ)

ಅರವಿಂದ್ ಕಶ್ಯಪ್ 2022ರಲ್ಲಿ ಕೇವಲ ಒಂದಲ್ಲ ಎರಡು ಕನ್ನಡ ಚಿತ್ರಗಳ ಛಾಯಾಗ್ರಾಹಕರಾಗಿದ್ದರು. 777 ಚಾರ್ಲಿ ಮತ್ತು ಕಾಂತಾರದಲ್ಲಿನ ಅವರ ಕೆಲಸ, ಸೃಜನಶೀಲ ಛಾಯಾಗ್ರಹಣ ಸಾಕಷ್ಟು ಪ್ರಶಂಸೆಗಳನ್ನು ಗಳಿಸಿತು. ವಾಸ್ತವವಾಗಿ, ಭಾರತದಲ್ಲಿನ ಕೆಲವು ವೈವಿಧ್ಯಮಯ ಮತ್ತು ಕಠಿಣವಾದ ಭೂಪ್ರದೇಶಗಳನ್ನು ಸೆರೆಹಿಡಿಯುವಲ್ಲಿ ಅವರ ಕೆಲಸವು ಮಲಯಾಳಂ ಚಿತ್ರರಂಗಕ್ಕೆ ಅವರ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿತು. ಪೃಥ್ವಿರಾಜ್ ಸುಕುಮಾರನ್ ಅವರ ಫ್ಯಾನ್ ಆಗಿ ಒಪ್ಪಿಕೊಂಡಿದ್ದು,. ಅವರ ಮುಂದಿನ ಚಿತ್ರ ವಿಲಾಯತ್ ಬುದ್ಧಕ್ಕೆ ಅರವಿಂದ್ ಕಶ್ಯಪ್ ಕ್ಯಾಮರಾ ಹಿಡಿಯಲಿದ್ದಾರೆ.

ಛಾಯಾಗ್ರಾಹಕ  ಅಶೋಕ್ ಕಶ್ಯಪ್
ಛಾಯಾಗ್ರಾಹಕ  ಅಶೋಕ್ ಕಶ್ಯಪ್

ಕಿರಣರಾಜ್ (ನಿರ್ದೇಶಕ, 777 ಚಾರ್ಲಿ)

ಪೇಪರ್ ಬಾಯ್, ಬಾರ್ ವೇಟರ್ ಮತ್ತು ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುವುದರಿಂದ ಹಿಡಿದು ಬ್ಲಾಕ್‌ಬಸ್ಟರ್ ಚೊಚ್ಚಲ ಚಿತ್ರ ನಿರ್ಮಾಪಕನಾಗುವವರೆಗೆ ಕಿರಣ್‌ ರಾಜ್ ಅವರ ಯಶಸ್ವಿ ಜೀವನದ ಪಯಣ ಭಾವನಾತ್ಮಕವಾಗಿ ಮನ ಕಲಕುತ್ತದೆ. 
 ತನ್ನ ಕಠಿಣ ಜೀವನ ಅನುಭವಗಳಿಂದ ಸ್ಫೂರ್ತಿ ಪಡೆದ ಕಿರಣ್, 777 ಚಾರ್ಲಿಯನ್ನು ನಿರ್ಮಿಸಿದ್ದು,  ಮನುಷ್ಯ ಮತ್ತುಆತನ ನಿಯತ್ತಿನ ನಾಯಿಯ ನಡುವಣದ ನಿಜವಾದ ಸ್ನೇಹದ ಬಂಧದ ಬಗ್ಗೆ ಹೃದಯಸ್ಪರ್ಶಿ ಚಿತ್ರ ಮಾಡಿದರು. ರಕ್ಷಿತ್ ಶೆಟ್ಟಿ-ನಟನಾಗಿರುವ ಈ ಚಿತ್ರವು ವರ್ಷದ ಅತ್ಯುತ್ತಮ ಪ್ಯಾನ್-ಇಂಡಿಯನ್ ಹಿಟ್‌ಗಳಲ್ಲಿ ಒಂದಾಗಿ ಹೊರಹೊಮ್ಮಿತು ಮತ್ತು ಕಿರಣ್ ತನ್ನನ್ನು ತಾನು ಅಸಾಧಾರಣ ಪ್ರತಿಭೆ ಎಂದು ಗುರುತಿಸಿಕೊಂಡರು. 

ನಿರ್ದೇಶಕ- ಕಿರಣ್ ರಾಜ್ 
ನಿರ್ದೇಶಕ- ಕಿರಣ್ ರಾಜ್ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com