ನಿರ್ದೇಶಕ ಬಾಲಾಜಿ ಮೋಹನ್ ಜೊತೆ ಸದ್ದಿಲ್ಲದೇ ಸಪ್ತಪದಿ ತುಳಿದ ಕನ್ನಡತಿ ಧನ್ಯಾ ಬಾಲಕೃಷ್ಣ: ವರ್ಷದ ಹಿಂದೆಯೇ ಗುಟ್ಟಾಗಿ ವಿವಾಹ!
ತಮಿಳು ನಿರ್ದೇಶಕ ಬಾಲಾಜಿ ಮೋಹನ್ ಜತೆ ಅವರು ಸೀಕ್ರೆಟ್ ಆಗಿ ಮದುವೆ ಆಗಿದ್ದಾರೆ ಎನ್ನಲಾಗಿತ್ತು. ಈಗ ಧನ್ಯಾ ಬಾಲಕೃಷ್ಣ ಹಾಗೂ ಬಾಲಾಜಿ ಮೋಹನ್ ಮದುವೆ ಆಗಿರುವ ವಿಚಾರ ಅಧಿಕೃತವಾಗಿದೆ
Published: 29th December 2022 01:23 PM | Last Updated: 29th December 2022 01:23 PM | A+A A-

ಧನ್ಯಾ ಬಾಲಕೃಷ್ಣ ಮತ್ತು ಬಾಲಾಜಿ ಮೋಹನ್
ಬೆಂಗಳೂರು: ಕರ್ನಾಟಕ ಮೂಲದ ನಟಿ ಧನ್ಯಾ ಬಾಲಕೃಷ್ಣ ಅವರು ತಮಿಳು ಹಾಗೂ ತೆಲುಗಿನಲ್ಲಿ ಗುರುತಿಸಿಕೊಂಡಿದ್ದೇ ಹೆಚ್ಚು, ಧನ್ಯಾ ಬಾಲಕೃಷ್ಣ ಅವರು ಕಳೆದ ಒಂದು ದಶಕಗಳಿಂದ ಸಿನಿಮಾರಂಗದಲ್ಲಿದ್ದಾರೆ. ತಮಿಳು ಸಿನಿಮಾದ ಮೂಲಕ. ಕಾಲಿವುಡ್, ಟಾಲಿವುಡ್ ಸಿನಿಮಾಗಳಲ್ಲಿ ನಟಿಸಿದ ಅವರು ಕನ್ನಡ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ.
ತಮಿಳು ನಿರ್ದೇಶಕ ಬಾಲಾಜಿ ಮೋಹನ್ ಜತೆ ಅವರು ಸೀಕ್ರೆಟ್ ಆಗಿ ಮದುವೆ ಆಗಿದ್ದಾರೆ ಎನ್ನಲಾಗಿತ್ತು. ಈಗ ಧನ್ಯಾ ಬಾಲಕೃಷ್ಣ ಹಾಗೂ ಬಾಲಾಜಿ ಮೋಹನ್ ಮದುವೆ ಆಗಿರುವ ವಿಚಾರ ಅಧಿಕೃತವಾಗಿದೆ.
ನಿರ್ದೇಶಕ ಬಾಲಾಜಿ ಮೋಹನ್ ಅವರು 2012ರಲ್ಲಿ ಅರುಣಾ ಎಂಬುವವರೊಂದಿಗೆ ಮದುವೆ ಆಗಿದ್ದರು. ಆದರೆ ಹೊಂದಾಣಿಕೆಯ ಕೊರತೆಯಿಂದ ಅವರು ಮದುವೆ ಒಂದೇ ವರ್ಷದಲ್ಲಿ ವಿಚ್ಛೇದನಲ್ಲಿ ಅಂತ್ಯಗೊಂಡಿತ್ತು. ಇದೀಗ ಅವರು ಧನ್ಯಾ ಬಾಲಕೃಷ್ಣ ಅವರೊಂದಿಗೆ ಎರಡನೇ ಮದುವೆ ಆಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಮದುವೆ ಈ ವರ್ಷದ ಆರಂಭದಲ್ಲೇ (ಜ.23) ನಡೆದಿದೆ. ಅಷ್ಟಕ್ಕೂ ಈ ಮದುವೆ ಸುದ್ದಿ ಈಗ ಚರ್ಚೆಗೆ ಬಂದಿರುವುದಕ್ಕೆ ಕಾರಣ, ನಟಿ ಕಲ್ಪಿಕಾ ಗಣೇಶ್ ಅವರಿಂದಾಗಿ.
ಈ ಬಗ್ಗೆ ಬಾಲಾಜಿ ಅವರು ಕೋರ್ಟ್ ಮೊರೆ ಹೋಗಿದ್ದಾರೆ. ನಟಿ ಕಲ್ಪಿಕಾ ಗಣೇಶ್ ಅವರು ತಮ್ಮ ಮದುವೆ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡಿ ಮಾನ ಹಾನಿ ಮಾಡಿದ್ದಾರೆ ಎಂದು ಬಾಲಾಜಿ ಅವರು ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ‘ನಾನು ಹಾಗೂ ಧನ್ಯಾ ಬಾಲಕೃಷ್ಣ ಅವರು ಕಳೆದ ಜನವರಿ 23ರಂದು ಮದುವೆ ಆಗಿದ್ದೇವೆ. ಆದರೆ ಕಲ್ಪಿಕಾ ಗಣೇಶ್ ಅವರು ನಮ್ಮ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಾ ಬಂದಿದ್ದಾರೆ. ಇದರಿಂದ ಮಾನ ಹಾನಿ ಆಗಿದೆ’ ಎಂದು ಅರ್ಜಿಯಲ್ಲಿ ಬಾಲಾಜಿ ಬರೆದುಕೊಂಡಿದ್ದಾರೆ. ಸದ್ಯ ಈ ವಿಚಾರದಲ್ಲಿ ಯಾವುದೇ ಹೇಳಿಕೆ ನೀಡದಂತೆ ಕೋರ್ಟ್ ಕಲ್ಪಿಕಾಗೆ ನಿರ್ದೇಶನ ನೀಡಿದೆ.