ಕಿರಿಕ್ ಪಾರ್ಟಿ ಚಿತ್ರದ ಪೋಸ್ಟರ್ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ: ಈಗ ಜ್ಞಾನೋದಯವಾಯ್ತಾ ಎಂದ ನೆಟ್ಟಿಗರು
ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬೆಳ್ಳಿಪರದೆಗೆ ಪಾದಾರ್ಪಣೆ ಮಾಡಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಆದರೆ ಕೆಲ ದಿನಗಳಿಂದ ವಿವಾದಾತ್ಮಕ ಹೇಳಿಕೆಗಳಿಂದ ತೀವ್ರ ಟೀಕೆಗೆ ನಟಿ ಗುರಿಯಾಗುತ್ತಿದ್ದಾರೆ.
Published: 30th December 2022 07:11 PM | Last Updated: 30th December 2022 07:11 PM | A+A A-

ರಶ್ಮಿಕಾ ಮಂದಣ್ಣ
ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬೆಳ್ಳಿಪರದೆಗೆ ಪಾದಾರ್ಪಣೆ ಮಾಡಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಆದರೆ ಕೆಲ ದಿನಗಳಿಂದ ವಿವಾದಾತ್ಮಕ ಹೇಳಿಕೆಗಳಿಂದ ತೀವ್ರ ಟೀಕೆಗೆ ನಟಿ ಗುರಿಯಾಗುತ್ತಿದ್ದಾರೆ.
ಕಿರಿಕ್ ಪಾರ್ಟಿ ಮೂಲಕ ಕರ್ನಾಟಕದ ಕ್ರಶ್ ಆದ ರಶ್ಮಿಕಾಗೆ ನಂತರ ಟಾಲಿವುಡ್, ಕಾಲಿವುಡ್ ನಂತರ ಇದೀಗ ಬಾಲಿವುಡ್ ನಲ್ಲೂ ಹೆಚ್ಚು ಆಫರ್ ಗಳು ಬರುತ್ತಿದ್ದು ರಶ್ಮಿಕಾ ಅಭಿನಯದ ಹಿಂದಿ ಚಿತ್ರ ಗುಡ್ ಬೈ ಬಿಡುಗಡೆಯಾಗಿ ಮಕಾಡೆ ಮಲಗಿತ್ತು. ಇದಕ್ಕೆ ಕಾರಣವಾಗಿದ್ದು ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ. ಹೌದು ಕನ್ನಡದಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಚಿತ್ರ ನಂತರ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಿದ್ದು ಹಿಂದಿಯೂಲ್ಲ ಅತ್ಯುತ್ತಮ ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ: ಕೈ ಸನ್ನೆ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್; ರಿಷಬ್ ಶೆಟ್ಟಿ ಏನಂದ್ರು?
ಇನ್ನು ಸಂದರ್ಶನವೊಂದರಲ್ಲಿ ಕಿರಿಕ್ ಪಾರ್ಟಿ ಚಿತ್ರ ನಿರ್ಮಾಣ ಸಂಸ್ಥೆಯ ಕುರಿತು ಹೇಳುವಾಗ ತಮ್ಮ ಬೆರಳುಗಳನ್ನು ತೋರಿಸಿದ್ದು ನಂತರ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಬೆಳ್ಳಿ ಪರದೆಗೆ ಎಂಟ್ರಿ ಕೊಡಲು ಕಾರಣವಾದ ನಿರ್ಮಾಣ ಸಂಸ್ಥೆಯ ಕುರಿತು ಮಾತನಾಡಲು ಅಸಡ್ಡೆ ತೋರಿದ್ದ ನಟಿಯನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಎದ್ದಿತ್ತು.
ಅಲ್ಲದೆ ತಮ್ಮ ಮುಂದಿನ ಬಾಲಿವುಡ್ ಚಿತ್ರ ಮಿಷನ್ ಮಜ್ನು ಚಿತ್ರದ ಸುದ್ದಿಗೋಷ್ಠಿ ವೇಳೆ 'ದಕ್ಷಿಣ ಭಾರತದಲ್ಲಿ ಮಾಸ್ ಮಸಾಲಾ, ಐಟಂ ಸಾಂಗ್ಗಳು ಇರುತ್ತವೆ. ಆದರೆ ರೊಮ್ಯಾಂಟಿಕ್ ಸಾಂಗ್ ವಿಚಾರದಲ್ಲಿ ಬಾಲಿವುಡ್ ಬೆಸ್ಟ್ ಎಂದು ಹೇಳುವ ಮೂಲಕ ರಶ್ಮಿಕಾ ಮಂದಣ್ಣ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದರು.
ಕಿರಿಕ್ ಪಾರ್ಟಿ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, ಆರು ವರ್ಷ. ಎಲ್ಲವೂ ಆರಂಭವಾದ ದಿನ ಎಂದು ರಶ್ಮಿಕಾ ಮಂದಣ್ಣ ತಮ್ಮ ಇನ್ ಸ್ಟಾಗ್ರಾಂ ಸ್ಟೋರಿನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಈಗ ಜ್ಞಾನೋದಯವಾಯ್ತಾ ಎಂದು ಕಾಲೆಳೆಯುತ್ತಿದ್ದಾರೆ.