
ಶ್ರುತಿ ಹರಿಹರನ್
ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರ ಪರಂವಾಹ್ ಸ್ಟುಡಿಯೋಸ್ ನಿರ್ಮಾಣದ ಸ್ಟ್ರಾಬೆರ್ರಿ ಸಿನಿಮಾದಲ್ಲಿ ನಟಿ ಶ್ರುತಿ ಹರಿಹರನ್ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಇನ್ನು ಮುಂದೆ ಹೀರೊ
ಸ್ಟ್ರಾಬೆರ್ರಿ ಸಿನಿಮಾ ಮೂಲಕ ಅರ್ಜುನ್ ಲೂಯಿಸ್ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ತಾಯಿ ಪ್ರೀತಿಯಿಂದ ವಂಚಿತಳಾದ ಅಮೃತಾ ಎನ್ನುವ ಲೈಂಗಿಕ ಕಾರ್ಯಕರ್ತೆಯ ಕಥಾನಕವನ್ನು ಸಿನಿಮಾ ಹೊಂದಿದೆ.
ದಿಯಾ ಸಿನಿಮಾ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ, ಒಂದು ಮೊಟ್ಟೆಯ ಕಥೆ ಖ್ಯಾತಿಯ ನಟ ವಿನೀತ್ ಕುಮಾರ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಯಂಗ್ ಮೈಂಡ್ಸ್ ಜೊತೆ ಕೆಲಸ ಮಾಡೋದು ಯಾವತ್ತೂ ಖುಷಿ: 'ಒನ್ ಕಟ್ ಟೂ ಕಟ್' ನಟ ಪ್ರಕಾಶ್ ಬೆಳವಾಡಿ ಸಂದರ್ಶನ
ಮಂಗಳೂರಿನ ಪ್ರತಿಭಾನ್ವಿತ ರಂಗಭೂಮಿ ಕಲಾವಿದ ವಿಜಯ್ ಮಯ್ಯ ಅವರು ಜಾರ್ಜ್ ಎನ್ನುವ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ಟ್ರಾಬೆರ್ರಿ ಸಿನಿಮಾ ಚಿತ್ರೀಕರಣ ಪೂರ್ತಿಯಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.
ಇದನ್ನೂ ಓದಿ: ಕನ್ನಡ ನಾಡಿನ ಲೇಡೀಸ್ ಅಂಡ್ ಜೆಂಟಲ್ ಮೆನ್ ಹೊಸ ಬಗೆಯ ಕಂಟೆಂಟ್ ವೆಲ್ಕಮ್ ಮಾಡ್ತಾರೆ: ನಟ ದಾನಿಶ್ ಸೇಟ್ ಸಂದರ್ಶನ