
ಸಿಂಪಲ್ ಸುನಿ
ನಿರ್ದೇಶಕ ಸಿಂಪಲ್ ಸುನಿ ಈ ಹಿಂದೆ ದುಷ್ಯಂತ್ ಎನ್ನುವ ನವ ನಟನನ್ನು ಇಟ್ಟುಕೊಂಡು ರಾಬಿನ್ ಹುಡ್ ಸಿನಿಮಾ ಘೋಷಿಸಿದ್ದರು. ಆದರೆ ಕಾರಣಾಂತರಗಳಿಂದ ಆ ಪ್ರಾಜೆಕ್ಟ್ ಮುಂದಕ್ಕೆ ಹೋಗಿದೆ.
ಇದನ್ನೂ ಓದಿ: ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಇನ್ನು ಮುಂದೆ ಹೀರೊ
ಇದೀಗ ಹೊಸ ವಿಷಯ ಏನೆಂದರೆ ದುಷ್ಯಂತ್ ಅವರೊಡನೆ ಮತ್ತೊಂದು ಪ್ರಯೋಗಾತ್ಮಕ, ಕಮರ್ಷಿಯಲ್ ಸಿನಿಮಾ ನಿರ್ಮಿಸಲು ಸುನಿ ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ: 'ಗುರು ಶಿಷ್ಯರು' ಸಿನಿಮಾದಲ್ಲಿ 13 ಹುಡುಗರಿಗೆ ಶರಣ್ ಖೋ ಖೋ ಕೋಚ್
ರಾಬಿನ್ ಹುಡ್ ಸಿನಿಮಾ ಹೈ ಬಜೆಟ್ ಆಗಿದ್ದು, ಪ್ಯಾನ್ ಇಂಡಿಯಾ ಬಿಡುಗಡೆಗೊಳಿಸುವ ಉದ್ದೇಶವಿತ್ತು. ಈಗ ಅದಕ್ಕೆ ಸಮಯ ಸರಿಯಿಲ್ಲದೇ ಇರುವುದರಿಂದ ಬೇರೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿರುವುದಾಗಿ ಸುನಿ ಸ್ಪಷ್ಟನೆ ನೀಡಿದ್ದಾರೆ.