ಗಾನವಿ ಲಕ್ಷ್ಮಣ್ ನಟನೆಯ 'ಭಾವಚಿತ್ರ' ರಿಲೀಸ್ ಫೆಬ್ರವರಿ 18ಕ್ಕೆ

ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷ್ಮಣ್ ಮತ್ತು ಯಾನ ಸಿನಿಮಾದ ಚಕ್ರವರ್ತಿ ನಟನೆಯ ಭಾವಚಿತ್ರ ಸಿನಿಮಾ ಫೆಬ್ರವರಿ 18 ರಂದು ರಿಲೀಸ್ ಆಗಲಿದೆ.

Published: 10th February 2022 10:32 AM  |   Last Updated: 10th February 2022 12:51 PM   |  A+A-


Ganavi Laxman

ಗಾನವಿ ಲಕ್ಷ್ಮಣ್

Online Desk

ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷ್ಮಣ್ ಮತ್ತು ಯಾನ ಸಿನಿಮಾದ ಚಕ್ರವರ್ತಿ ನಟನೆಯ ಭಾವಚಿತ್ರ ಸಿನಿಮಾ ಫೆಬ್ರವರಿ 18 ರಂದು ರಿಲೀಸ್ ಆಗಲಿದೆ.

ಗಿರೀಶ್ ಕುಮಾರ್ ಬಿ ನಿರ್ದೇಶಿಸಿದ, ಭಾವ ಚಿತ್ರ ಸಿನಿಮಾ ಟೆಕ್ನೋ-ಥ್ರಿಲ್ಲರ್ ಮತ್ತು ಹವ್ಯಾಸಿ ಛಾಯಾಗ್ರಾಹಕನ ಪ್ರಯಾಣದ ಕಥೆ ಆಧರಿಸಿದ ಚಲನಚಿತ್ರವಾಗಿದೆ.

ಗಾನವಿ ಲಕ್ಷ್ಮಣ್ ಅವರು ಭಾವ ಚಿತ್ರ ಸಿನಿಮಾದೊಂದಿಗೆ  ಕನ್ನಡ ಚಲನ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ನಿರ್ಧರಿಸಿದ್ದರು, ಆದರೆ ಅದಕ್ಕೂ ಮೊದಲು ಹೀರೋ ಸಿನಿಮಾ ರಿಲೀಸ್ ಆಗಿತ್ತು.

ಇದನ್ನೂ ಓದಿ: 'ಭಾವಚಿತ್ರ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಗಾನವಿ ಲಕ್ಷ್ಮಣ್, ಚಕ್ರವರ್ತಿ

ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದ್ದು, ಭಾವ ಚಿತ್ರಕ್ಕೆ ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದಾರೆ ಮತ್ತು ಅಜಯ್ ಕುಮಾರ್ ಅವರ ಛಾಯಾಗ್ರಹಣವಿದೆ.ಮಗಳು ಜಾನಕಿ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ಗಾನವಿ ಲಕ್ಷ್ಮಣ್ ಅವರು ಕಿರುತೆರೆಯಿಂದ  ಹಿರಿತೆರೆಗೆ ಕಾಲಿಟ್ಟಿದ್ದಾರೆ. ಶಿವರಾಜಕುಮಾರ್ ಅವರ ವೇದಾ ಸಿನಿಮಾದಲ್ಲಿ ಅವರು ಮಹಿಳಾ ನಾಯಕಿಯಾಗಿ ನಟಿಸಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp