
ಚಿ. ಗುರುದತ್, ರವಿಚಂದ್ರನ್, ಎನ್ ಎಸ್ ರಾಜ್ ಕುಮಾರ್ ಮತ್ತು ಜನಾರ್ದನ್ ಮಹರ್ಷಿ
ಚಿ. ಗುರುದತ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟ ರವಿಚಂದ್ರನ್ ಅಭಿನಯಿಸಲಿದ್ದಾರೆ. ಚಿತ್ರಕ್ಕೆ 'ರಮ್ಯ ರಾಮಸ್ವಾಮಿ' ಎಂಬ ಹೆಸರಿಡಲಾಗಿದೆ.
ನಟ, ನಿರ್ದೇಶಕ ಚಿ. ಗುರುದತ್ ಈಚಿನ ದಿನಗಳಲ್ಲಿ ಬಹಳ ಸಕ್ರಿಯರಾಗಿದ್ದು, ಕೆಲ ದಿನಗಳ ಹಿಂದೆಯಷ್ಟೇ ಗುರುದತ್ ಅವರು ಸೀರಿಯಲ್ನಲ್ಲಿ ನಟಿಸಲು ಆರಂಭಿಸಿದ್ದರು. ಈಗ ರವಿಚಂದ್ರನ್ ಅವರ ಸಿನಿಮಾವನ್ನು ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಇತ್ತೀಚೆಗಷ್ಟೇ 'ಕನ್ನಡಿಗ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ನಿರ್ಮಾಪಕ ಎನ್ ಎಸ್ ರಾಜ್ ಕುಮಾರ್ ಮತ್ತು ರವಿಚಂದ್ರನ್ ಮತ್ತೆ ಒಂದಾಗುತ್ತಿದ್ದಾರೆ. ಗುರುದತ್ ಮತ್ತು ರವಿಚಂದ್ರನ್ ಅವರ ಮೊದಲ ಒಡನಾಟ ಇದಾಗಿದೆ.
ರಾಮಸ್ವಾಮಿ ಪಾತ್ರದಲ್ಲಿ ರವಿಚಂದ್ರನ್ ಬಹಳ ಸ್ಮಾರ್ಟ್ ಆಗಿ, ಸುಂದರವಾಗಿ ಕಾಣುತ್ತಾರೆ. ಸುಪ್ರಸಿದ್ಧ ಬರಹಗಾರ ಜನಾರ್ದನ್ ಮಹರ್ಷಿ ಬರೆದಿರುವ ಈ ಹಾಸ್ಯಮಯ ಮನೋರಂಜನೆಯ ಸಿನಿಮಾದಲ್ಲಿ ಸೆಂಟಿಮೆಂಟ್ ಇದೆ. ರವಿಚಂದ್ರನ್ ರಾಮಸ್ವಾಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರವಿಚಂದ್ರನ್ ಎದುರು ನಟಿಸಲು ಜನಪ್ರಿಯ ನಾಯಕಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಚಿತ್ರತಂಡ ಕೆಲಸ ಮಾಡುತ್ತಿದೆ.
'ರಮ್ಯ ಎನ್ನುವುದು ನಾಯಕಿಯ ಹೆಸರು. ರಾಮಸ್ವಾಮಿ ನಾಯಕನ ಹೆಸರು. ಇಡೀ ಸಿನಿಮಾ ಕಥೆ ಆ ಎರಡು ಪಾತ್ರಗಳ ಸುತ್ತವೇ ಸುತ್ತುವುದರಿಂದ ಆ ಟೈಟಲ್ ಇಡಲಾಗಿದೆ. ರಮ್ಯ ಪಾತ್ರಕ್ಕೆ ಇನ್ನೂ ಯಾರೂ ಆಯ್ಕೆಯಾಗಿಲ್ಲ. ಉಳಿದ ತಾರಾಗಣದ ಆಯ್ಕೆಯೂ ಸದ್ಯದಲ್ಲೆ ಆಗಲಿದೆ. ರವಿ ಬಸ್ರೂರು ಸಂಗೀತ ಸಂಯೋಜನೆ ಇದೆ.
ಇದನ್ನೂ ಓದಿ: ರವಿಚಂದ್ರನ್ ನನ್ನ ಅತ್ಯುತ್ತಮ ಸಹ ನಟರಲ್ಲಿ ಒಬ್ಬರು: ನವ್ಯ ನಾಯರ್
ಜಿ.ಎಸ್.ವಿ. ಸೀತಾರಾಮ್ ಸಿನಿಮಾಟೋಗ್ರಫಿ ಮಾಡುತ್ತಿದ್ದಾರೆ. ಎನ್. ಎಸ್. ರಾಜ್ಕುಮಾರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕೊನೆಯದಾಗಿ ದೃಶ್ಯ 2 ನಲ್ಲಿ ಕಾಣಿಸಿಕೊಂಡ ರವಿಚಂದ್ರನ್ ಅವರು ತಮ್ಮ ಮುಂಬರುವ ನಿರ್ದೇಶನದ ರವಿ ಬೋಪಣ್ಣ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಸದ್ಯ ದರ್ಶನ್ ಅಭಿನಯದ ಕ್ರಾಂತಿ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಸೆಟ್ಗೆ ಸೇರಲಿದ್ದಾರೆ.