'ಕಾಂತಾರ' ಸಿನಿಮಾಗಾಗಿ ಕಂಬಳ ಓಟದ ದೃಶ್ಯ ಚಿತ್ರೀಕರಿಸಿದ ರಿಷಬ್ ಶೆಟ್ಟಿ
ರಾಜ್. ಬಿ ಶೆಟ್ಟಿ ನಿರ್ದೇಶನದ ಗರುಡಗಮನ ವೃಷಭ ವಾಹನ ಸಿನಿಮಾದ ನಟನೆಯ ಬಗ್ಗೆ ಭಾರೀ ಪ್ರಮಾಣದಲ್ಲಿ ಪ್ರಶಂಸೆ ಪಡೆದ ನಟ ರಿಷಬ್ ಶೆಟ್ಟಿ ತಮ್ಮ ಮುಂದಿನ ಸಿನಿಮಾ 'ಕಾಂತಾರ' ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.
Published: 10th February 2022 01:23 PM | Last Updated: 10th February 2022 01:42 PM | A+A A-

ಕಾಂತಾರ ಸಿನಿಮಾ ಸ್ಟಿಲ್
ರಾಜ್. ಬಿ ಶೆಟ್ಟಿ ನಿರ್ದೇಶನದ ಗರುಡಗಮನ ವೃಷಭ ವಾಹನ ಸಿನಿಮಾದ ನಟನೆಯ ಬಗ್ಗೆ ಭಾರೀ ಪ್ರಮಾಣದಲ್ಲಿ ಪ್ರಶಂಸೆ ಪಡೆದ ನಟ ರಿಷಬ್ ಶೆಟ್ಟಿ ತಮ್ಮ ಮುಂದಿನ ಸಿನಿಮಾ 'ಕಾಂತಾರ' ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.
ಈಗಾಗಲೇ ಶೇ. 85 ರಷ್ಟು ಸಿನಿಮಾ ಶೂಟಿಂಗ್ ಮುಗಿದಿದೆ. ಮಾನವ ಮತ್ತು ಪ್ರಕೃತಿ ಸಂಘರ್ಷವನ್ನು ಆಧರಿಸಿದ, ಕಾಂತಾರ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ನಿರ್ಮಾಣ ಮಾಡುತ್ತಿದೆ. ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಮತ್ತು ಪ್ರಕಾಶ್ ತುಮಿನಾಡ್ ಪ್ರಮುಖ ಪಾತ್ರಗಳಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಸದ್ಯ ಕುಂದಾಪುರದಲ್ಲಿರುವ ರಿಷಬ್ ಶೆಟ್ಟಿ ತಮ್ಮ ಕಾಂತಾರ ಸಿನಿಮಾ ಬಗ್ಗೆ ಸಿನಿಮಾ ಎಕ್ಸ್ ಪ್ರೆಸ್ ಜೊತೆ ಹಲವು ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾ ಕ್ಲೈಮ್ಯಾಕ್ಸ್ ನತ್ತ ಸಾಗುತ್ತಿದೆ. ನಾವು ವಿವಿಧ ಸೀಸನ್ ಗಳಲ್ಲಿ ಚಿತ್ರೀಕರಣ ಮಾಡಬೇಕಿತ್ತು, ಮಳೆಗಾಲದ ಸಮಯದಲ್ಲಿ ಸಿನಿಮಾ ಶೂಟಿಂಗ್ ಆರಂಭಿಸಿ, ಪ್ರಮುಖ ದೃಶ್ಯಗಳಲ್ಲಿ ಚಿತ್ರೀಕರಿಸಿದ್ದೇವೆ, 90ರ ದಶಕ ಕಥೆ ಇದಾಗಿದ್ದು. ತಮ್ಮ ಹುಟ್ಟೂರು ಕೆರಾಡಿಯಲ್ಲಿ ಒಂದು ರಹಸ್ಯ ಕಾಡನ್ನು ಸೆಟ್ ಅಪ್ ಮಾಡಲಾಗಿದೆ ಎಂದು ಹೇಳಿದ್ದಾರೆ.
65 ದಿನಗಳ ಚಿತ್ರೀಕರಣ ಮುಗಿಸಿದ್ದು, ಇನ್ನು 25 ದಿನ ಬಾಕಿ ಇದೆ. ಮಾರ್ಚ್ ಅಂತ್ಯದ ವೇಳೆಗೆ ಇಡೀ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸುವ ಭರವಸೆ ವ್ಯಕ್ತ ಪಡಿಸಿದ್ದಾರೆ. ರೈತನ ಮತ್ತು ಕೋಣಗಳು ಓಡುತ್ತಿರುವ ಪೋಸ್ಟರ್ ನಿಂದಾಗಿ ಕಾಂತಾರ ಸಿನಿಮಾ ಸಾಕಷ್ಟು ಆಸಕ್ತಿ ಕೆರಳಿಸಿದೆ. ಇತ್ತೀಚೆಗೆ ತಾವು ಕಂಬಳ ಓಟವನ್ನು ಶೂಟಿಂಗ್ ಮಾಡಿದ್ದಾಗಿ ರಿಷಭ್ ಹೇಳಿದ್ದಾರೆ. ಇದು ಸಿನಿಮಾದ ಪ್ರಮುಖ ಅಂಶವಾಗಿದ್ದು ಕೋಣ ಓಡಿಸುವ ಜಾಕಿಯಾಗಲು ತರಬೇತಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: 25 ವರ್ಷಗಳ ನಂತರ ಕನ್ನಡಕ್ಕೆ ಮರಳಿದ ಅರ್ಚನಾ: ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ' ದಲ್ಲಿ ನಟನೆ
90ರ ದಶಕದ ಸಿನಿಮಾವಾಗಿರುವುದರಿಂದ ಸಾಂಪ್ರದಾಯಿಕ ಕಂಬಳ ಓಟದ ದೃಶ್ಯದ ಚಿತ್ರೀಕರಣ ಅಗತ್ಯವಾಗಿದೆ. ಇದರಲ್ಲಿ ನಾನು ಮರದ ದಿಮ್ಮಿಗಳ ಮೇಲೆ ನಿಂತು ರೇಸ್ ಮಾಡುವಾಗ ಕೋಣದ ಬಾಲ ಹಿಡಿದಿದ್ದೆ ಎಂದು ಹೇಳಿದ್ದಾರೆ. ಈ ದೃಶ್ಯಗಳ ಚಿತ್ರೀಕರಣ ಮಾಡುವ ಮೊದಲು ಸಾಕಷ್ಟು ಪೂರ್ವ ತಯಾರಿ ನಡಸಿದ್ದಾಗಿ ತಿಳಿಸಿದ್ದಾರೆ. ನಾನು ಇದೇ ಊರಿನವನಾದ್ದರಿಂದ ನನಗೆ ಕೃಷಿಯ ಅನುಭವವಿದೆ, ಹೀಗಾಗಿ ನಾನು ಮ್ಯಾನೇಜ್ ಮಾಡಿದೆ ಎಂದು ಖುಷಿಯಾಗಿ ಹೇಳಿದ್ದಾರೆ.
ಜುಲೈ ತಿಂಗಳಲ್ಲಿ ರಿಲೀಸ್ ಮಾಡಲು ನಿರ್ದೇಶಕರು ಮುಂದಾಗಿದ್ದಾರೆ. ತಮ್ಮ ಸಿನಿಮಾದ ಸಾಹಸ ದೃಶ್ಯಗಳಲ್ಲಿ ಡ್ಯೂಪ್ ಬಳಕೆ ಮಾಡದೇ ಪ್ರತಿ ಪೈಟಿಂಗ್ ಮಾಡಿರುವುದಾಗಿ ರಿಷಬ್ ಹೇಳಿದ್ದಾರೆ. ಕಾಂತಾರ ಸಂಗೀತವನ್ನು ಅಜನೀಶ್ ಲೋಕನಾಥ್ ಮತ್ತು ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ.