
ಸಿನಿಮಾ ಸ್ಟಿಲ್
ಪ್ರತಿಷ್ಟಿತ ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿರುವ 9 ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ 'ಡೊಳ್ಳು' ಸಿನಿಮಾ ಆಯ್ಕೆಯಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಪಟ್ಟಿ ಸಿದ್ಧಪಡಿಸಿದೆ.
ಇದನ್ನೂ ಓದಿ: 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರತಂಡದಿಂದ ಶಿರಸಿಯಲ್ಲಿ ಅಡಿಕೆ ಸುಲಿಯುವ ಸ್ಪರ್ಧೆ!

ವಿದೇಶದಲ್ಲಿ ಭಾರತವನ್ನು ಪ್ರತಿನಿಧಿಸುವ ಸಿನಿಮಾಗಳ ಸಾಲಲ್ಲಿ ಡೊಳ್ಳು ಸಿನಿಮಾವನ್ನು ಆಯ್ಕೆ ಮಾಡಿರುವುದು ತುಂಬಾ ಹೆಮ್ಮೆ ಎನ್ನಿಸುತ್ತದೆ ಎಂದು ಡೊಳ್ಳು ಸಿನಿಮಾ ನಿರ್ದೇಶಕ ಸಾಗರ್ ಪುರಾಣಿಕ್ ಸಂತಸ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 'ಪುಷ್ಪ' ಸಿನಿಮಾವನ್ನು ನಾಚಿಸುತ್ತಾ ಸಂಚಾರಿ ವಿಜಯ್ 'ಮೇಲೊಬ್ಬ ಮಾಯಾವಿ': ಪುಷ್ಪಗಿರಿ ಅರಣ್ಯಪ್ರದೇಶದ ಹರಳುಗಲ್ಲು ಮಾಫಿಯಾ ಕಥೆ
ಡೊಳ್ಳು ಸಿನಿಮಾವನ್ನು ಸ್ಯಾಂಡಲ್ ವುಡ್ ನಿರ್ದೇಶಕ ಪವನ್ ವಡೆಯರ್ ನಿರ್ಮಾಣ ಮಾಡಿದ್ದಾರೆ. ಸಾಗರ್ ಪುರಾಣಿಕ್ ಅವರು ಈ ಹಿಂದೆ 'ಮಹಾನ್ ಹುತಾತ್ಮ' ಎನ್ನುವ ಕಿರುಚಿತ್ರ ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು ಎನ್ನುವುದು ಗಮನಾರ್ಹ.