'ಜ್ಯೂಲಿಯೆಟ್ 2' ಸಿನಿಮಾದಲ್ಲಿ ಪ್ರೇಮಂ ಪೂಜ್ಯಂ ಬೆಡಗಿ ಬೃಂದಾ ಆಚಾರ್ಯ
ನಟ ಪ್ರೇಮ್ ಅವರ 25 ನೇ ಚಿತ್ರ, ಪ್ರೇಮಂ ಪೂಜ್ಯಂನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಬೃಂದಾ ಆಚಾರ್ಯ ಮೊಟ್ಟ ಮೊದಲ ಬಾರಿಗೆ ಮಹಿಳಾ ಕೇಂದ್ರಿತ ಕಥೆಯುಳ್ಳ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
Published: 15th February 2022 01:18 PM | Last Updated: 15th February 2022 01:37 PM | A+A A-

ಬೃಂದಾ ಆಚಾರ್ಯ
ನಟ ಪ್ರೇಮ್ ಅವರ 25 ನೇ ಚಿತ್ರ, ಪ್ರೇಮಂ ಪೂಜ್ಯಂನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಬೃಂದಾ ಆಚಾರ್ಯ ಮೊಟ್ಟ ಮೊದಲ ಬಾರಿಗೆ ಮಹಿಳಾ ಕೇಂದ್ರಿತ ಕಥೆಯುಳ್ಳ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಜ್ಯೂಲಿಯೆಟ್ 2 ಸಿನಿಮಾದಲ್ಲಿ ಬೃಂದಾ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇಡೀ ಚಿತ್ರವನ್ನು ಕುದುರೆಮುಖದ ಆಳವಾದ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಚಿತ್ರದ ಎಪ್ಪತ್ತರಷ್ಟು ಭಾಗವನ್ನು ಕಡಿಮೆ ಬೆಳಕಿನಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಪ್ರೇಮಂ ಪೂಜ್ಯಂ ಎರಡನೇ ಅವತರಣಿಕೆ ಘೋಷಣೆ: ಸೆಕೆಂಡ್ ಪಾರ್ಟ್ ನಲ್ಲಿ ಕ್ಲಾಸ್ ಮತ್ತು ಮಾಸ್ ಎರಡರ ಮಿಶ್ರಣ
ವಿರಾಟ್ ಮೋಷನ್ ಪಿಕ್ಚರ್ಸ್ ಮತ್ತು ಪಿಎಲ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಲಿಕ್ತ್ ಆರ್ ಕೋಟ್ಯಾನ್ ನಿರ್ಮಿಸಿರುವ ಜೂಲಿಯೆಟ್ 2 ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಶೆಂಟೋ ವಿ ಆಂಟೊ ಅವರ ಛಾಯಾಗ್ರಹಣವಿದೆ.