'ಮೆಜೆಸ್ಟಿಕ್' ಸಿನಿಮಾ ಥರ ಇನ್ನೊಂದು ಸಿನಿಮಾ ಮಾಡೋಕಾಗಲ್ಲ: ದಾಸ ದರ್ಶನ್ ಅಭಿನಯದ 'ಮೆಜೆಸ್ಟಿಕ್' ರೀರಿಲೀಸ್
ಪಿ.ಎನ್ ಸತ್ಯ ನಿರ್ದೇಶಿಸಿ, ಬಾ.ಮಾ ಹರೀಶ್- ಎಂ.ಜಿ.ರಾಮಮೂರ್ತಿ ನಿರ್ಮಾಣ ಮಾಡಿದ್ದ ಮೆಜೆಸ್ಟಿಕ್ ಸಿನಿಮಾವನ್ನು ಸುಧಾರಿತ DTS ಟೆಕ್ನಾಲಜಿ ಬಳಸಿ ಬಿಡುಗಡೆ ಮಾಡಲಾಗುತ್ತಿದೆ.
Published: 16th February 2022 02:51 PM | Last Updated: 16th February 2022 03:02 PM | A+A A-

ದರ್ಶನ್
ಚಾಲೆಂಜಿಂಗ್ ಸ್ಟಾರ್ ಅವರು ನಾಯಕ ನಟರಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಸರಿಯಾಗಿ ಫೆ.8ರಂದು 20 ವರ್ಷಗಳಾದುವು. ಮೊದಲ ಬಾರಿ ನಾಯಕನಾಗಿ ಅವರು 20 ವರ್ಷಗಳ ಹಿಂದೆ ತೆರೆ ಕಂಡ 'ಮೆಜೆಸ್ಟಿಕ್' ಸಿನಿಮಾದಲ್ಲಿ ನಟಿಸಿದ್ದರು.
ಇದನ್ನೂ ಓದಿ: ಕೆಜಿಎಫ್ 2 ವಿರುದ್ಧ ತೊಡೆ ತಟ್ಟಿದ್ದ 'ಲಾಲ್ ಸಿಂಗ್ ಛಡ್ಡಾ' ರೇಸ್ನಿಂದ ಹಿಂದಕ್ಕೆ! ಬಿಡುಗಡೆ ದಿನಾಂಕ ಬದಲಾಗಿದ್ದೇಕೆ?
ಅದಾಗಿ ಎಷ್ಟೋ ಹಿಟ್ ಸಿನಿಮಾಗಳನ್ನು ನೀಡಿದ್ದರೂ ದರ್ಶನ್ ಅವರಿಗೆ 'ಮೆಜೆಸ್ಟಿಕ್' ಸಿನಿಮಾ ತುಂಬಾನೇ ಸ್ಪೆಷಲ್. ಮೊದಲ ಸಿನಿಮಾ ಎನ್ನುವ ಪ್ರೀತಿ ಒಂದೆಡೆಯಾದರೆ ಆ ಸಿನಿಮಾದಂತೆ ತಮ್ಮ ಇನ್ನೊಂದು ಸಿನಿಮಾ ಬರದು ಎನ್ನುವುದು ದರ್ಶನ್ ಅಭಿಪ್ರಾಯ.
ಇದನ್ನೂ ಓದಿ: ಸದ್ದು ಮಾಡುತ್ತಿದೆ ವಿನೋದ್ ಪ್ರಭಾಕರ್ ಸ್ಟಾರರ್ 'ವರದ' ಟ್ರೇಲರ್: ಈ ವಾರ ಚಿತ್ರ ಬಿಡುಗಡೆ
ದರ್ಶನ್ ಅಭಿನಯದ 'ಮೆಜೆಸ್ಟಿಕ್' ಸಿನಿಮಾ ಫೆ.18ರಂದು ರೀರಿಲೀಸ್ ಆಗುತ್ತಿದೆ. ಮೊದಲು ತೆರೆಕಂಡಾಗ ಮೆಜೆಸ್ಟಿಕ್ ಸಿನಿಮಾವನ್ನು ಆಗಿನ ಸುಧಾರಿತ ಸೌಂಡ್ ಟೆಕ್ನಾಲಜಿಯಾಗಿದ್ದ 'Dolby' ಬಳಸಿ ನಿರ್ಮಿಸಲಾಗಿತ್ತು. ಇದೀಗ ಸಿನಿಮಾ ಸೌಂಡನ್ನು ಅದಕ್ಕಿಂತ ಸುಧಾರಿತ DTS ಟೆಕ್ನಾಲಜಿ ಬಳಸಿ ಬಿಡುಗಡೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಚಿತ್ರೋದ್ಯಮದಲ್ಲಿ 26 ವರ್ಷಗಳು: ಕನಸುಗಳನ್ನು ಬೆನ್ನಟ್ಟಿ ಹೋಗಲು ಇನ್ನೂ ಸಾಕಷ್ಟಿದೆ ಎಂದ ಕಿಚ್ಚ ಸುದೀಪ್
ತಾವು ನಟಿಸಿರುವ ಸಿನಿಮಾಗಳಿಗೆ ಹೋಲಿಸಿದರೆ 'ಮೆಜೆಸ್ಟಿಕ್' ಸಿನಿಮಾ ವಿಭಿನ್ನ ಕಥೆಯನ್ನು ಹೊಂದಿದೆ ಎನ್ನುತ್ತಾರೆ ದರ್ಶನ್. ಅದರಲ್ಲಿ ನಾಯಕ ನಟ ಕೆಟ್ಟವನಾಗಿದ್ದು ಒಳ್ಳೆಯವನಂತೆ ನಟಿಸುತ್ತಿರುತ್ತಾನೆ.