ಸ್ಯಾಂಡಲ್ ವುಡ್ ನಲ್ಲೂ ಬಪ್ಪಿ ಲಹಿರಿ ಸಂಗೀತಸುಧೆ: ಮ್ಯೂಸಿಕ್ ಮಾಂತ್ರಿಕನನ್ನು ಕನ್ನಡಕ್ಕೆ ಕರೆತಂದದ್ದು ದ್ವಾರಕೀಶ್!
ಸಂಗೀತ ಮಾಂತ್ರಿಕ ಬಪ್ಪಿ ಲಹಿರಿ ಕನ್ನಡದಲ್ಲಿಯೂ ಕೆಲ ಹಾಡುಗಳನ್ನು ಹಾಡಿ ಮ್ಯಾಜಿಕ್ ಮಾಡಿದ್ದರು. ಅವರನ್ನು ಮುಂಬಯಿಯಿಂದ ಬೆಂಗಳೂರಿಗೆ ಕರೆತಂದ ಶ್ರೇಯಸ್ಸು ಹಿರಿಯ ನಟ ದ್ವಾರಕೀಶ್ಗೆ ಸಲ್ಲುತ್ತದೆ.
Published: 17th February 2022 02:12 PM | Last Updated: 17th February 2022 02:29 PM | A+A A-

ಬಪ್ಪಿ ಲಹಿರಿ
ಬುಧವಾರ ಖ್ಯಾತ ಗಾಯಕ ಬಪ್ಪಿ ಲಹಿರಿ ತಮ್ಮ 69 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಬಪ್ಪಿ ಲಹಿರಿ ನಿಧನದಿಂದ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಸಂಗೀತ ಮಾಂತ್ರಿಕ ಬಪ್ಪಿ ಲಹಿರಿ ಕನ್ನಡದಲ್ಲಿಯೂ ಕೆಲ ಹಾಡುಗಳನ್ನು ಹಾಡಿ ಮ್ಯಾಜಿಕ್ ಮಾಡಿದ್ದರು. ಅವರನ್ನು ಮುಂಬಯಿಯಿಂದ ಬೆಂಗಳೂರಿಗೆ ಕರೆತಂದ ಶ್ರೇಯಸ್ಸು ಹಿರಿಯ ನಟ ದ್ವಾರಕೀಶ್ಗೆ ಸಲ್ಲುತ್ತದೆ.
ಕನ್ನಡಿಗರಿಗೆ ಬಪ್ಪಿ ಲಹಿರಿ ಎಂದರೆ ತಕ್ಷಣ ಅವರ ಚಿನ್ನದ ಒಡವೆಗಳೇ ನೆನಪಾಗುತ್ತವೆ. 1984 ರಲ್ಲಿ ದ್ವಾರಕೀಶ್ ನಿರ್ದೇಶನದ ಗಂಗ್ವಾ ಮತ್ತು 1986ರಲ್ಲಿ ತೆರೆಕಂಡ ಇವರ ನಿರ್ಮಾಣದ ‘ಆಫ್ರಿಕಾದಲ್ಲಿ ಶೀಲಾ’ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು ಬಪ್ಪಿ ಲಹಿರಿ.
“1984 ರಲ್ಲಿ ನನ್ನ ನಿರ್ಮಾಣ ಸಂಸ್ಥೆಯಾದ ದ್ವಾರಕೀಶ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಿಸಲಾದ ನನ್ನ ಚಿತ್ರ ಗಂಗ್ವಾಗೆ ಬಪ್ಪಿ ಮೊದಲ ಬಾರಿಗೆ ಸಂಗೀತ ನೀಡಿದರು. ಇದರಲ್ಲಿ ರಜನಿಕಾಂತ್, ಶಬಾನಾ ಅಜ್ಮಿ, ಖಾದರ್ ಖಾನ್, ಅಂಬರೀಶ್ ಪುರಿ ಕೂಡ ಇದ್ದರು. ನಂತರ ಆಫ್ರಿಕಾದಲ್ಲಿ ಶೀಲಕ್ಕೆ ಸಂಗೀತವನ್ನೂ ಮಾಡಿದರು ಎಂದು ದ್ವಾರಕೀಶ್ ಹೇಳಿದ್ದಾರೆ. ಶೀಲಾ ಓ ಮೈ ಶೀಲಾ ಹಾಡನ್ನು ಲಂಡನ್ ನಲ್ಲಿ ಚಿತ್ರೀಕರಿಸಲು ಬಪ್ಪಿ ಲಹಿರಿ ನನಗೆ ಸ್ಫೂರ್ತಿಯಾಗಿದ್ದರು.

ಅವರು ಮುಂಬೈನಲ್ಲಿರುವ ಅವರ ಮನೆಯಲ್ಲಿ ಸಂಗೀತ ಸಂಯೋಜಿಸುತ್ತಿದ್ದರು ಮತ್ತು ನಾನು ಅವರ ಮನೆಗೆ ಹೋಗುತ್ತಿದ್ದೆ. ನಾನು ಅಲ್ಲಿಗೆ ಹೋದಾಗ ಅವರು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ಅವರು ತುಂಬಾ ಸ್ನೇಹಪರರಾಗಿದ್ದರು ಬಪ್ಪಿ ಲಹಿರಿಗೆ ಯಾವುದೇ ರೀತಿಯ ಅಹಂಕಾರವಿರಲಿಲ್ಲ ಎಂದು ದ್ವಾರಕೀಶ್ ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ನನಗಾಗಿ ಒಳ್ಳೆಯ ಹಾಡುಗಳನ್ನು ಕಂಪೋಸ್ ಮಾಡಿದ್ದು ಮಾತ್ರವಲ್ಲ, ಲಂಡನ್ ನಲ್ಲಿ ಹಾಡಿನ ಚಿತ್ರೀಕರಣವನ್ನೂ ಏರ್ಪಡಿಸಿದ್ದರು. ಆಫ್ರಿಕಾದಲಿ ಶೀಲಕ್ಕೆ ಬಪ್ಪಿಯನ್ನು ಕನ್ನಡ ಇಂಡಸ್ಟ್ರಿಗೆ ಕರೆತಂದೆ, ಡಜೊತೆಗೆ, ಹಿಂದಿ, ತಮಿಳಿನ ಮೂರು ಭಾಷೆಗಳಲ್ಲಿ ಸಿನಿಮಾ ಮಾಡುತ್ತಿದ್ದೆ. ಅವರು ಎಲ್ಲಾ ಭಾಷೆಗಳಿಗೆ ಸಂಗೀತ ನೀಡಿದ್ದಾರೆ. ಲಂಡನ್ ಸ್ಟುಡಿಯೋದಲ್ಲಿ ನನ್ನ ಚಿತ್ರದ ಹೆಸರು ಮತ್ತು ಹಾಡು ಹೇಳಿದಾಗ ನಾನು ರೋಮಾಂಚನಗೊಂಡೆ ಎಂದು ದ್ವಾರಕೀಶ್ ಸ್ಮರಿಸಿದ್ದಾರೆ. ಅಮಿತಾಬ್ ಬಚ್ಚನ್ ಚಿತ್ರಗಳಿಗಾಗಿ ಅವರು ರೆಕಾರ್ಡ್ ಮಾಡಿದ ಎಲ್ಲಾ ಹಾಡುಗಳನ್ನು ನಾನು ಬಹಳ ಇಷ್ಟ ಪಟ್ಟಿದ್ದೆ.
ಇದನ್ನೂ ಓದಿ: ಬಾಲಿವುಡ್ ಹಿರಿಯ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ನಿಧನ
ಇದರ ಜೊತೆಗೆ ವಿಷ್ಣವರ್ಧನ್ ನಟನೆಯ 2 ಸಿನಿಮಾಗಳಿಗೂ ಬಪ್ಪಿ ಸಂಗೀತ ಸಂಯೋಜನೆ ಮಾಡಿದ್ದರು. ‘ಕೃಷ್ಣ ನೀ ಬೇಗನೆ ಬಾರೋ’ ಮತ್ತು 1991ರಲ್ಲಿ ತರೆಕಂಡ ‘ಪೊಲೀಸ್ ಮತ್ತು ದಾದಾ’ 1989ರಲ್ಲಿ ತೆರೆಕಂಡ ಅಂಬರೀಷ್ ಅಭಿನಯದ‘ಗುರು’ ಸಿನಿಮಾಗಳಿಗೆ ಸಂಗೀತ ನೀಡಿದ್ದರು.
ಬಪ್ಪಿ ಲಹರಿ 2014ರಲ್ಲಿ‘ಲವ್ ಇನ್ ಮಂಡ್ಯ’ ಸಿನಿಮಾದಲ್ಲಿ ಹಾಡಿದ್ದರು. ಸಿಂಚನಾ ದೀಕ್ಷಿತ್ ಜೊತೆಗೆ ಕರೆಂಟ್ ಹೋದ ಟೈಮಲ್ಲಿ ಹಾಡಿಗೆ ದನಿಗೂಡಿಸಿದ್ದರು. ಈ ಹಾಡಿಗೆ ಅನೂಪ್ ಸೀಳಿನ್ ಸಂಗೀತ ನಿರ್ದೇಶಿಸಿದ್ದರು.
1952 ರಲ್ಲಿ ಬಂಗಾಳಿ ಬ್ರಾಹ್ಮಣ ಕುಟುಂಬದಲ್ಲಿ ಬಪ್ಪಿ ಲಹಿರಿ ಜನಿಸಿದರು, ಅಪ್ಪರೇಶ್ ಲಾಹಿರಿ ಮತ್ತು ಬಾನ್ಸುರಿ ಲಾಹಿರಿ ಅವರ ತಂದೆ ತಾಯಿ, ಪೋಷಕರು ಕೂಡ ಸಹ ಸಂಗೀತಗಾರರಾಗಿದ್ದರು. ಲಹಿರಿ ಅವರು ತಮ್ಮ ಮೂರನೇ ವಯಸ್ಸಿನಲ್ಲಿ ಹಾಡಲು ಪ್ರಾರಂಭಿಸಿದರು.