ಪ್ರೀತಿಯ ಹೃದಯ ಇರುವಲ್ಲಿ ಸುಂದರ ಕುಟುಂಬ: 'ಫ್ಯಾಮಿಲಿ ಪ್ಯಾಕ್' ನಿರ್ದೇಶಕ ಅರ್ಜುನ್ ಕುಮಾರ್
ಸಂಕಷ್ಟ ಕರ ಗಣಪತಿಯ ಚಿತ್ರದ ಯಶಸ್ಸು ಮತ್ತೆ ನಟ ಲಿಖಿತ್ ಶೆಟ್ಟಿ ಮತ್ತು ನಿರ್ದೇಶಕ ಅರ್ಜುನ್ ಕುಮಾರ್ ಅವರನ್ನು ಫ್ಯಾಮಿಲಿ ಪ್ಯಾಕ್ಗಾಗಿ ಒಟ್ಟುಗೂಡಿಸಿದೆ. ಈ ಚಿತ್ರದ ತಯಾರಿ ಸುದೀರ್ಘ ಪ್ರಕ್ರಿಯೆಯಾಗಿತ್ತು. ನಿರ್ದೇಶಕ ಅರ್ಜುನ್, 2018 ರಲ್ಲಿ ಪ್ರಾರಂಭವಾದ ಯೋಜನೆಯು ಪ್ರೇಕ್ಷಕರನ್ನು ತಲುಪಲು ಸ್ವಲ್ಪ ಸಮಯ ತೆಗೆದುಕೊಂಡಿದೆ ಎಂದು ಹೇಳುತ್ತಾರೆ.
Published: 17th February 2022 01:44 PM | Last Updated: 17th February 2022 01:50 PM | A+A A-

ಫ್ಯಾಮಿಲಿ ಪ್ಯಾಕ್ ಚಿತ್ರದ ದೃಶ್ಯ
ಸಂಕಷ್ಟ ಕರ ಗಣಪತಿಯ ಚಿತ್ರದ ಯಶಸ್ಸು ಮತ್ತೆ ನಟ ಲಿಖಿತ್ ಶೆಟ್ಟಿ ಮತ್ತು ನಿರ್ದೇಶಕ ಅರ್ಜುನ್ ಕುಮಾರ್ ಅವರನ್ನು ಫ್ಯಾಮಿಲಿ ಪ್ಯಾಕ್ಗಾಗಿ ಒಟ್ಟುಗೂಡಿಸಿದೆ. ಈ ಚಿತ್ರದ ತಯಾರಿ ಸುದೀರ್ಘ ಪ್ರಕ್ರಿಯೆಯಾಗಿತ್ತು. ನಿರ್ದೇಶಕ ಅರ್ಜುನ್, 2018 ರಲ್ಲಿ ಪ್ರಾರಂಭವಾದ ಯೋಜನೆಯು ಪ್ರೇಕ್ಷಕರನ್ನು ತಲುಪಲು ಸ್ವಲ್ಪ ಸಮಯ ತೆಗೆದುಕೊಂಡಿದೆ ಎಂದು ಹೇಳುತ್ತಾರೆ.
ತಡವಾಗಿ ಬರುವುದು ಉತ್ತಮವಾಗಿರುತ್ತದೆ, ಎಂದಿಗೂ ಪ್ರಯತ್ನ ಮಾಡದೇ ಇರುವುದಕ್ಕಿಂತ ತಡವಾಗಿಯಾದರೂ ಮಾಡುವುದು ಒಳ್ಳೆಯದು. ಹಾಗಾಗಿ ಇಂದು ಪ್ರೈಮ್ ವಿಡಿಯೋದಲ್ಲಿ ಚಿತ್ರವನ್ನು ಪ್ರೇಕ್ಷಕರಿಗೆ ತೋರಿಸಲು ನಾವು ಸಂತೋಷಪಡುತ್ತೇವೆ. ಮೊದಲ ಚಿತ್ರದ ಅನುಭವವು ಎರಡನೇ ಚಿತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ನನಗೆ ಸಹಾಯ ಮಾಡಿತು. ಪಿಆರ್ ಕೆ ಸ್ಟುಡಿಯೊ ಸಂಸ್ಥೆಯ ಬೆಂಬಲಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದು ನಿರ್ದೇಶಕ ನಿರ್ದೇಶಕರು ಹೇಳುತ್ತಾರೆ.
ಎರಡನೇ ಬಾರಿಗೆ ಅರ್ಜುನ್ ಜೊತೆ ಕೈಜೋಡಿಸುತ್ತಿರುವ ಖುಷಿಯಲ್ಲಿರುವ ಲಿಖಿತ್ ಚಿತ್ರವು ಪ್ರೀತಿ, ಮದುವೆ ಮತ್ತು ಕುಟುಂಬದ ಬಗ್ಗೆ ಇಡೀ ಕುಟುಂಬಕ್ಕೆ ಮನರಂಜನೆ ನೀಡಲಿದೆ ಎನ್ನುತ್ತಾರೆ.
ಪ್ರೀತಿಯಲ್ಲಿ ಪರಸ್ಪರ ಒಪ್ಪಿಕೊಳ್ಳುವುದು ಮತ್ತು ಸ್ವೀಕಾರವು ಬಹಳ ಮುಖ್ಯವಾಗುತ್ತದೆ. ಕುಟುಂಬದ ಸದಸ್ಯರು ಒಂದೇ ಕಡೆಯಲ್ಲಿ ಇಲ್ಲದಿದ್ದಾಗ ಏನಾಗುತ್ತದೆ ಎಂಬುದನ್ನು ಫ್ಯಾಮಿಲಿ ಪ್ಯಾಕ್ನಲ್ಲಿ ತೋರಿಸಿದ್ದೇವೆ. ನಾವೆಲ್ಲರೂ 'ಹೋಮ್ ಸ್ವೀಟ್ ಹೋಮ್' ಕಲ್ಪನೆಯನ್ನು ಇಷ್ಟಪಡುತ್ತೇವೆ. ಮನೆ ಎಂದರೆ ಹೃದಯ ಇರುವ ಸ್ಥಳವಾದ್ದರಿಂದ ಅದನ್ನು ಶಾಂತವಾಗಿ ಮತ್ತು ಶಾಂತಿಯಿಂದ ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳುತ್ತಾರೆ.
ಇದನ್ನೂ ಓದಿ: ಫ್ಯಾಮಿಲಿ ಪ್ರಧಾನ 'ಫ್ಯಾಮಿಲಿ ಪ್ಯಾಕ್' ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ ಬಿಡುಗಡೆ
ನಾಲ್ಕನೇ ಮಹಡಿಯಿಂದ ಜಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಸುದ್ದಿ ತುಣುಕನ್ನು ತೆಗೆದುಕೊಂಡು ಚಿತ್ರ ತಯಾರಿಸಲಾಗಿದೆ. ಒಂಟಿ ಹುಡುಗನ ಕಲ್ಪನೆಯು ನಂತರ ಒಂದು ಕುಟುಂಬದ ಕಥೆಯಾಗಿ ಮಾರ್ಪಟ್ಟಿತು. ನಾನು ಈ ಕಥೆಯನ್ನು ಸ್ಕ್ರಿಪ್ಟ್ ಮಾಡುವಾಗ, ಎರಡು ಕುಟುಂಬಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದಿದ್ದೇವೆ ಎನ್ನುತ್ತಾರೆ.
ಎಲ್ಲ ಭರವಸೆ ಮತ್ತು ಬದುಕುವ ಇಚ್ಛೆಯನ್ನು ಕಳೆದುಕೊಂಡಿರುವ ಅಭಿ ಎಂಬ ಹುಡುಗನಾಗಿ ಲಿಖಿತ್ ನಟಿಸಿದ್ದಾರೆ. ರಂಗಾಯಣ ರಘು ನಟಿಸಿದ ಪ್ರೇತದೊಂದಿಗೆ ಅವನು ಮುಖಾಮುಖಿಯಾಗಲು ಪ್ರಾರಂಭಿಸುತ್ತಾನೆ. "ಇದೊಂದು ಹಾಸ್ಯಮಯ ಪಯಣ, ಮತ್ತು ರಂಗಾಯಣ ರಘು ಹೊರತುಪಡಿಸಿ ಬೇರೆ ಯಾವುದೇ ನಟರು ಈ ಪಾತ್ರವನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಫ್ಯಾಮಿಲಿ ಪ್ಯಾಕ್ನ ಸಹ-ನಿರ್ಮಾಪಕ ಲಿಖಿತ್ ಹೇಳುತ್ತಾರೆ.
ಲಿಖಿತ್ ಗೆ ನಾಯಕಿ ಅಮೃತ ಐಯ್ಯಂಗಾರ್: ಫ್ಯಾಮಿಲಿ ಪ್ಯಾಕ್ ನನ್ನ ವೃತ್ತಿ ಜೀವನದಲ್ಲಿ ಅತಿ ಮುಖ್ಯ ಚಿತ್ರ. ಅಷ್ಟೊಂದು ಆಸಕ್ತಿಕರವಾದ ಪಾತ್ರವಾಗಿದೆ. ಇದೊಂದು ಸಂಪೂರ್ಣ ಕುಟುಂಬ ಮನರಂಜನಾ ಚಿತ್ರವಾಗಿದೆ ಎಂದು ಅಮೃತ ಐಯ್ಯಂಗಾರ್ ಹೇಳುತ್ತಾರೆ.
ಚಿತ್ರದಲ್ಲಿ ರಂಗಾಯಣ ರಘು, ದತ್ತಣ್ಣ, ಸಿಹಿ ಕಹಿ ಚಂದ್ರು, ಅಚ್ಯುತ್ ಕುಮಾರ್, ಪದ್ಮಜಾ ರಾವ್, ತಿಲಕ್ ಮತ್ತು ನಾಗಭೂಷಣ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಾಸ್ತಿ ಅವರ ಸಂಭಾಷಣೆಯೊಂದಿಗೆ, ಫ್ಯಾಮಿಲಿ ಪ್ಯಾಕ್ ಗುರುಕಿರಣ್ ಅವರ ಸಂಗೀತ ಸಂಯೋಜನೆ ಮತ್ತು ಛಾಯಾಗ್ರಹಣವನ್ನು ಹೊಂದಿದೆ. ಉದಯ್ ಲೀಲಾ ಅವರ ಛಾಯಾಗ್ರಹಣವಿದೆ.