ನಾನು ಕಲಾವಿದರ ಮೇಲೆ ನನ್ನೆಲ್ಲಾ ಹಣ ಹೂಡಿದೆ, ಅವರು ಮತ್ತು ಕನ್ನಡ ಪ್ರೇಕ್ಷಕರು ನನ್ನ ಕೈಬಿಡಲಿಲ್ಲ: 'ಬಡವ ರಾಸ್ಕಲ್' ಹಾಫ್ ಸೆಂಚುರಿ
ಬಡವ ರಾಸ್ಕಲ್ ಸಿನಿಮಾ ಸದ್ಯದಲ್ಲೇ ತೆಲುಗಿನಲ್ಲೂ ತೆರೆ ಕಾಣಲಿದೆ. ಡಾಲಿ ಪಿಕ್ಚರ್ಸ್ ಸಂಸ್ಥೆಯಿಂದ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಯೋಚನೆಯನ್ನು ಧನಂಜಯ ಹೊರಹಾಕಿದ್ದಾರೆ.
Published: 20th February 2022 12:32 PM | Last Updated: 20th February 2022 12:32 PM | A+A A-

ಅಮೃತಾ ಐಯ್ಯಂಗಾರ್, ಧನಂಜಯ, ವಸಿಷ್ಠ ಸಿಂಹ ಮತ್ತು ನಿರ್ದೇಶಕ ಶಂಕರ್ ಗುರು
ಧನಂಜಯ್ ನಟಿಸಿ, ನಿರ್ಮಾಣ ಮಾಡಿದ 'ಬಡವ ರಾಸ್ಕಲ್' ಸಿನಿಮಾ 50 ದಿನಗಳನ್ನು ಪೂರೈಸಿದ ಪ್ರಯುಕ್ತ ಚಿತ್ರತಂಡ ಇತ್ತೀಚಿಗಷ್ಟೆ ಸಂಭ್ರಮಾಚರಣೆ ಆಚರಿಸಿಕೊಂಡಿದೆ.
ಇದನ್ನೂ ಓದಿ: ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಈ ಸಿನಿಮಾ ನೋಡಿದ್ದಿದ್ದರೆ ಬಡವ ರಾಸ್ಕಲ್ ಅಂದುಬಿಡೋರು: ಬಡವ ರಾಸ್ಕಲ್ ಚಿತ್ರವಿಮರ್ಶೆ
ಕಾರ್ಯಕ್ರಮದಲ್ಲಿ ಧನಂಜಯ ಅವರು ಸಿನಿಮಾದಲ್ಲಿ ಕೆಲಸ ನಿರ್ವಹಿಸಿದ ಕಾರ್ಮಿಕರು, ತಂತ್ರಜ್ಞರು, ಕಲಾವಿದರು, ಪ್ರದರ್ಶಕರು, ಸ್ನೇಹಿತರು ಹೀಗೆ ಸುಮಾರು 220ಕ್ಕೂ ಹೆಚ್ಚಿನ ಜನರಿಗೆ ಸ್ಮರಣಿಕೆ ಹಾಗೂ ಬೆಳ್ಳಿನಾಣ್ಯ ನೀಡಿ ಗೌರವಿಸಿದರು.
ದುಡ್ಡು ಬಂದಾಗ ಹೆಚ್ಚಿನವರು ಅದನ್ನು ಉದ್ಯಮಗಳಲ್ಲಿ, ವ್ಯವಹಾರಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ನಾನು ನನ್ನ ಹಣವನ್ನು ಕಲಾವಿದರ ಮೇಲೆ ಹೂಡಿಕೆ ಮಾಡಿದೆ. ಅದೀಗ ಫಲ ನೀಡಿದೆ. ಎಂದು ಧನಂಜಯ ಭಾವುಕರಾಗಿ ನುಡಿದರು.
ಇದನ್ನೂ ಓದಿ: ಪ್ರೇಮಿಗಳು ಮದುವೆ ಮುನ್ನ ನೋಡಲೇಬೇಕಾದ ಸೋಷಿಯಲ್ ಎಕ್ಸ್ ಪೆರಿಮೆಂಟ್ ಸಿನಿಮಾ: Bytwo ಲವ್ ಚಿತ್ರವಿಮರ್ಶೆ
ಡಾಲಿ ಪಿಕ್ಚರ್ಸ್ ಸಂಸ್ಥೆಯಿಂದ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಯೋಚನೆಯನ್ನು ಧನಂಜಯ ಹೊರಹಾಕಿದ್ದಾರೆ. ಬಡವ ರಾಸ್ಕಲ್ ಸಿನಿಮಾ ಸದ್ಯದಲ್ಲೇ ತೆಲುಗಿನಲ್ಲೂ ತೆರೆ ಕಾಣಲಿದೆ. ಈ ತಿಂಗಳ 27ರ ಭಾನುವಾರ ಸಂಜೆ ಕಲರ್ಸ್ ವಾಹಿನಿಯಲ್ಲಿ ನಮ್ಮ ಚಿತ್ರ ಪ್ರದರ್ಶನ ಕಾಣುತ್ತಿದೆ.
ಈ ಹಿಂದೆ ಪಾರ್ವತಮ್ಮ ರಾಜಕುಮಾರ್ ಅವರು ಈ ರೀತಿಯ ಸಮಾರಂಭ ಆಯೋಜಿಸಿ, ಎಲ್ಲರಿಗೂ ಬೆಳ್ಳಿಯ ಲೋಟ ನೀಡುತ್ತಿದ್ದರು. ನನ್ನ ಬಳಿ ಅವರು ನೀಡಿರುವ ಮೂರು ಬೆಳ್ಳಿಯ ಲೋಟಗಳಿವೆ. ಇತ್ತೀಚಿಗೆ ಇಂತಹ ಸಮಾರಂಭ ಕಡಿಮೆಯಾಗಿತ್ತು. ಧನಂಜಯ್ ಮತ್ತೆ ಆರಂಭ ಮಾಡಿದ್ದಾರೆ ಒಳ್ಳೆಯದಾಗಲಿ ಎಂದು ರಂಗಾಯಣ ರಘು ಹಾರೈಸಿದರು.
ಇದನ್ನೂ ಓದಿ: ಮತ್ತೊಂದು ವಿಭಿನ್ನ, ಸದೃಢ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ: 'ಬಹುಕೃತ ವೇಷಂ' ಚಿತ್ರವಿಮರ್ಶೆ
ನಿರ್ದೇಶಕ ಶಂಕರ್ ಗುರು, ನಾಯಕಿ ಅಮೃತ ಅಯ್ಯಂಗಾರ್, ನಟ ನಾಗಭೂಷಣ, ಸಂಗೀತ ನಿರ್ದೇಶಕ ವಾಸುಕಿ ವೈಭವ್, ವಸಿಷ್ಠ ಸಿಂಹ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಆನಂದ್ ಆಡಿಯೋ ಶ್ಯಾಮ್, ನಿರ್ಮಾಪಕರಾದ ಕರಿಸುಬ್ಬು, ಸುಧೀಂದ್ರ, ಚಕ್ರವರ್ತಿ ಚಂದ್ರಚೂಡ್ ಮುಂತಾದ ಗಣ್ಯರು ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.