ನೀನಾಸಂ ಮಂಜು ನಿರ್ದೇಶನದ 'ಕನ್ನೇರಿ' ಸಿನಿಮಾಗೆ ವಸಿಷ್ಠ ಸಿಂಹ ಸಾಥ್: 'ಕಾಣದ ಊರಿಗೆ' ಸಾಂಗ್ ರಿಲೀಸ್!
'ಕನ್ನೇರಿ' ಸಿನಿಮಾಗಾಗಿ ನಟ ವಸಿಷ್ಠ ಸಿಂಹ ಹಾಡಿರುವ 'ಕಾಣದ ಊರಿಗೆ' ಎನ್ನುವ ಹಾಡು ಯೂಟ್ಯೂಬಿನಲ್ಲಿ ಬಿಡುಗಡೆಯಾಗಿದೆ. ಸಿನಿಮಾ ಕೋಟಿಗಾನಹಳ್ಳಿ ರಾಮಯ್ಯ ಅವರೇ ಬರೆದಿರುವ ಕಾದಂಬರಿಯನ್ನು ಆಧರಿಸಿದ್ದು, ನಿರ್ದೇಶಕ ನೀನಾಸಂ ಮಂಜು ಆ್ಯಕ್ಷನ್ ಕಟ್ ಹೇಳಿದ್ದಾರೆ.
Published: 20th February 2022 11:43 AM | Last Updated: 20th February 2022 12:45 PM | A+A A-

ಕನ್ನೇರಿ ಚಿತ್ರತಂಡ
ನೈಜ ಘಟನೆಯಾಧಾರಿತ ಮಹಿಳಾ ಪ್ರಧಾನ ಸಿನಿಮಾ 'ಕನ್ನೇರಿ' ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿದೆ. 'ಕನ್ನೇರಿ' ಸಿನಿಮಾಗಾಗಿ ನಟ ವಸಿಷ್ಠ ಸಿಂಹ ಹಾಡಿರುವ 'ಕಾಣದ ಊರಿಗೆ' ಎನ್ನುವ ಹಾಡು ಯೂಟ್ಯೂಬಿನಲ್ಲಿ ಬಿಡುಗಡೆಯಾಗಿದೆ.
ಇದನ್ನೂ ಓದಿ: ಪ್ರೇಮಿಗಳು ಮದುವೆ ಮುನ್ನ ನೋಡಲೇಬೇಕಾದ ಸೋಷಿಯಲ್ ಎಕ್ಸ್ ಪೆರಿಮೆಂಟ್ ಸಿನಿಮಾ: Bytwo ಲವ್ ಚಿತ್ರವಿಮರ್ಶೆ
ಕೋಟಿಗಾನಹಳ್ಳಿ ರಾಮಯ್ಯ ರಚಿಸಿರುವ ಸಾಲುಗಳಿಗೆ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೀರ್ತನಾ ಹೊಳ್ಳ ಹಾಗೂ ಇಂದು ನಾಗರಾಜ್ ಹಾಡಿಗೆ ಧ್ವನಿಯಾಗಿದ್ದಾರೆ.
ಇದನ್ನೂ ಓದಿ: ಮತ್ತೊಂದು ವಿಭಿನ್ನ, ಸದೃಢ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ: 'ಬಹುಕೃತ ವೇಷಂ' ಚಿತ್ರವಿಮರ್ಶೆ
ಸಿನಿಮಾ ಕೋಟಿಗಾನಹಳ್ಳಿ ರಾಮಯ್ಯ ಅವರೇ ಬರೆದಿರುವ ಕಾದಂಬರಿಯನ್ನು ಆಧರಿಸಿದ್ದು, ನಿರ್ದೇಶಕ ನೀನಾಸಂ ಮಂಜು ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಂಜು ಚಿತ್ರಕಥೆಯ ಜತೆಗೆ ಕಲಾ ನಿರ್ದೇಶನ ಕೂಡ ನಿಭಾಯಿಸಿದ್ದಾರೆ. ಕೋಟಿಗಾನಹಳ್ಳಿ ರಾಮಯ್ಯ ಈ ಚಿತ್ರಕ್ಕೆ ಸಾಹಿತ್ಯ ಮತ್ತು ಸಂಭಾಷಣೆಯನ್ನೂ ರಚಿಸಿದ್ದಾರೆ.
ಇದನ್ನೂ ಓದಿ: ಸಿಕ್ಸ್ ಪ್ಯಾಕ್ ಸಿನಿಮಾಗಳ ನಡುವೆ ಹೊಟ್ಟೆ ತುಂಬಾ ನಗಿಸುವ ಅತೃಪ್ತ ಆತ್ಮ: ಫ್ಯಾಮಿಲಿ ಪ್ಯಾಕ್ ಚಿತ್ರವಿಮರ್ಶೆ
ಪ್ರಕೃತಿಯ ಮಡಿಲಿನಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನರನ್ನು, ಅರಣ್ಯ ಇಲಾಖೆ ಒಕ್ಕಲೆಬ್ಬಿಸುತ್ತದೆ. ಬುಡಕಟ್ಟು ಹೆಣ್ಣುಮಕ್ಕಳು ಪಟ್ಟಣದಲ್ಲಿ ಮನೆಗೆಲಸಕ್ಕೆ ಸೇರಿ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಈ ರೀತಿ ಪಟ್ಟಣಕ್ಕೆ ಬಂದ ಬುಡಕಟ್ಟು ಜನಾಂಗದ ಬಾಲಕಿ ಮುತ್ತಮ್ಮ ಯಾನೆ ಕನ್ನೇರಿ ಮನೆಗೆಲಸ ಮಾಡುವಾಗ ಮನೆಯ ಮಾಲೀಕಳ ದೌರ್ಜನ್ಯಕ್ಕೆ ತುತ್ತಾಗಿ ಜೈಲು ಸೇರುತ್ತಾಳೆ. ಆಕೆ ಜೈಲಿನಿಂದ ಹೊರಬರಲು ನಡೆಸುವ ಹೋರಾಟದ ಕಥಾಹಂದರವೇ 'ಕನ್ನೇರಿ' ಸಿನಿಮಾದ ಕಥಾವಸ್ತು.
ಇದನ್ನೂ ಓದಿ: 'ಮೆಜೆಸ್ಟಿಕ್' ಸಿನಿಮಾ ಥರ ಇನ್ನೊಂದು ಸಿನಿಮಾ ಮಾಡೋಕಾಗಲ್ಲ: ದಾಸ ದರ್ಶನ್ ಅಭಿನಯದ 'ಮೆಜೆಸ್ಟಿಕ್' ರೀರಿಲೀಸ್
ಕನ್ನೇರಿ ಸಿನಿಮಾದಲ್ಲಿ ಅರ್ಚನಾ ಮಧುಸೂಧನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅನಿತಾ ಭಟ್, ಎಂ.ಕೆ.ಮಠ್, ಅರುಣ್ ಸಾಗರ್, ಕರಿಸುಬ್ಬು, ಸರ್ದಾರ್ ಸತ್ಯ ಒಳಗೊಂಡ ಪ್ರತಿಭಾನ್ವಿತ ಕಲಾವಿದರ ತಂಡ ಚಿತ್ರದಲ್ಲಿದೆ. 'ಬುಡ್ಡಿ ದೀಪ ಸಿನಿಮಾ ಹೌಸ್' ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗಣೇಶ್ ಹೆಗ್ಡೆ ಛಾಯಾಗ್ರಹಣ, ಸುಜಿತ್ ನಾಯಕ್ ಸಂಕಲನ 'ಕನ್ನೇರಿ' ಚಿತ್ರಕ್ಕಿದೆ.