Online Desk
ಕನ್ನಡದ ಹೊಚ್ಚ ಹೊಸ ಹಿಟ್ ಸಿನಿಮಾಗಳನ್ನು ಕನ್ನಡಿಗ ಚಂದಾದಾರರಿಗೆ ನೀಡುತ್ತಿರುವ ಒಟಿಟಿ ಫ್ಲಾರ್ಟ್ ಫಾರಂ ಜೀ5, ಇದೀಗ ಇತ್ತೀಚಿಗೆ ತೆರೆಕಂಡು ಜನಮೆಚ್ಚುಗೆ ಪಡೆದ ರವಿಚಂದ್ರನ್ ಅಭಿನಯದ 'ದೃಶ್ಯ೨' ಸಿನಿಮಾವನ್ನು ತನ್ನದಾಗಿಸಿಕೊಂಡಿದೆ. ಫೆ.25ರಂದು 'ದೃಶ್ಯ2' ಸಿನಿಮಾ ಜೀ5 ಒಟಿಟಿ ತಾಣದಲ್ಲಿ ತೆರೆಕಾಣುತ್ತಿದೆ.
ಇದನ್ನೂ ಓದಿ: 'ಬೈ ಟು ಲವ್' ಚಿತ್ರದ ನಾಯಕ ಧನ್ವೀರ್ ವಿರುದ್ಧ ಎಫ್ಐಆರ್ ದಾಖಲು: ಅಭಿಮಾನಿ ಮೇಲೆ ಹಲ್ಲೆ ಆರೋಪ
ಕ್ರೇಜಿಸ್ಟಾರ್ ರವಿಚಂದ್ರನ್ ‘ರಾಜೇಂದ್ರ ಪೊನ್ನಪ್ಪ’ನಾಗಿ ನಟಿಸಿದ್ದ ದೃಶ್ಯ-2 ಥಿಯೇಟರ್ ನಲ್ಲಿ ಸಖತ್ ಸೌಂಡ್ ಮಾಡಿತ್ತು. ಮರ್ಡರ್ ಮಿಸ್ಟರಿ ಕಥೆಯನ್ನು ಬಹಳ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದರು ನಿರ್ದೇಶಕ ಪಿ. ವಾಸು. ರವಿಚಂದ್ರನ್, ನವ್ಯಾ ನಾಯರ್, ಆರೋಹಿ ನಾರಾಯಣ್ ಮುಂತಾದವರು ನಟಿಸಿದ್ದ ದೃಶ್ಯ 2’ ಸಿನಿಮಾದ ಕ್ಲೈಮ್ಯಾಕ್ಸ್ ಸಖತ್ ಥ್ರಿಲ್ ನೀಡಿತ್ತು.
ಇದನ್ನೂ ಓದಿ: 'ಕುತೂಹಲಕಾರಿ ಸ್ಕ್ರಿಪ್ಟ್ಗಳನ್ನು ಕೇಳಿದ್ದೇನೆ': ಕಮ್ ಬ್ಯಾಕ್ ಚಿತ್ರದ ಕುರಿತು ನಟಿ ರಮ್ಯಾ ಸ್ಪಷ್ಟನೆ
ಮಲಯಾಳಂ ದೃಶ್ಯಂ ಸಿನಿಮಾದ ರೀಮೇಕ್ ಆಗಿದ್ದರೂ ಕನ್ನಡ ಅವತರಣಿಕೆಯಲ್ಲಿ ಕನ್ನಡದ ಸೊಗಡಿಗೆ ತಕ್ಕಂತೆ ಹೊಂದಾಣಿಕೆ ಮಾಡಲಾಗಿತ್ತು. ಥಿಯೇಟರ್ ಅಂಗಳದಲ್ಲಿ ಮ್ಯಾಜಿಕ್ ಮಾಡಿದ್ದ ದೃಶ್ಯ ಸಿನಿಮಾ ಈಗ ಜೀ5 ಒಟಿಟಿಗೆ ಎಂಟ್ರಿ ಕೊಟ್ಟಿದೆ. ಫೆಬ್ರವರಿ 25ರಿಂದ ಜೀ5ಯಲ್ಲಿ ದೃಶ್ಯ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ.
ಇದನ್ನೂ ಓದಿ: 'ಮೆಜೆಸ್ಟಿಕ್' ಸಿನಿಮಾ ಥರ ಇನ್ನೊಂದು ಸಿನಿಮಾ ಮಾಡೋಕಾಗಲ್ಲ: ದಾಸ ದರ್ಶನ್ ಅಭಿನಯದ 'ಮೆಜೆಸ್ಟಿಕ್' ರೀರಿಲೀಸ್
ಜೀ 5 ಒಟಿಟಿಯಲ್ಲೀಗ ಕನ್ನಡಿಗ, ಭಜರಂಗಿ-2 ಹಾಗೂ ಗರುಡ ಗಮನ ವೃಷಭ ವಾಹನ ಸಿನಿಮಾಗಳು ತೆರೆಕಂಡು ಭಾರೀ ಜನಮನ್ನಣೆ ಗಳಿಸುತ್ತಿದೆ ಎನ್ನುವುದು ಗಮನಾರ್ಹ.
ಇದನ್ನೂ ಓದಿ: ಪ್ರೇಮಿಗಳು ಮದುವೆ ಮುನ್ನ ನೋಡಲೇಬೇಕಾದ ಸೋಷಿಯಲ್ ಎಕ್ಸ್ ಪೆರಿಮೆಂಟ್ ಸಿನಿಮಾ: Bytwo ಲವ್ ಚಿತ್ರವಿಮರ್ಶೆ