ಬೆಂಗಳೂರು: ಕೋರಮಂಗಲದಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದ ಬಾಲಿವುಡ್ ನಟಿ ಹುಮಾ ಖುರೇಶಿ
'ವಲಿಮೈ' ಸಿನಿಮಾದ ಎಲ್ಲಾ 4 ಭಾಷೆಯ ಅವತರಣಿಕೆಗಳು ಬಿಡುಗಡೆಯಾಗುತ್ತಿರುವ ನಗರ ಬೆಂಗಳೂರು. ಈ ಬಗ್ಗೆ ನಟಿ ಹುಮಾ ಖುರೇಶಿ ಹರ್ಷ ವ್ಯಕ್ತಪಡಿಸಿದ್ದಾರೆ.
Published: 22nd February 2022 08:00 PM | Last Updated: 23rd February 2022 11:32 AM | A+A A-

'ವಲಿಮೈ'ಸಿನಿಮಾದಲ್ಲಿ ಹುಮಾ ಖುರೇಶಿ
- ಹರ್ಷವರ್ಧನ್ ಸುಳ್ಯ
ನಾಯಕನಟ ಅಜಿತ್ ಅಭಿನಯದ 'ವಲಿಮೈ' ತಮಿಳು ಸಿನಿಮಾದಲ್ಲಿ ನಟಿಸಿರುವ ಖ್ಯಾತ ಬಾಲಿವುಡ್ ನಟಿ ಹುಮಾ ಖುರೇಶಿ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಬೆಂಗಳೂರನ್ನು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮೊದಲ ಸಿನಿಮಾದಲ್ಲೇ ಪ್ರೇಮ್ ರಂಥ ಡೈರೆಕ್ಟರ್ ಜೊತೆ ಕೆಲಸ ಮಾಡಬೇಕು ಅನ್ನೋದು ಪ್ರತಿಯೊಬ್ಬ ಕಲಾವಿದನ ಕನಸು: ರೀಷ್ಮಾ ನಾಣಯ್ಯ
ಹುಮಾ ಅವರು ರಜಿನಿಕಾಂತ್ ಅಭಿನಯದ 'ಕಾಲಾ' ಸಿನಿಮಾ ನಂತರ ನಟಿಸುತ್ತಿರುವ ಎರಡನೇ ತಮಿಳು ಸಿನಿಮಾ ವಲಿಮೈ. ಫೆ.24ರಂದು ಬಿಡುಗಡೆಯಾಗುತ್ತಿರುವ ಸಿನಿಮಾ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗಿದೆ. ಕಮರ್ ಫಿಲಂ ಫ್ಯಾಕ್ಟರಿ ಮತ್ತು ಡಿಬೀಟ್ಸ್ ಸಂಸ್ಥೆ ವಲಿಮೈ ಸಿನಿಮಾವನ್ನು ರಾಜ್ಯದಲ್ಲಿ ಹಂಚಿಕೆ ಮಾಡುತ್ತಿದೆ.
ಇದನ್ನೂ ಓದಿ: ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕೊಡಗಿನ ನಿಶಾನ್ ನಾಣಯ್ಯ ಅವರ 'ಆಲ್ಫಾ ಬೀಟಾ ಗಾಮ' ಸಿನಿಮಾ ಪ್ರದರ್ಶನ
'ವಲಿಮೈ' ಸಿನಿಮಾದ ನಾಲ್ಕೂ ಭಾಷೆಯ ಅವತರಣಿಕೆಗಳು ಬಿಡುಗಡೆಯಾಗುತ್ತಿರುವ ನಗರ ಬೆಂಗಳೂರು. ಈ ಬಗ್ಗೆ ನಟಿ ಹುಮಾ ಖುರೇಶಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಬೆಂಗಳೂರಿನ ಕೋರಮಂಗಲ ತಮಗೆ ಪರಿಚಿತ ಎನ್ನುವ ಅಚ್ಚರಿಯ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: 'ಕನ್ನಡತಿ' ಧಾರಾವಾಹಿ ನಟ ಕಿರಣ್ ರಾಜ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ: 'ಬಡ್ಡೀಸ್' ಸಿನಿಮಾ ಮೂಲಕ ಎಂಟ್ರಿ
ಕೋರಮಂಗಲದ ನೆಂಟರಿಷ್ಟರ ಮನೆಗೆ ಬಂದಾಗ ಅಲ್ಲಿ ಅಡ್ಡಾಡುತ್ತಿದ್ದುದನ್ನು ಅವರು ನೆನಪಿಸಿಕೊಂಡಿದ್ದಾರೆ. ಕೋರಮಂಗಲ ಮಾಲ್ ನಲ್ಲಿ ಸಿನಿಮಾ ನೋಡುತ್ತಿದ್ದ ದಿನಗಲನ್ನೂ ಅವರು ನೆನಪಿಸಿಕೊಂಡಿದ್ದಾರೆ.