ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ: ಧೀರೆನ್ ರಾಜ್ ಕುಮಾರ್ ರ ‘ಶಿವ 143’ ಚಿತ್ರದ ಟ್ರೈಲರ್ ಬಿಡುಗಡೆ
ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ರಾಜ್ಕುಮಾರ್ ಅವರ ಮೊಮ್ಮಗ, ಪೂರ್ಣಿಮಾ ಹಾಗೂ ನಟ ರಾಮ್ಕುಮಾರ್ ಪುತ್ರ ಧೀರೆನ್ ರಾಮ್ಕುಮಾರ್ ನಟನೆಯ ‘ಶಿವ 143’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
Published: 22nd February 2022 06:02 PM | Last Updated: 22nd February 2022 06:06 PM | A+A A-

ಶಿವ 143 ಚಿತ್ರದ ಟ್ರೈಲರ್
ಬೆಂಗಳೂರು: ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ರಾಜ್ಕುಮಾರ್ ಅವರ ಮೊಮ್ಮಗ, ಪೂರ್ಣಿಮಾ ಹಾಗೂ ನಟ ರಾಮ್ಕುಮಾರ್ ಪುತ್ರ ಧೀರೆನ್ ರಾಮ್ಕುಮಾರ್ ನಟನೆಯ ‘ಶಿವ 143’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
ಅನಿಲ್ ಕುಮಾರ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ, ಡಬ್ಬಿಂಗ್ ಕಳೆದ ವರ್ಷವೇ ಪೂರ್ಣಗೊಂಡಿತ್ತು. ಆದರೆ ಲಾಕ್ಡೌನ್ ಕಾರಣದಿಂದಾಗಿ ಚಿತ್ರ ಬಿಡುಗಡೆಯನ್ನು ಚಿತ್ರತಂಡವು ಮುಂದೂಡಿತ್ತು. ಧೀರೆನ್ ಅವರ ಚೊಚ್ಚಲ ಚಿತ್ರವಾಗಿರುವ ಕಾರಣ ಥಿಯೇಟರ್ಗಳಲ್ಲೇ ಸಿನಿಮಾ ಬಿಡುಗಡೆಗೆ ಚಿತ್ರತಂಡವು ಕಾದಿತ್ತು.
https://t.co/WPcz2JfORM
— ನವರಸನಾಯಕ ಜಗ್ಗೇಶ್ (@Jaggesh2) February 22, 2022
ಧೀರನ್ ರಾಜಕುಮಾರ್ ಚಿತ್ರಕ್ಕೆ ನಿಮ್ಮ ಆಶೀರ್ವಾದ ಇರಲಿ...
ರಾಜಣ್ಣನ ವಂಶದ 3ನೆ ತಲೆಮಾರು ಕನ್ನಡದ ಮನಗಳು ಈ ಕಂದಮ್ಮನ ಹರಸಿ ಹಾರೈಸಿ
ಸಿನಿಮಾದಲ್ಲಿ ಧೀರೆನ್ಗೆ ಜೋಡಿಯಾಗಿ ನಟಿ ಮಾನ್ವಿತಾ ಕಾಮತ್ ನಟಿಸಿದ್ದು, ಬೋಲ್ಡ್, ಡೇರಿಂಗ್ ಪಾತ್ರದಲ್ಲಿ ಮಾನ್ವಿತಾ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಕ್ಲೈಮ್ಯಾಕ್ಸ್ನಲ್ಲಿ ನೆಗೆಟಿವ್ ಶೇಡ್ನಲ್ಲೂ ಕಾಣಿಸಿಕೊಂಡಿದ್ದಾರೆ. ಚಿತ್ರದ ಟ್ರೇಲರ್ಗೆ ನಟ ಶಿವರಾಜ್ ಕುಮಾರ್ ಶುಭಾಶಯ ಕೋರಿದ್ದು, ಧೀರೆನ್ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟ ಜಗ್ಗೇಶ್ ಕೂಡಾ ಟ್ರೇಲರ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ‘ರಾಜಣ್ಣನ ವಂಶದ 3ನೇ ತಲೆಮಾರು. ಕನ್ನಡದ ಮನಗಳು ಈ ಕಂದಮ್ಮನ ಹರಸಿ ಹಾರೈಸಿ’ ಎಂದು ಕೋರಿದ್ದಾರೆ.
ಜಯಣ್ಣ ಫಿಲ್ಮ್ಸ್ಬ್ಯಾನರ್ನಡಿ ಚಿತ್ರಕ್ಕೆ ಜಯಣ್ಣ, ಭೋಗೇಂದ್ರ ಹಾಗೂ ಡಾ.ಸೂರಿ ಬಂಡವಾಳ ಹೂಡಿದ್ದಾರೆ. ಆರಂಭದಲ್ಲಿ ‘ದಾರಿ ತಪ್ಪಿದ ಮಗ’ ಎಂಬ ಶೀರ್ಷಿಕೆಯಡಿ ಆರಂಭವಾದ ಈ ಚಿತ್ರಕ್ಕೆ ನಂತರದಲ್ಲಿ ‘ಶಿವ 143’ ಎಂದು ಹೆಸರಿಡಲಾಗಿತ್ತು. ಚಿತ್ರದ ಮೊದಲ ವಿಡಿಯೊ ಹಾಡು ‘ಮಳೆ ಹನಿಯೇ’ ಇತ್ತೀಚೆಗೆ ಬಿಡುಗಡೆಯಾಗಿತ್ತು.
ಶಿವ 143 vs ತೆಲುಗಿನ ಆರ್ ಎಕ್ಸ್ 100
ಇನ್ನು ಚಿತ್ರದ ಟ್ರೈಲರ್ ನೋಡಿದವರು ಚಿತ್ರದ ಮೇಲೆ ತೆಲುಗಿನ ಬ್ಲಾಕ್ ಬಸ್ಚರ್ ಚಿತ್ರ ಆರ್ ಎಕ್ಸ್ 100 ಛಾಯೆ ಇದೆ ಎಂದು ಹೇಳುತ್ತಿದ್ದಾರೆ. ತೆಲುಗಿನಲ್ಲಿ ಕಾರ್ತಿಕೇಯ ಮತ್ತು ಪಾಯಲ್ ರಜಪೂತ್ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು. ಇದೇ ಚಿತ್ರ ಛಾಯೆ ಇದೀಗ ಕನ್ನಡದ ಶಿವ 143 ಚಿತ್ರದ ಮೇಲೆ ಕಾಣುತ್ತಿದೆ. ಅಂದಹಾಗೆ ತೆಲುಗಿನ ಆರ್ ಎಕ್ಸ್ 100ಚಿತ್ರದಲ್ಲಿನ ನಟ ಕಾರ್ತಿಕೇಯ ಪಾತ್ರದ ಹೆಸರೂ ಕೂಡ ಶಿವ ಆಗಿತ್ತು. ಹೀಗಾಗಿ ಈ ಕನ್ನಡದ ಶಿವ 143 ಚಿತ್ರಕ್ಕೂ ಆರ್ ಎಕ್ಸ್ 100 ಚಿತ್ರಕ್ಕೂ ಸಂಬಂಧವಿದೆ ಎಂದು ಹೇಳಲಾಗಿದೆ. ಒಟ್ಟಾರೆ ಚಿತ್ರ ಬಿಡುಗಡೆಯ ಬಳಿಕ ಎಲ್ಲ ಗೊಂದಲಗಳಿಗೂ ತೆರೆ ಬೀಳಲಿದೆ.