ಮೊದಲ ಸಿನಿಮಾದಲ್ಲೇ ಪ್ರೇಮ್ ರಂಥ ಡೈರೆಕ್ಟರ್ ಜೊತೆ ಕೆಲಸ ಮಾಡಬೇಕು ಅನ್ನೋದು ಪ್ರತಿಯೊಬ್ಬ ಕಲಾವಿದನ ಕನಸು: ರೀಷ್ಮಾ ನಾಣಯ್ಯ
ಸಿನಿಮಾದಲ್ಲಿ ನಾಯಕರಾಗಿ ನಟಿಸಿರುವ ರಾಣ ಮತ್ತು ತಮ್ಮನ್ನು ಪ್ರೇಕ್ಷಕರು ಯಾವರೀತಿ ಸ್ವೀಕರಿಸುತ್ತಾರೆ ಎನ್ನುವುದನ್ನು ನೋಡಲು ರೀಷ್ಮಾ ಉತ್ಸುಕರಾಗಿದ್ದಾರೆ.
Published: 22nd February 2022 01:00 PM | Last Updated: 22nd February 2022 01:00 PM | A+A A-

ರೀಷ್ಮಾ ನಾಣಯ್ಯ
ನಿರ್ದೇಶಕ ಪ್ರೇಮ್ ನಿರ್ದೇಶನದ 'ಎಕ್ ಲವ್ ಯಾ' ಸಿನಿಮಾ ಫೆ.24ರಂದು ತೆರೆ ಕಾಣುತ್ತಿದೆ. ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ರೀಷ್ಮಾ ನಾಣಯ್ಯ ಅವರಿಗೆ ಇದು ಮೊದಲ ಸಿನಿಮಾ. 19 ವರ್ಷದ ರೀಷ್ಮಾ ಸಿನಿಮಾ ಕುರಿತು ತುಂಬಾ ಎಕ್ಸೈಟ್ ಆಗಿದ್ದಾರೆ.
ಇದನ್ನೂ ಓದಿ: ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕೊಡಗಿನ ನಿಶಾನ್ ನಾಣಯ್ಯ ಅವರ ಕಿರುಚಿತ್ರ ಪ್ರದರ್ಶನ
ನನ್ನ ಮೊದಲ ಸಿನಿಮಾವನ್ನು ಪ್ರೇಮ್ ನಿರ್ದೇಶಿಶಿಸಿ, ರಕ್ಷಿತಾ ಅವರು ನಿರ್ಮಾಣ ಮಾಡುತ್ತಿದ್ದಾರೆ ಎನ್ನುವ ಸಂಗತಿಯನ್ನು ಇನ್ನೂ ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: 'ಕನ್ನಡತಿ' ಧಾರಾವಾಹಿ ನಟ ಕಿರಣ್ ರಾಜ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ: 'ಬಡ್ಡೀಸ್' ಸಿನಿಮಾ ಮೂಲಕ ಎಂಟ್ರಿ
ಮೊದಲ ಸಿನಿಮಾವನ್ನು ಪ್ರೇಮ್ ನಿರ್ದೇಶಿಸಬೇಕು ಎನ್ನುವುದು ಕಲಾವಿದರ ಕನಸು. ಆವಕಾಶ ನನಗೆ ಸಿಕ್ಕಿರುವುದು ನನ್ನ ಅದೃಷ್ಟ. ಶಿವರಾಜ್ ಕುಮಾರ್, ದರ್ಶನ್, ಸುದೀಪ್ ರಂಥ ಖ್ಯಾತ ನಟರನ್ನು ನಿರ್ದೇಶಿಸಿರುವ ಪ್ರೇಮ್ ಅವರ ಸಿನಿಮಾದಲ್ಲಿ ಕೆಲಸ ಮಾಡಿದ್ದರಿಂದ ಕಲಿಯಲು ತುಂಬಾ ಸಿಕ್ಕಿತು ಎಂದು ರೀಷ್ಮಾ ಹೇಳುತ್ತಾರೆ.
ಇದನ್ನೂ ಓದಿ: ಆಂಕರ್ ಅನುಶ್ರೀ ಇನ್ನುಮುಂದೆ 'ಸೈತಾನ್': 'ಮಮ್ಮಿ' ಲೋಹಿತ್ ನಿರ್ಮಾಣದ ಸಿನಿಮಾಗೆ ಪ್ರಭಾಕರ್ ಆಕ್ಷನ್ ಕಟ್
ಸಿನಿಮಾದಲ್ಲಿ ನಾಯಕರಾಗಿ ನಟಿಸಿರುವ ರಾಣ ಮತ್ತು ತಮ್ಮನ್ನು ಪ್ರೇಕ್ಷಕರು ಯಾವರೀತಿ ಸ್ವೀಕರಿಸುತ್ತಾರೆ ಎನ್ನುವುದನ್ನು ನೋಡಲು ರೀಷ್ಮಾ ಉತ್ಸುಕರಾಗಿದ್ದಾರೆ.