
ಸಿನಿಮಾ ಪೋಸ್ಟರ್
- ಹರ್ಷವರ್ಧನ್ ಸುಳ್ಯ
'ಅಯೋಗ್ಯ' ಸಿನಿಮಾದ 'ಏನಮ್ಮಿ ಏನಮ್ಮಿ' ಹಾಡು ಯೂಟ್ಯೂಬಿನಲ್ಲಿ ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೆ 100 ಮಿಲಿಯನ್ ಗೂ ಹೆಚ್ಚು ಬಾರಿ ಅಂದರೆ 10 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದೆ. ಈ ಪ್ರಯುಕ್ತ ಆನಂದ್ ಆಡಿಯೊ ಸಮಾರಂಭವನ್ನು ಆಯೋಜಿಸಿತ್ತು.
ಇದನ್ನೂ ಓದಿ: ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ: ಧೀರೆನ್ ರಾಜ್ ಕುಮಾರ್ ರ ‘ಶಿವ 143’ ಚಿತ್ರದ ಟ್ರೈಲರ್ ಬಿಡುಗಡೆ
ಕಾರ್ಯಕ್ರಮದಲ್ಲಿ 'ಅಯೋಗ್ಯ' ಸಿನಿಮಾದ ಯಶಸ್ಸಿಗೆ ಶ್ರಮಿಸಿದ ಪ್ರತಿಯೊಬ್ಬರನ್ನೂ ಗೌರವಿಸಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಸೂಪರ್ ಹಿಟ್ 'ಮದಗಜ' ಸಿನಿಮಾವನ್ನು ನಿರ್ದೇಶಿಸಿದ್ದ ಮಹೇಶ್ ಕುಮಾರ್ ಅವರಿಗೆ ನಿರ್ದೇಶಕರಾಗಿ ಮೊದಲ ಬ್ರೇಕ್ ನೀಡಿದ್ದ ಸಿನಿಮಾ ಅಯೋಗ್ಯ.
ಇದನ್ನೂ ಓದಿ: ಮೊದಲ ಸಿನಿಮಾದಲ್ಲೇ ಪ್ರೇಮ್ ರಂಥ ಡೈರೆಕ್ಟರ್ ಜೊತೆ ಕೆಲಸ ಮಾಡಬೇಕು ಅನ್ನೋದು ಪ್ರತಿಯೊಬ್ಬ ಕಲಾವಿದನ ಕನಸು: ರೀಷ್ಮಾ ನಾಣಯ್ಯ
ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದ ನಿರ್ದೇಶಕ ಮಹೇಶ್ ಕುಮಾರ್ 'ಮದಗಜ' ಸಿನಿಮಾ ಮೂಲಕ ಮಾಸ್ ಪ್ರೇಕ್ಷಕರನ್ನು ಸೆಳೆಯುವ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಟಿ.ಆರ್ ಚಂದ್ರಶೇಖರ್ 'ಅಯೋಗ್ಯ' ಸಿನಿಮಾ ನಿರ್ಮಾಪಕರು.
ಇದನ್ನೂ ಓದಿ: 'ಕನ್ನಡತಿ' ಧಾರಾವಾಹಿ ನಟ ಕಿರಣ್ ರಾಜ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ: 'ಬಡ್ಡೀಸ್' ಸಿನಿಮಾ ಮೂಲಕ ಎಂಟ್ರಿ
ಗ್ರಾಮ್ಯ ಸೊಗಡಿನ ಗೀತೆಯನ್ನು 'ಭರ್ಜರಿ' ಚೇತನ್ ಕುಮಾರ್ ರಚಿಸಿದ್ದು, ಅರ್ಜುನ್ ಜನ್ಯಾ ಸಂಗೀತ ನೀಡಿದ್ದರು. 'ಶ್ಯಾನೇ ಟಾಪ್ ಆಗವ್ಳೇ' ಅಲ್ಲದೆ ಇತ್ತೀಚಿನ ಮುಗಿಲ್ ಪೇಟೆ ಸಿನಿಮಾದ 'ಜೀನ್ಸ್ ಅಲ್ಲಿ ಮಾಸ್ ಆಗವ್ಳೇ' ಹಾಡಿನ ಯಶಸ್ಸಿನಿಂದ ಚೇತನ್ ಕುಮಾರ್ ಚೇತರಿಸಿಕೊಳ್ಳುತ್ತಿರುವಾಗಲೇ ಅಯೋಗ್ಯ ಸಿನಿಮಾದ ಹಾಡು 100 ಮಿಲಿಯನ್ ವೀಕ್ಷಣೆ ದಾಟಿರುವುದು ವಿಶೇಷ.
ಇದನ್ನೂ ಓದಿ: 'ವಿಕ್ರಾಂತ್ ರೋಣ' ಸಿನಿಮಾದ 3D ವರ್ಷನ್ ಸಖತ್ತಾಗಿದೆ: ಚಿತ್ರತಂಡಕ್ಕೆ ಕಿಚ್ಚ ಸುದೀಪ್ ಪ್ರಶಂಸೆ