'ಕನ್ನೇರಿ' ಸಿನಿಮಾ ಟ್ರೇಲರ್ ಬಿಡುಗಡೆಗೊಳಿಸಿದ ಚಿತ್ರನಟಿ ತಾರಾ: ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಚಿತ್ರಕ್ಕೆ ಕಥೆಯ ಜವಾಬ್ದಾರಿಯನ್ನು ಕೋಟಿಗಾನಹಳ್ಳಿ ರಾಮಯ್ಯ ವಹಿಸಿಕೊಂಡಿದ್ರೆ, ಚಿತ್ರಕಥೆ ಹಾಗೂ ನಿರ್ದೇಶನದ ನೊಗವನ್ನು ನೀನಾಸಂ ಮಂಜು ಹೊತ್ತಿದ್ದಾರೆ.
Published: 23rd February 2022 05:43 PM | Last Updated: 23rd February 2022 05:43 PM | A+A A-

ನೀನಾಂ ಮಂಜು, ತಾರಾ, ಮುಖ್ಯ ಮಾತ್ರಧಾರಿ ಅರ್ಚನಾ ಮಧುಸೂದನ್
'ಮೂಕಹಕ್ಕಿ’ ಸಿನಿಮಾ ಖ್ಯಾತಿಯ ನಿರ್ದೇಶಕ ನೀನಾಸಂ ಮಂಜು ನಿರ್ದೇಶನದ ಮತ್ತೊಂದು ಚಿತ್ರ ‘ಕನ್ನೇರಿ’ ರಿಲೀಸ್ ಗೂ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ. ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಇದೇ ವೇಳೆ ಮಾರ್ಚ್ 4ರಂದು ಸಿನಿಮಾ ಬಿಡುಗಡೆಯಾಗುವುದಾಗಿ ಚಿತ್ರತಂಡ ಹೇಳಿದೆ.
ಇದನ್ನೂ ಓದಿ: ನೀನಾಸಂ ಮಂಜು ನಿರ್ದೇಶನದ 'ಕನ್ನೇರಿ' ಸಿನಿಮಾಗೆ ವಸಿಷ್ಠ ಸಿಂಹ ಸಾಥ್: 'ಕಾಣದ ಊರಿಗೆ' ಸಾಂಗ್ ರಿಲೀಸ್!
ಖ್ಯಾತ ನಟಿ ತಾರಾ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಕನ್ನೇರಿ’ ನೈಜ ಘಟನೆಯಾಧಾರಿತ ಮಹಿಳಾ ಪ್ರಧಾನ ಚಿತ್ರ. ಕೊಡಗಿನಲ್ಲಿ ಭಾರೀ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ ಹಾಗು ಕ್ಷೀರಸಾಗರ ಅವರ ‘ಜೇನು: ಆಕಾಶದ ಅರಮನೆ’ ಕಾದಂಬರಿಯ ಎಳೆಯನ್ನು ಆದ್ಧರಿಸಿ ಸಿನಿಮಾದ ಕಥೆ ಹೆಣೆಯಲಾಗಿದೆ.
ಇದನ್ನೂ ಓದಿ: ನನ್ನ ಬೋಲ್ಡ್ ಪಾತ್ರಗಳೇ ಹೆಡ್ ಲೈನಲ್ಲಿ ಸುದ್ದಿಯಾಗೋದು ಯಾಕೆ?: 'ಎಕ್ ಲವ್ ಯಾ' ನಟಿ ರಚಿತಾ ರಾಮ್
ಚಿತ್ರಕ್ಕೆ ಕಥೆಯ ಜವಾಬ್ದಾರಿಯನ್ನು ಕೋಟಿಗಾನಹಳ್ಳಿ ರಾಮಯ್ಯ ವಹಿಸಿಕೊಂಡಿದ್ರೆ, ಚಿತ್ರಕಥೆ ಹಾಗೂ ನಿರ್ದೇಶನದ ನೊಗವನ್ನು ನೀನಾಸಂ ಮಂಜು ಹೊತ್ತಿದ್ದಾರೆ. ಚಿತ್ರಕ್ಕೆ ಅರ್ಚನಾ ಮಧುಸೂಧನ್ ಮುಖ್ಯಭೂಮಿಕೆಯಲ್ಲಿ ಜೀವ ತುಂಬಿದ್ದಾರೆ. 'ಬುಡ್ಡಿ ದೀಪ' ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ: ಜೂನಿಯರ್ ಅಪ್ಪು ಖ್ಯಾತಿಯ 'ಆನಂದ್' ನಾಯಕತ್ವದ 'ಮಾರಕಾಸ್ತ್ರ' ಸಿನಿಮಾ ಮುಹೂರ್ತ: ಮಾರ್ಚ್ ನಲ್ಲಿ ಚಿತ್ರೀಕರಣ
ಚಿತ್ರದ ತಾರಾಗಣದಲ್ಲಿ ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ.ಮಠ, ಕರಿಸುಬ್ಬು ಒಳಗೊಂಡಂತೆ ಹಲವು ಪ್ರತಿಭಾನ್ವಿತ ಕಲಾವಿದರು ಜೀವ ತುಂಬಿದ್ದು, ಚಿತ್ರ ನೈಜತೆಯಿಂದ ಮೂಡಿ ಬಂದಿದೆ ಎನ್ನಲು ಈಗಷ್ಟೇ ರಿಲೀಸ್ ಆದ ಟ್ರೈಲರ್ ಸಾಕ್ಷಿ. ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ನಾಯಕ್ ಸಂಕಲನ ಚಿತ್ರಕ್ಕಿದೆ.
ಇದನ್ನೂ ಓದಿ: 'ಓಲ್ಡ್ ಮಾಂಕ್' ಬಾಟಲಿ ಬಗ್ಗೆ ಮುಂಚೆ ಗೊತ್ತೇ ಇರಲಿಲ್ಲ: 'ಓಲ್ಡ್ ಮಾಂಕ್' ಸಿನಿಮಾ ನಟಿ ಅದಿತಿ ಪ್ರಭುದೇವ