
ರಚಿತಾ ರಾಮ್
ಸ್ಯಾಂಡಲ್ ವುಡ್ ನಲ್ಲಿ 'ಡಿಂಪಲ್ ಕ್ವೀನ್' ಎಂದೇ ಹೆಸರು ಮಾಡಿರುವ ನಟಿ ರಚಿತಾ ರಾಮ್ ತಮ್ಮ ಇತ್ತೀಚಿನ ಸಿನಿಮಾಗಳಲ್ಲಿ ಬೋಲ್ಡ್ ಪಾತ್ರಗಳನ್ನು ನಿರ್ವಹಿಸಿ ಸುದ್ದಿ ಮಾಡಿದವರು.
ಇದನ್ನೂ ಓದಿ: ಮೊದಲ ಸಿನಿಮಾದಲ್ಲೇ ಪ್ರೇಮ್ ರಂಥ ಡೈರೆಕ್ಟರ್ ಜೊತೆ ಕೆಲಸ ಮಾಡಬೇಕು ಅನ್ನೋದು ಪ್ರತಿಯೊಬ್ಬ ಕಲಾವಿದನ ಕನಸು: ರೀಷ್ಮಾ ನಾಣಯ್ಯ
ರಚಿತಾ ರಾಮ್ ತಮ್ಮ ಕಂಫರ್ಟ್ ಜೋನ್ ನಿಂದ ಹೊರ ಬಂದು ವಿಭಿನ್ನ ಪಾತ್ರಗಳನ್ನು ಮಾಡುವ ಯೋಚನೆಯನ್ನು ಹೊರಹಾಕಿದ್ದಾರೆ. ಕಮರ್ಷಿಯಲ್ ಸಿನಿಮಾಗಳು ಮಾತ್ರವಲ್ಲದೆ ಕಂಟೆಂಟ್ ಇರುವ ಪಾತ್ರಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: 100 ಮಿಲಿಯನ್ ಕ್ಲಬ್ ಸೇರಿದ ನೀನಾಸಂ ಸತೀಶ್- ರಚಿತಾ ರಾಮ್ ಜೋಡಿಯ 'ಏನಮ್ಮಿ ಏನಮ್ಮಿ' ಸಾಂಗ್
'ಐ ಲವ್ ಯೂ' ಸಿನಿಮಾದಲ್ಲಿ ರಚಿತಾ ನಿರ್ವಹಿಸಿದ್ದ ಬೋಲ್ಡ್ ಪಾತ್ರ ಮೊದಲು ಚರ್ಚೆಗೆ ಕಾರಣವಾಗಿತ್ತು. ನಂತರ 'ಐ ಲವ್ ಯೂ ರಚ್ಚು' ಸಿನಿಮಾದಲ್ಲಿನ ಕೆಲ ದೃಶ್ಯಗಳು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಫೆ.24ರಂದು ಬಿಡುಗಡೆಯಾಗುತ್ತಿರುವ ನಿರ್ದೇಶಕ ಪ್ರೇಮ್ ಅವರ 'ಏಕ್ ಲವ್ ಯಾ' ಸಿನಿಮಾದ ಪಾತ್ರವೂ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ: ಆಂಕರ್ ಅನುಶ್ರೀ ಇನ್ನುಮುಂದೆ 'ಸೈತಾನ್': 'ಮಮ್ಮಿ' ಲೋಹಿತ್ ನಿರ್ಮಾಣದ ಸಿನಿಮಾಗೆ ಪ್ರಭಾಕರ್ ಆಕ್ಷನ್ ಕಟ್
'ಏಕ್ ಲವ್ ಯಾ' ಸಿನಿಮಾದ ಟ್ರೇಲರ್ ನಲ್ಲಿ ರಚಿತಾ ಸ್ಮೋಕಿಂಗ್, ಡ್ರಿಂಕಿಂಗ್ ಅಲ್ಲದೆ ನಾಯಕ ರಾಣಾಗೆ ಕಿಸ್ ಕೊಡುವ ದೃಶ್ಯಗಳೂ ಇದ್ದವು. ಈ ಸಂಗತಿ ವಿವಾದಕ್ಕೆ ಕಾರಣವಾಗಿರುವ ಬಗ್ಗೆ ರಚಿತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕೋರಮಂಗಲದಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದ ಬಾಲಿವುಡ್ ನಟಿ ಹುಮಾ ಖುರೇಶಿ
ಪುಷ್ಪಕ ವಿಮಾನ, ಆಯುಷ್ಮಾನ್ ಭವ, 100 ಸಿನಿಮಾಗಳಲ್ಲಿಯೂ ತಮ್ಮ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಗಿತ್ತು, ಆದರೆ ಆ ಪಾತ್ರಗಳು ಹೆಡ್ ಲೈನಿನಲ್ಲಿ ಬರಲೇ ಇಲ್ಲ. ಬರೀ ಬೋಲ್ಡ್ ಪಾತ್ರಗಳೇ ಹೆಡ್ ಲೈನಿನಲ್ಲಿ ಬರೋದೇಕೆ ಎಂದು ರಚಿತಾ ಪ್ರಶ್ನಿಸಿದ್ದಾರೆ.
ಏಕ್ ಲವ್ ಯಾ ಸಿನಿಮಾದಲ್ಲಿ ಸ್ಮೋಕಿಂಗ್ , ಡ್ರಿಂಕಿಂಗ್ ಮತ್ತು ರೋಮ್ಯಾಂಟಿಕ್ ಸೀನ್ ಗಳಲ್ಲಿ ಕಾಣಸಿಕೊಂಡಿದ್ದು, ಪಾತ್ರಕ್ಕೆ ಅದು ಅವಶ್ಯಕತೆ ಇದ್ದುದರಿಂದ ಮಾತ್ರ. ನಾನು ಏನೇ ಮಾಡಿದ್ದರೂ ಅದು ಸಿನಿಮಾಗಾಗಿ. ಪ್ರಚಾರಕ್ಕಾಗಿ ಮಾಡುತ್ತಿಲ್ಲ ಎಂದು ರಚಿತಾ ಬೇಸರ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ: 'ಕನ್ನಡತಿ' ಧಾರಾವಾಹಿ ನಟ ಕಿರಣ್ ರಾಜ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ: 'ಬಡ್ಡೀಸ್' ಸಿನಿಮಾ ಮೂಲಕ ಎಂಟ್ರಿ