
ಆನಂದ್ ಆರ್ಯ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಫೋಟೋಗೆ ಗೌರವ ಅರ್ಪಿಸುವ ಮೂಲಕ 'ಮಾರಕಾಸ್ತ್ರ' ಚಿತ್ರತಂಡ ಸಿನಿಮಾದ ಮುಹೂರ್ತವನ್ನು ನೆರವೇರಿಸಿದೆ.
ಇದನ್ನೂ ಓದಿ: ಅವನೇ ಶ್ರೀಮನ್ನಾರಾಯಣ Vs ಅವನೇ ಎಸ್. ನಾರಾಯಣ್: 'ಓಲ್ಡ್ ಮಾಂಕ್' ಹೊಸ ಮಿನಿ ಟೀಸರ್ ಬಿಡುಗಡೆ
ನೋಡಲು ಪುನೀತ್ ರಾಜ್ ಕುಮಾರ್ ಅವರನ್ನು ಹೋಲುವ ಆನಂದ್ ಆರ್ಯ ಮಾರಕಾಸ್ತ್ರ ಸಿನಿಮಾದ ನಾಯಕ ಪಾತ್ರ ನಿರ್ವಹಿಸುತ್ತಿದ್ದಾರೆ. ಗುರುಮೂರ್ತಿ ಸುನಾಮಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
ಇದನ್ನೂ ಓದಿ: 'ಓಲ್ಡ್ ಮಾಂಕ್' ಬಾಟಲಿ ಬಗ್ಗೆ ಮುಂಚೆ ಗೊತ್ತೇ ಇರಲಿಲ್ಲ: 'ಓಲ್ಡ್ ಮಾಂಕ್' ಸಿನಿಮಾ ನಟಿ ಅದಿತಿ ಪ್ರಭುದೇವ
ಆನಂದ್ ಅವರ ಭಾವ ಭಂಗಿ, ನಗು, ಮಾತು ಪುನೀತ್ ರಾಜ್ ಕುಮಾರ್ ಅವರನ್ನು ಹೋಲುತ್ತದೆ ಎಂದು ಸ್ನೇಹಿತರು ಹೇಳುತ್ತಾರೆ ಆದರೆ ಅವರ ಹೆಸರನ್ನು ಬಳಸಿಕೊಳ್ಳಲು ತಮಗಿಷ್ಟವಿಲ್ಲ ಎನ್ನುತ್ತಾರೆ ಆನಂದ್. ಪುನೀತ್ ರಾಜ್ ಕುಮಾರ್ ತಮಗೆ ನಟರಾಗಲು ಸ್ಫೂರ್ತಿ ಎನ್ನುವುದನ್ನು ಹೇಳಲು ಅವರು ಮರೆಯುವುದಿಲ್ಲ.

ಆನಂದ್ ಅವರಿಗೆ ನಾಯಕಿಯಾಗಿ ಮಾಧುರ್ಯ ಅವರು ನಟಿಸುತ್ತಿದ್ದಾರೆ. ತುಮಕೂರಿನ ಕೊರಟಗೆರೆಯವರಾದ ನಟರಾಜ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಮಾರ್ಚ್ ನಿಂದ ಶುರುವಾಗಲಿದೆಯೆಂದು ಚಿತ್ರತಂಡ ಹೇಳಿದೆ.
