ಅವನೇ ಶ್ರೀಮನ್ನಾರಾಯಣ Vs ಅವನೇ ಎಸ್. ನಾರಾಯಣ್: 'ಓಲ್ಡ್ ಮಾಂಕ್' ಹೊಸ ಮಿನಿ ಟೀಸರ್ ಬಿಡುಗಡೆ
ನೋಡಲು ಮಜವಾಗಿರುವ ಈ ಮಿನಿ ಟೀಸರ್ ಫೆ. 25ರಂದು ಬಿಡುಗಡೆಯಾಗುತ್ತಿರೋ 'ಓಲ್ಡ್ ಮಾಂಕ್' ಸಿನಿಮಾ ಕುರಿತಾಗಿ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸುತ್ತಿದೆ.
Published: 23rd February 2022 01:28 PM | Last Updated: 23rd February 2022 02:13 PM | A+A A-

'ಓಲ್ಡ್ ಮಾಂಕ್' ಸಿನಿಮಾದಲ್ಲಿ ಎಸ್. ನಾರಾಯಣ್
- ಹರ್ಷವರ್ಧನ್ ಸುಳ್ಯ
ಶ್ರೀನಿ ನಟಿಸಿ ನಿರ್ದೇಶಿಸುತ್ತಿರುವ ಹೊಸ ಸಿನಿಮಾ 'ಓಲ್ಡ್ ಮಾಂಕ್'ನಲ್ಲಿ ಕಲಾ ಸಾಮ್ರಾಟ್ ಎಂದೇ ಹೆಸರಾದ ಎಸ್. ನಾರಾಯಣ್ ನಟಿಸುತ್ತಿರುವುದು ಬಹುತೇಕರಿಗೆ ಗೊತ್ತಿರುತ್ತದೆ.
ಇದನ್ನೂ ಓದಿ: 'ಓಲ್ಡ್ ಮಾಂಕ್' ಬಾಟಲಿ ಬಗ್ಗೆ ಮುಂಚೆ ಗೊತ್ತೇ ಇರಲಿಲ್ಲ: 'ಓಲ್ಡ್ ಮಾಂಕ್' ಸಿನಿಮಾ ನಟಿ ಅದಿತಿ ಪ್ರಭುದೇವ
ಸಿನಿಮಾದಲ್ಲಿ ಎಸ್. ನಾರಾಯಣ್ ನಾಯಕನ ತಂದೆ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ನಾಯಕನ ಪಟಾಯಿಸುವಿಕೆ ಪ್ಲ್ಯಾನುಗಳಿಗೆ ಅಪ್ಪ ಎಸ್. ನಾರಾಯಣ್ ತೊಡರುಗಾಲು ಹಾಕುತ್ತಿರುತ್ತಾರೆ. ಅದನ್ನೇ ಗುರಿಯಾಗಿಸಿಕೊಂಡು ಸಿನಿಮಾ ತಂಡ ಎಸ್.ನಾರಾಯಣ್ ಸ್ಪೆಷಲ್ ಮಿನಿ ಟೀಸರ್ ಒಂದನ್ನು ಬಿಡುಗಡೆಗೊಳಿಸಿದೆ. ಮಿನಿ ಟೀಸರಿನಲ್ಲಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಕುರಿತ ರೆಫರೆನ್ಸ್ ನಗೆಯುಕ್ಕಿಸುತ್ತದೆ.
ಇದನ್ನೂ ಓದಿ: ಪ್ರೇಕ್ಷಕರು ಆರ್ಡರ್ ಮಾಡಿದ 'ಓಲ್ಡ್ ಮಾಂಕ್' ಈ ದಿನ ಬರ್ತಿದೆ: ಮತ್ತೆ ಸಿನಿಮಾ ಮುಂದೋಡೋ ಚಾನ್ಸೇ ಇಲ್ಲ
ನೋಡಲು ಮಜವಾಗಿರುವ ಈ ಟೀಸರ್ ಫೆ. 25ರಂದು ಬಿಡುಗಡೆಯಾಗುತ್ತಿರೋ 'ಓಲ್ಡ್ ಮಾಂಕ್' ಸಿನಿಮಾ ಕುರಿತಾಗಿ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸುತ್ತಿದೆ. ಅದಿತಿ ಪ್ರಭುದೇವ ಅವರು ಶ್ರೀನಿ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕೋರಮಂಗಲದಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದ ಬಾಲಿವುಡ್ ನಟಿ ಹುಮಾ ಖುರೇಶಿ