'ಓಲ್ಡ್ ಮಾಂಕ್' ಬಾಟಲಿ ಬಗ್ಗೆ ಮುಂಚೆ ಗೊತ್ತೇ ಇರಲಿಲ್ಲ: 'ಓಲ್ಡ್ ಮಾಂಕ್' ಸಿನಿಮಾ ನಟಿ ಅದಿತಿ ಪ್ರಭುದೇವ
ಪ್ರೇಕ್ಷಕರಿಗೆ ಈ ಸಿನಿಮಾ ಕನ್ನಡದ ಕ್ಲಾಸಿಕ್ ಕಾಮಿಡಿ ಸಿನಿಮಾಗಳನ್ನು ನೆನಪಿಸಲಿದೆ ಎನ್ನುತ್ತಾರೆ ನಾಯಕಿ ಅದಿತಿ ಪ್ರಭುದೇವ. 'ಓಲ್ಡ್ ಮಾಂಕ್' ಸಿನಿಮಾ ಫೆ.25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
Published: 23rd February 2022 11:42 AM | Last Updated: 23rd February 2022 11:42 AM | A+A A-

ಅದಿತಿ ಪ್ರಭುದೇವ
ನಾಯಕ ನಟ ಶ್ರೀನಿ ನಿರ್ದೇಶಿಸಿ ನಟಿಸಿರುವ 'ಓಲ್ಡ್ ಮಾಂಕ್' ಸಿನಿಮಾ ಫೆ.25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಸಿನಿಮಾ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿರುವ ನಾಯಕಿ ಅದಿತಿ ಪ್ರಭುದೇವ ಸಿನಿಮಾ ಕುರಿತು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 100 ಮಿಲಿಯನ್ ಕ್ಲಬ್ ಸೇರಿದ ನೀನಾಸಂ ಸತೀಶ್- ರಚಿತಾ ರಾಮ್ ಜೋಡಿಯ 'ಏನಮ್ಮಿ ಏನಮ್ಮಿ' ಸಾಂಗ್
ಓಲ್ಡ್ ಮಾಂಕ್ ಎನ್ನುವ ಮದ್ಯ ಇದೆ ಎನ್ನುವ ಸಂಗತಿ ಅದಿತಿ ಪ್ರಭುದೇವ ಅವರಿಗೆ ಗೊತ್ತೇ ಇರಲಿಲ್ಲವಂತೆ. 'ಓಲ್ಡ್ ಮಾಂಕ್' ಸಿನಿಮಾಗೆ ಸಹಿ ಹಾಕಿದ ನಂತರವಷ್ಟೇ ಅವರಿಗೆ ಓಲ್ಡ್ ಮಾಂಕ್ ಹೆಸರಿನಲ್ಲಿ ಮದ್ಯ ಇದೆ ಎನ್ನುವ ಸಂಗತಿ ಅವರಿಗೆ ತಿಳಿದದ್ದು. ಅದಕ್ಕೂ ಮುಂಚೆ 'ಓಲ್ಡ್ ಮಾಂಕ್' ಸಿನಿಮಾ ಎಂದರೆ 'ಹಳೆಯ ಸನ್ಯಾಸಿ' ಕುರಿತಾದದ್ದು ಎಂದು ಅವರು ತಿಳಿದಿದ್ದರು.
ಇದನ್ನೂ ಓದಿ: ಮೊದಲ ಸಿನಿಮಾದಲ್ಲೇ ಪ್ರೇಮ್ ರಂಥ ಡೈರೆಕ್ಟರ್ ಜೊತೆ ಕೆಲಸ ಮಾಡಬೇಕು ಅನ್ನೋದು ಪ್ರತಿಯೊಬ್ಬ ಕಲಾವಿದನ ಕನಸು: ರೀಷ್ಮಾ ನಾಣಯ್ಯ
ಓಲ್ಡ್ ಮಾಂಕ್ ನಾಯಕಿ ಅದಿತಿ ಪ್ರಭುದೇವ ಈ ಹಿಂದೆ ಶ್ರೀನಿ ಜೊತೆ ರಂಗನಾಯಕಿ ಸಿನಿಮಾದಲ್ಲಿ ನಟಿಸಿದ್ದರು. ಆ ಸಂದರ್ಭ ಬೆಳೆದ ವಿಶ್ವಾಸವೇ 'ಓಲ್ಡ್ ಮಾಂಕ್' ಸಿನಿಮಾ ಒಪ್ಪಿಕೊಳ್ಳಲು ಕಾರಣವಾಗಿದೆ. ರಂಗನಾಯಕಿ ಸಿನಿಮಾಗೆ ಪ್ರಶಸ್ತಿ ಸ್ವೀಕರಿಸಲು ಹೋಗುತ್ತಿದ್ದ ಸಂದರ್ಭದಲ್ಲಿ ಶ್ರೀನಿ 'ಓಲ್ಡ್ ಮಾಂಕ್' ಸಿನಿಮಾದ ಕಥೆಯನ್ನು ಶಾರ್ಟ್ ಆಗಿ ಹೇಳಿದ್ದರು.
ಇದನ್ನೂ ಓದಿ: ಆಂಕರ್ ಅನುಶ್ರೀ ಇನ್ನುಮುಂದೆ 'ಸೈತಾನ್': 'ಮಮ್ಮಿ' ಲೋಹಿತ್ ನಿರ್ಮಾಣದ ಸಿನಿಮಾಗೆ ಪ್ರಭಾಕರ್ ಆಕ್ಷನ್ ಕಟ್
ಓಲ್ಡ್ ಮಾಂಕ್ ಸಿನಿಮಾದಲ್ಲಿ ಅದಿತಿ ನಿರ್ವಹಿಸಿರುವ ಪಾತ್ರ ತಮ್ಮ ನಿಜ ಜೀವನಕ್ಕೆ ಹತ್ತಿರವಾದುದು ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಓಲ್ಡ್ ಮಾಂಕ್ ಸಿನಿಮಾ ಗುರು ಶಿಷ್ಯರು, ಅನಂತ್ ನಾಗ್ ಅವರ ಹಳೆಯ ಕಾಮಿಡಿ ಸಿನಿಮಾಗಳು, ರಮೇಶ್ ಅರವಿಂದ್ ಅವರ 'ಕುರಿಗಳು ಸಾರ್ ಕುರಿಗಳು' ಥರದ ಸಿನಿಮಾಗಳನ್ನು ನೆನಪಿಸುತ್ತದೆ ಎನ್ನುವುದು ಅದಿತಿ ನಂಬಿಕೆ.