ಪ್ರೇಮ್ ಅವರಂಥ ಪ್ರತಿಭಾನ್ವಿತ ನಿರ್ದೇಶಕ ನನಗಾಗಿ ಸಿನಿಮಾ ಮಾಡುತ್ತಾರೆ ಎಂದು ನಾನು ನಂಬಿರಲಿಲ್ಲ: ರಾಣಾ
ರಾಣಾ ತನ್ನ ಸಹೋದರಿ ರಕ್ಷಿತಾ , ತಾಯಿ ಮಮತಾ ರಾವ್ ಮತ್ತು ಭಾವ ಪ್ರೇಮ್ ಅವರ ನಟನೆಯನ್ನು ನೋಡುತ್ತಾ ಬೆಳೆದ ಯುವಕ. ಸದ್ಯ ಬೆಳ್ಳಿ ತೆರೆ ಮೇಲೆ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ.
Published: 24th February 2022 11:37 AM | Last Updated: 24th February 2022 12:56 PM | A+A A-

ರಾಣಾ
ರಾಣಾ ತನ್ನ ಸಹೋದರಿ ರಕ್ಷಿತಾ , ತಾಯಿ ಮಮತಾ ರಾವ್ ಮತ್ತು ಭಾವ ಪ್ರೇಮ್ ಅವರ ನಟನೆಯನ್ನು ನೋಡುತ್ತಾ ಬೆಳೆದ ಯುವಕ. ಸದ್ಯ ಬೆಳ್ಳಿ ತೆರೆ ಮೇಲೆ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ.
ಈಗ ಏಕ್ ಲವ್ ಯಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ನನ್ನ ಎಂಜಿನೀಯರಿಂಗ್ ಪದವಿಯ ಅಂತಿಮ ವರ್ಷದಲ್ಲಿದ್ದಾಗ ನಾನು ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಬಯಸಿದೆ.
ಆಗ ನನ್ನ ಕನಸನ್ನು ಹೇಳದಿದ್ದರೇ ಎಂದಿಗೂ ನನ್ನ ಬಯಕೆ ಈಡೇರುವುದಿಲ್ಲ ಎಂಬುದನ್ನು ನಾನು ಅರ್ಥ ಮಾಡಿಕೊಂಡು ಅದನ್ನು ನನ್ನ ತಾಯಿ ಬಳಿ ಹೇಳಿಕೊಂಡೆ. ನಂತರ ನನ್ನ ತಾಯಿ ಪ್ರೇಮ್ ಬಳಿ ಹೇಳಿದ್ದರಿಂದ ನನ್ನ ಕನಸಿಗೆ ಅವರು ಬೆಂಬಲ ನೀಡಿದರು ಎಂದು ನಟ ರಾಣಾ ತಾವು ಸಿನಿಮಾಗೆ ಬಂದ ವಿಷವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮುಂದೆ ಗುರಿ ಇದೆ, ಬೆನ್ನ ಹಿಂದೆ ಗುರುಗಳಿದ್ದಾರೆ: 'ಏಕ್ ಲವ್ ಯಾ' ನಾಯಕ ರಾಣಾ ಸಂದರ್ಶನ
ಲೀ ಸ್ಟ್ರಾಸ್‌ಬರ್ಗ್ ಥಿಯೇಟರ್‌ನ ವಿದ್ಯಾರ್ಥಿಯಾಗಿದ್ದ ರಾಣಾ ದಿ ವಿಲನ್‌ನಲ್ಲಿ ನಿರ್ದೇಶಕ ಪ್ರೇಮ್‌ಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಶಿವರಾಜ್‌ಕುಮಾರ್ ಮತ್ತು ಸುದೀಪ್ ಅವರಿಂದ ನಟನೆಯನ್ನು ಕಲಿತುಕೊಂಡರು.
2015 ರಲ್ಲಿ ಸಿನಿಮಾ ರಂಗಕ್ಕೆ ಪ್ರವೇಶಿಸಿದೆ, ಕಳೆದ 7 ವರ್ಷಗಳಿಂದ ಪ್ರೇಮ್ ನನಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರಂಥ ಪ್ರತಿಭಾವಂತ ನಿರ್ದೇಶಕರು ನನಗಾಗಿ ಸಿನಿಮಾ ಡೈರೆಕ್ಷನ್ ಮಾಡುತ್ತಾರೆ ಎಂದು ನಾನು ಎಣಿಸಿರಲಿಲ್ಲ, ಅವರು ಬ್ರಾಂಡ್ ನಿರ್ದೇಶಕರಾಗಿದ್ದು, ಪ್ರೇಕ್ಷಕರ ನಾಡಿಮಿಡಿತವನ್ನು ಅರ್ಥಮಾಡಿಕೊಂಡಿದ್ದಾರೆ. ನನ್ನ ನಟನೆಯ ಕನಸಿಗೆ ರೆಕ್ಕೆ ಪುತ್ತ ನೀಡಿದ ನನ್ನ ತಾಯಿ ಮತ್ತು ನನ್ನ ಸಹೋದರಿ ಹಾಗೂ ಪ್ರೇಮ್ ಅವರಿಗೆ ನಾನು ಧನ್ಯವಾದ ಹೇಳಲೇಬೇಕು ಎಂದು ರಾಣಾ ತಿಳಿಸಿದ್ದಾರೆ.
ಸಾಮಾಜಿಕ ಸಂದೇಶ ಹೊಂದಿರುವ ರೊಮ್ಯಾಂಟಿಕ್ ಥ್ರಿಲ್ಲರ್ ಮೂಲಕ ಸಿನಿಮಾ ವೃತ್ತಿ ಆರಂಭಿಸಿರುವುದಕ್ಕೆ ರಾಣಾ ಸಂತೋಷ ಪಟ್ಟಿದ್ದಾರೆ. ಕೇವಲ ಒಂದೇ ಒಂದು ಅಂಶವನ್ನು ಆಧಾರವಾಗಿರಿಸಿಕೊಂಡು ಚಿತ್ರ ತಯಾರಿಸಿಲ್ಲ, ಹಲವು ಅಗತ್ಯ ಎಲಿಮೆಂಟ್ಸ್ ಗಳಿವೆ, ಇದೊಂದು ಆಲ್ ರೌಂಡ್ ಎಂಟರ್ಟೈನರ್ ಸಿನಿಮಾವಾಗಿದೆ ಎಂದು ರಾಣಾ ಹೇಳಿದ್ದಾರೆ.