'ತಂತ್ರಜ್ಞರೇ ನನ್ನ ನಾಯಕರು, ನನ್ನ ನಿರ್ದೇಶನದ ಪ್ರತಿ ಹೆಜ್ಜೆಯಲ್ಲೂ ಅವರು ನನ್ನೊಂದಿಗೆ ಇದ್ದಾರೆ'
ದರ್ಶನ್, ಪುನೀತ್ ರಾಜಕುಮಾರ್, ಶಿವರಾಜಕುಮಾರ್ ಮತ್ತು ಸುದೀಪ್ ಅವರಂತ ಘಟಾನುಘಟಿ ನಾಯಕರುಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ನಿರ್ದೇಶಕ ಪ್ರೇಮ್ ತಮ್ಮ ಮುಂದಿನ ಸಿನಿಮಾ ಏಕ್ ಲವ್ ಯಾ ಚಿತ್ರದಲ್ಲಿ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿದ್ದಾರೆ
Published: 24th February 2022 12:33 PM | Last Updated: 24th February 2022 12:58 PM | A+A A-

ಏಕ್ ಲವ್ ಯಾ ಸಿನಿಮಾ ನಿರ್ದೇಶಕ ಪ್ರೇಮ್
ದರ್ಶನ್, ಪುನೀತ್ ರಾಜಕುಮಾರ್, ಶಿವರಾಜಕುಮಾರ್ ಮತ್ತು ಸುದೀಪ್ ಅವರಂತ ಘಟಾನುಘಟಿ ನಾಯಕರುಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ನಿರ್ದೇಶಕ ಪ್ರೇಮ್ ತಮ್ಮ ಮುಂದಿನ ಸಿನಿಮಾ ಏಕ್ ಲವ್ ಯಾ ಚಿತ್ರದಲ್ಲಿ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿದ್ದಾರೆ.
ತಮ್ಮ ಭಾಮೈದುನ ರಾಣಾ ಸಿನಿಮಾದಲ್ಲಿ ನಟಿಸುವ ಅಭಿಲಾಷೆ ವ್ಯಕ್ತ ಪಡಿಸದಿದ್ದರೇ ಚಿತ್ರ ಹೊರ ಬರುತ್ತಿರಲಿಲ್ಲ ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.
ಎಕ್ಸ್ ಕ್ಯೂಸ್ ಮಿ, ಪ್ರೀತಿ ಏಕೆ ಭೂಮಿ ಮೇಲಿದೆ ನಂತಕ ಪ್ರೇಮ್ ನಿರ್ದೇಶನದ ಮೂರನೇ ರೊಮ್ಯಾಂಟಿಕ್ ಸಿನಿಮಾ ಏಕ್ ಲವ್ ಯಾ ಫೆಬ್ರವರಿ 24 ರಂದು ತೆರೆಗೆ ಬರುತ್ತಿದೆ.
ರೋಮ್ಯಾಂಟಿಕ್ ಸಿನಿಮಾಗಾಗಿ ಹೊಸಬರನ್ನು ಕರೆ ತರಲು ಬಯಸುತ್ತೇನೆ, ಆದರೆ ಆ್ಯಕ್ಷನ್ ಸಿನಿಮಾಗಳಲ್ಲಿ ಹೊಸಬರನ್ನು ಕರೆತಂದರೆ ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಬಗ್ಗೆ ನನಗೆ ಅನುಮಾನವಿದೆ ಎಂದು ಹೇಳಿದ್ದಾರೆ.
ಏಕ್ ಲವ್ ಯಾಗೆ ಮೊದಲು ಎಕ್ಸ್ ಕ್ಯೂಸ್ ಮಿ 2 ಎಂದು ಹೆಸರಿಡಲಾಗಿತ್ತು ಎಂದು ನಿರ್ದೇಶಕ ಪ್ರೇಮ್ ಬಹಿರಂಗ ಪಡಿಸಿದ್ದಾರೆ. ಆದರೆ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದ ಎಕ್ಸ್ ಕ್ಯೂಸ್ ಮಿ ಟೈಟಲ್ ದೊಡ್ಡ ಬಜ್ ಸೃಷ್ಟಿಸುತ್ತದೆ ಎಂದು ನಾನು ಭಾವಿಸಿದ್ದೆ, ಆದರೆ ಟೈಟಲ್ ಅನ್ನು ಬೇರೆ ಯಾರೋ ರಿಜಿಸ್ಟಾರ್ ಮಾಡಿಸಿದ್ದಾರೆ.
ಇದನ್ನೂ ಓದಿ: ಮುಂದೆ ಗುರಿ ಇದೆ, ಬೆನ್ನ ಹಿಂದೆ ಗುರುಗಳಿದ್ದಾರೆ: 'ಏಕ್ ಲವ್ ಯಾ' ನಾಯಕ ರಾಣಾ ಸಂದರ್ಶನ
ಆದರೆ ಅವರ ನಿರ್ಮಾಣದ ಅಡಿಯಲ್ಲಿ ಈ ಸಿನಿಮಾ ನಿರ್ದೇಶಿಸಿದ್ದರೇ ಶೀರ್ಷಿಕೆ ನೀಡಲು ಅವರು ಸಿದ್ಧರಿದ್ದರು. ಆದರೆ ನಮ್ಮ ಹೋಮ್ ಬ್ಯಾನರ್ ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಅಡಿಯಲ್ಲಿ ನಾವು ಚಿತ್ರವನ್ನು ನಿರ್ಮಾಣ ಮಾಡಲು ಉದ್ದೇಶಿಸಿದ್ದರಿಂದ, ನಾವು ಏಕ್ ಲವ್ ಯಾ ಎಂಬ ಹೊಸ ಶೀರ್ಷಿಕೆಯೊಂದಿಗೆ ಹೋಗಲು ನಿರ್ಧರಿಸಿದ್ದೇವೆ.
ಹೃದಯಗಳು ಮತ್ತು ಜೀವಸೆಲೆಯೊಂದಿಗೆ ವಿನ್ಯಾಸಗೊಳಿಸಲಾದ ಶೀರ್ಷಿಕೆಯು ಈ ಪ್ರೇಮಕಥೆಯನ್ನು ವಿವರಿಸಲು ಸೂಕ್ತವಾಗಿದೆ ಎಂದು ಪ್ರೇಮ್ ತಿಳಿಸಿದ್ದಾರೆ.
ಏಕ್ ಲವ್ ಯಾ ಸಿನಿಮಾ ಹಾಸನದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಕಥೆಯಾಗಿದೆ. "ನಾನು ಈ ಕಥೆಯಿಂದ ಒಂದು ಎಳೆಯನ್ನು ತೆಗೆದುಕೊಂಡು, ಅದರ ಮೇಲೆ ಆರು ತಿಂಗಳ ಕಾಲ ಕೆಲಸ ಮಾಡಿದ್ದೇವೆ, ಕಥೆಯನ್ನು ಥ್ರಿಲ್ಲರ್ ಆಗಿ ಪರಿವರ್ತಿಸಿದ್ದೇವೆ, ಅವರು ಏಕ್ ಲವ್ ಯಾ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಸಂಗೀತವನ್ನು ಚಿತ್ರದ ಆತ್ಮ ಎಂದು ನಾನು ಪರಿಗಣಿಸುತ್ತೇನೆ ಮತ್ತು ಸಂಗೀತವನ್ನುಸಂಯೋಜಿಸಲು 6-12 ತಿಂಗಳುಗಳನ್ನು ನಿಗದಿಪಡಿಸುತ್ತೇನೆ.
ತಂತ್ರಜ್ಞರು ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗೆ ಇರುತ್ತಾರೆ. ಸಂಗೀತ ಸಂಯೋಜಕ ಅರ್ಜುನ್ ಜನ್ಯ ಮತ್ತು ಛಾಯಾಗ್ರಾಹಕ ಮಹೇಂದ್ರ ಸಿಂಹ ಅವರಂತ ಅತ್ಯುತ್ತಮ ತಂತ್ರಜ್ಞರೊಂದಿಗೆ ಏಕ್ ಲವ್ ಯಾದಲ್ಲಿ ಕೆಲಸ ಮಾಡಲು ನಾನು ಅದೃಷ್ಟಶಾಲಿಯಾಗಿದ್ದೇನೆ ಎಂದು ನಿರ್ದೇಶಕ ಪ್ರೇಮ್ ತಿಳಿಸಿದ್ದಾರೆ.
ಇದನ್ನೂ ಓದಿ: ನನ್ನ ಬೋಲ್ಡ್ ಪಾತ್ರಗಳೇ ಹೆಡ್ ಲೈನಲ್ಲಿ ಸುದ್ದಿಯಾಗೋದು ಯಾಕೆ?: 'ಎಕ್ ಲವ್ ಯಾ' ನಟಿ ರಚಿತಾ ರಾಮ್
ರಚಿತಾ ರಾಮ್, ಹೊಸಬರಾದ ರಾಣಾ ಮತ್ತು ರೀಷ್ಮಾ ನಾಣಯ್ಯ ಸೇರಿದಂತೆ ಏಕ್ ಲವ್ ಯಾ ಚಿತ್ರದ ಎಲ್ಲಾ ಕಲಾವಿದರು ಅದ್ಭುತವಾಗಿ ಕೆಲಸ ಮಾಡಿದ್ದಾರೆ ಎಂದು ಪ್ರೇಮ್ ಹೇಳುತ್ತಾರೆ. "ರೊಮ್ಯಾಂಟಿಕ್ ಥ್ರಿಲ್ಲರ್ ನನಗೆ ಸಂಪೂರ್ಣವಾಗಿ ಹೊಸ ಪ್ರಕಾರವಾಗಿದೆ" ಪ್ರೇಕ್ಷಕರು ಮುಕ್ತ ಮನಸ್ಸಿನಿಂದ ಥಿಯೇಟರ್ ಗೆ ಬರಬೇಕೆಂದು ಬಯಸುವುದಾಗಿ ತಿಳಿಸಿದ್ದಾರೆ. ಪ್ರೇಕ್ಷಕರು ಪ್ರೇಮ್ ಹೆಸರನ್ನು ಬದಿಗಿಟ್ಟು, ಹೊಸ ಪ್ರತಿಭೆಗಳ ಪ್ರಯತ್ನವನ್ನು ನೋಡಲು ಬರಬೇಕೆಂದು ಹೇಳಿದ್ದಾರೆ.