
ಜೇಮ್ಸ್ ಸಿನಿಮಾ ಸ್ಟಿಲ್
ಮಹಾಶಿವರಾತ್ರಿಯ ಶುಭ ದಿನದಂದು ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಸಿನಿಮಾದ ಇಂಟ್ರುಡಕ್ಟರಿ ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಇತ್ತೀಚೆಗೆ ಜೇಮ್ಸ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತ ವಾಗಿತ್ತು, ಮಾರ್ಚ್ 17 ರಂದು ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ ಚಿತ್ರತಂಡ ಪ್ರಮಾಣ ಪತ್ರಕ್ಕಾಗಿ ಸೆನ್ಸಾರ್ ಬೋರ್ಡ್ಗೆ ಸಿನಿಮಾ ಕಾಪಿ ರವಾನಿಸಿದೆ.
ನಟ ಪುನೀತ್ ಅಭಿನಯದ ಕೊನೆಯ ಸಿನಿಮಾ ಇದಾಗಿದ್ದು ಅಪ್ಪು ಅಭಿಮಾನಿಗಳು ಜೇಮ್ಸ್ ಸಿನಿಮಾಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಕಿಶೋರ್ ಪತ್ತಿಕೊಂಡ ನಿರ್ಮಾಣದ ಸಿನಿಮಾಗೆ ಶಿವರಾಜ ಕುಮಾರ್ ಡಬ್ಬಿಂಗ್ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಹೊರವರ್ತುಲ ರಸ್ತೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೆಸರು ನಾಮಕರಣ
ಜೇಮ್ಸ್ ನಲ್ಲಿ ಪುನೀತ್ ಹಲವು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾ ಆನಂದ್ ಪುನೀತ್ ಗೆ ನಾಯಕಿಯಾಗಿದ್ದಾರೆ, ಮೆಕಾ ಶ್ರೀಕಾಂತ್, ಚಿಕ್ಕಣ್ಣ, ಶೈನ್ ಶೆಟ್ಟಿ ಹಾಗೂ ತಿಲಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.