'ಗತ ವೈಭವ' ತರುತ್ತಿದ್ದಾರೆ 'ರಾಬಿನ್ ಹುಡ್' ಜೋಡಿ ಸುನಿ-ದುಶ್ಯಂತ್!
ಸಿಂಪಲ್ ಸುನಿ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು. ಸದ್ಯ ಗತವೈಭವ ಸಿನಿಮಾ ಮೂಲಕ ಹೊಸ ನಟನನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿದ್ದಾರೆ.
Published: 26th February 2022 12:03 PM | Last Updated: 26th February 2022 01:32 PM | A+A A-

ಸುನಿ ಮತ್ತು ದುಶ್ಯಂತ್
ಸಿಂಪಲ್ ಸುನಿ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು. ಸದ್ಯ ಗತವೈಭವ ಸಿನಿಮಾ ಮೂಲಕ ಹೊಸ ನಟನನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿದ್ದಾರೆ.
ಫೆಬ್ರವರಿ 28 ರಂದು ಬೆಳಗ್ಗೆ 10.10 ನಿಮಿಷಕ್ಕೆ ಅಧಿಕೃತ ವಾಗಿ ಮಾಹಿತಿ ನೀಡಲಿದ್ದಾರೆ. ಇನ್ನೂ ಇದೇ ವೇಳೆ ಚಿತ್ರದ ನಾಯಕನ ಪಾತ್ರದ ಬಗ್ಗೆ ಒನ್ ಲೈನ್ ನಲ್ಲಿ ಹೇಳಲಿದ್ದಾರೆ.
ದುಶ್ಯಂತ್ ವಿಎಫ್ ಎಕ್ಸ್ ಕಲಾವಿದನಾಗಿ ನಟಿಸಲಿದ್ದಾರೆ. ಇದೊಂದು ಪ್ಯಾಂಟಸಿ ಸಿನಿಮಾವಾಗಿದೆಯ. ಚಿತ್ರದಲ್ಲಿ ಹಾಸ್ಯ ಅಂಶಗಳೂ ಇರಲಿದೆ.
ದುಶ್ಯಂತ್ ಅವರನ್ನು ಹೊರತು ಪಡಿಸಿದರ್ ಇನ್ನೂ ಬೇರೆ ಕಲಾವಿದರ ಆಯ್ಕೆಯಾಗಿಲ್ಲ, ಸಿಂಪಲ್ ಆಗಿ ಒಂದು ಲವ್ ಸ್ಚೋರಿ ಮತ್ತುಬಹು ಪರಾಕ್ ಸಿನಿಮಾಗೆ ಸಂಗೀತ ನೀಡಿದ್ದ ಭರತ್ ಬಿಜೆ ಗತ ವೈಭವ ಸಿನಿಮಾಗೆ ಸಂಗೀತ ಸಂಯೋಜಕರಾಗಿದ್ದಾರೆ.
ಕೆಲ ತಿಂಗಳ ಹಿಂದೆ ಬಿಡುಗಡೆಯಾದ ‘ಸಖತ್’ ಸಿನಿಮಾಗೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದರು. ಶರಣ್ ನಟನೆಯ ‘ಅವತಾರ ಪುರುಷ’ ರಿಲೀಸ್‌ಗೆ ರೆಡಿಯಿದೆ. ಇದರ ನಡುವೆ ಸುನಿ ಹೊಸ ಸಿನಿಮಾವನ್ನು ಮಾಡಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಹೊಸ ಎಕ್ಸ್ ಪೆರಿಮೆಂಟಲ್ ಕಮರ್ಷಿಯಲ್ ಸಿನಿಮಾ ಕೈಗೆತ್ತಿಕೊಂಡ ನಿರ್ದೇಶಕ ಸಿಂಪಲ್ ಸುನಿ: 'ರಾಬಿನ್ ಹುಡ್' ಸಿನಿಮಾ ಮುಂದೂಡಿಕೆ
ಗತವೈಭವ, ಸಂಪೂರ್ಣ ಪ್ರೇಮಕಥೆ. ಸೈಂಟಿಫಿಕ್ ಥ್ರಿಲ್ಲರ್ ಮಾದರಿಯ ಕಥೆಯನ್ನು ಈ ಸಿನಿಮಾದಲ್ಲಿಹೇಳಲು ಹೊರಟಿದ್ದೇವೆ. ದುಷ್ಯಂತ್ ಜತೆ ನಾನು ‘ರಾಬಿನ್ ಹುಡ್’ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅದನ್ನು ಮುಂದಕ್ಕೆ ಹಾಕಿದ್ದೇವೆ. ’ಗತವೈಭವ’ ಕಥೆಗೆ ದುಷ್ಯಂತ್ ಎಲ್ಲ ರೀತಿಯಲ್ಲಿಯೂ ಸೂಕ್ತರಾಗುತ್ತಾರೆ. ಅವರ ತಯಾರಿಯೂ ಬಹಳ ಜೋರಾಗಿದೆ, ಏಪ್ರಿಲ್ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.
ದುಶ್ಯಂತ್, ಟೆಂಟ್ ಸಿನಿಮಾ ಅಭಿನಯ ಶಾಲೆಯಲ್ಲಿ ಮೂರು ವರ್ಷದ ಕೋರ್ಸ್ ಮಾಡಿದ್ದಾರೆ. ಬೀದಿ ನಾಟಕ, ಕಿರುಚಿತ್ರ, ಮ್ಯೂಸಿಕ್ ವಿಡಿಯೋ ಹೀಗೆ ನಟನೆಗೆ ಒತ್ತು ಕೊಡುವಂತಹ ಹಲವು ಕೆಲಸಗಳಲ್ಲಿ ದುಶ್ಯಂತ್ ತೊಡಗಿಸಿಕೊಂಡಿದ್ದಾರೆ. 2019ರಲ್ಲಿ ರಂಗಕರ್ಮಿ ಕೃಷ್ಣ ಅವರ ಆ್ಯಕ್ಟಿಂಗ್ ವರ್ಕ್ಶಾಪ್,. ಪುಷ್ಕರ್ ಆ್ಯಕ್ಟಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ನಟನೆ ಕಲಿತಿದ್ದಾರೆ. ನೀನಾಸಂನ ಧನಂಜಯ ಅವರ ಬಳಿಯೂ ಒಂದಷ್ಟು ದಿನಗಳ ಕಾಲ ನಟನಾ ಪಟ್ಟುಗಳನ್ನು ತಿಳಿದುಕೊಂಡಿದ್ದಾರೆ. ಟಗರು ರಾಜು, ಭೂಷಣ್ ಕುಮಾರ್ ಹೀಗೆ ಹಲವರ ಬಳಿ ಡಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಮಾರ್ಷಲ್ ಆರ್ಟ್ಸ್, ಜಿಮ್ನಾಸ್ಟಿಕ್ ಸೇರಿದಂತೆ ಒಬ್ಬ ನಾಯಕ ಏನೇನು ಕಲಿತಿರಬೇಕೋ ಅವೆಲ್ಲವನ್ನೂ ದುಶ್ಯಂತ್ ಕಲಿತಿದ್ದಾರೆ.