ಗಣರಾಜ್ಯೋತ್ಸವಕ್ಕೆ ಪುನೀತ್ ರಾಜಕುಮಾರ್ ನಟನೆಯ 'ಜೇಮ್ಸ್' ಸ್ಪೆಷಲ್ ಪೋಸ್ಟರ್ ರಿಲೀಸ್!
ಮಾರ್ಚ್ 17 ರಂದು ಪುನೀತ್ ರಾಜ ಕುಮಾರ್ ಹುಟ್ಟುಹಬ್ಬವಿದೆ, ಹೀಗಾಗಿ ಅಷ್ಟರಲ್ಲಿ ಜೇಮ್ಸ್ ಸಿನಿಮಾ ಕೆಲಸ ಮುಗಿಸುವುದು ನಮ್ಮ ಟಾರ್ಗೆಟ್ ಆಗಿದೆ. ಅದು ಕೊರೋನಾ ಪರಿಸ್ಥಿತಿ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದ್ದಾರೆ.
Published: 06th January 2022 12:18 PM | Last Updated: 06th January 2022 01:20 PM | A+A A-

ಜೇಮ್ಸ್ ಸ್ಟಿಲ್
2022 ರಲ್ಲಿ ರಿಲೀಸ್ ಆಗುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರ ಕೂಡ ಒಂದು.
ಸದ್ಯ ಜೇಮ್ಸ್ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸ ವೇಗವಾಗಿ ಕೆಲಸ ಮಾಡುತ್ತಿದ್ದೇವೆ, ಡಿಐ, ಸಿಜಿ ಮತ್ತು ರಿ ರೆಕಾರ್ಡಿಂಗ್ ನಡೆಯುತ್ತಿದೆ, ಗಣ ರಾಜ್ಯೋತ್ಸವದಂದು ವಿಶೇಷ ಪೋಸ್ಟರ್ ರಿಲೀಸ್ ಮಾಡುವುದಾಗಿ ನಿರ್ದೇಶಕ ಚೇತನ ಕುಮಾರ್ ಹೇಳಿದ್ದಾರೆ.
ಮಾರ್ಚ್ 17 ರಂದು ಪುನೀತ್ ರಾಜ ಕುಮಾರ್ ಹುಟ್ಟುಹಬ್ಬವಿದೆ, ಹೀಗಾಗಿ ಅಷ್ಟರಲ್ಲಿ ಜೇಮ್ಸ್ ಸಿನಿಮಾ ಕೆಲಸ ಮುಗಿಸುವುದು ನಮ್ಮ ಟಾರ್ಗೆಟ್ ಆಗಿದೆ. ಅದು ಕೊರೋನಾ ಪರಿಸ್ಥಿತಿ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದ್ದಾರೆ.
ವಾಸ್ತವವಾಗಿ, ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸುವುದರ ಜೊತೆಗೆ ಈ ತಿಂಗಳು ಟೀಸರ್ ಅಥವಾ ಟ್ರೇಲರ್‌ನೊಂದಿಗೆ ಬರಲು ನಾವು ಯೋಜಿಸಿದ್ದ್ದೆವು, ಆದರೆ ಈಗ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ನಾವು ಹಿಂದೆ ಸರಿದಿದ್ದೇವೆ ಎಂದು ತಿಳಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರ ಭಾಗವನ್ನು ಹೊರತುಪಡಿಸಿ ಉಳಿದ ಎಲ್ಲಾ ಕಲಾವಿದರ ಡಬ್ಬಿಂಗ್ ಅನ್ನು ತಂಡವು ಪೂರ್ಣಗೊಳಿಸಿದೆ. ಪುನೀತ್ ಸರ್ ಅವರ ಭಾಗಗಳಿಗೆ ಯಾರು ಡಬ್ಬಿಂಗ್ ಮಾಡುತ್ತಾರೆ ಎಂಬುದನ್ನು ನಾವು ಚರ್ಚಿಸುತ್ತೇವೆ ಮತ್ತು ಫೆಬ್ರವರಿ ತಿಂಗಳಲ್ಲಿ ನಮಗೆ ಸ್ಪಷ್ಟತೆ ಸಿಗುತ್ತದೆ ಎಂದು ಚೇತನ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಪುನೀತ್ ರಾಜಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ಸ್ಯಾಟಲೈಟ್ ಹಕ್ಕು ಭಾರೀ ಮೊತ್ತಕ್ಕೆ ಮಾರಾಟ!
ಪುನೀತ್ ರಾಜ್ ಕುಮಾರ್ ಶೂಟಿಂಗ್ ಮುಗಿಸಿದ ಕೊನೆಯ ಚಿತ್ರಗಳಲ್ಲಿ ಜೇಮ್ಸ್ ಕೂಡ ಒಂದು, ಇನ್ನೊಂದು ಯೋಜನೆ ಗಂಧದ ಗುಡಿ. ಪವರ್‌ಸ್ಟಾರ್ ಅನ್ನು ನಿರ್ದೇಶಿಸುವ ಅವಕಾಶವನ್ನು ಪಡೆಯುವುದು ಅದೃಷ್ಟ ಎಂದು ನಿರ್ದೇಶಕರು ಅಭಿಪ್ರಾಯ ಪಟ್ಟಿದ್ದಾರೆ.
ಕಿಶೋರ್ ಪತ್ತಿಕೊಂಡ ಅವರು ಬಂಡವಾಳ ಹೂಡಿರುವ ಈ ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ ಮತ್ತು ಜೆ ಸ್ವಾಮಿ ಅವರ ಛಾಯಾಗ್ರಹಣವಿದೆ. ಪುನೀತ್ ರಾಜ್ ಕುಮಾರ್ ಗೆ ಪ್ರಿಯಾ ಆನಂದ್ ನಾಯಕಿಯಾಗಿದ್ದಾರೆ. ಬಿಗ್ ಬಾಸ್ 7 ಕನ್ನಡ ವಿಜೇತ ಶೈನ್ ಶೆಟ್ಟಿ, ಉಗ್ರಂ ಖ್ಯಾತಿಯ ತಿಲಕ್, ಚಿಕ್ಕಣ್ಣ ಶ್ರೀಕಾಂತ್ ಮೇಕಾ, ಮುಖೇಶ್ ರಿಷಿ, ಆದಿತ್ಯ ಮೆನನ್, ಅನು ಪ್ರಭಾಕರ್, ರಂಗಾಯಣ ರಘು, ಹರ್ಷ, ಸುಚೇಂದ್ರ ಪ್ರಸಾದ್, ಮತ್ತು ರವಿಶಂಕರ ಗೌಡ ಮುಂತಾದವರು ನಟಿಸಿದ್ದಾರೆ.