ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾ ರಿಲೀಸ್ ಮುಂದೂಡಿಕೆ
ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮುಂತಾದ ನಿರ್ಬಂಧಗಳ ಹೇರಿಕೆಯಿಂದ ಚಿತ್ರೋದ್ಯಮದ ವಹಿವಾಟು ಕುಸಿಯಲಿದೆ. ಹಾಗಾಗಿ ಅನೇಕ ಸಿನಿಮಾಗಳು ರಿಲೀಸ್ ದಿನಾಂಕ ಮುಂದೂಡಿಕೊಳ್ಳುತ್ತಿವೆ.
Published: 06th January 2022 11:27 AM | Last Updated: 06th January 2022 01:19 PM | A+A A-

ಏಕ್ ಲವ್ ಯಾ ಸ್ಟಿಲ್
ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮುಂತಾದ ನಿರ್ಬಂಧಗಳ ಹೇರಿಕೆಯಿಂದ ಚಿತ್ರೋದ್ಯಮದ ವಹಿವಾಟು ಕುಸಿಯಲಿದೆ. ಹಾಗಾಗಿ ಅನೇಕ ಸಿನಿಮಾಗಳು ರಿಲೀಸ್ ದಿನಾಂಕ ಮುಂದೂಡಿಕೊಳ್ಳುತ್ತಿವೆ.
ಜೋಗಿ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾ ಕೂಡ ಇದೇ ನಿರ್ಧಾರಕ್ಕೆ ಬಂದಿದೆ. ರಾಣಾ, ರಚಿತಾ ರಾಮ್ , ರೇಷ್ಮಾ ನಾಣಯ್ಯ ಮುಖ್ಯಭೂಮಿಕೆ ನಟಿಸಿರುವ ಈ ಸಿನಿಮಾದ ರಿಲೀಸ್ ದಿನಾಂಕ ಸಹ ಮುಂದೂಡಿಕೆ ಆಗಿದೆ.
ಈ ಸಂಬಂಧ ವಿಡಿಯೋ ರಿಲೀಸ್ ಮಾಡಿರುವ ನಿರ್ದೇಶಕ ಪ್ರೇಮ್, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜನವರಿ 21ರಂದು ‘ಏಕ್ ಲವ್ ಯಾ’ ತೆರೆಗೆ ಬರಬೇಕಿತ್ತು. ಆದರೆ ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಕ್ಯುಪೆನ್ಸಿಗೆ ಮಾತ್ರ ಅವಕಾಶ ನೀಡಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸಿನಿಮಾ ರಿಲೀಸ್ ಮಾಡಿದರೆ ಕಲೆಕ್ಷನ್ ಮೇಲೆ ಹೊಡೆತ ಬೀಳಲಿದೆ. ಹಾಗಾಗಿ ‘ಏಕ್ ಲವ್ ಯಾ’ ಬಿಡುಗಡೆ ದಿನಾಂಕವನ್ನು ಮುಂದೂಡಲು ಚಿತ್ರತಂಡ ನಿರ್ಧರಿಸಿದೆ ಎಂದು ಹೇಳಿದ್ದಾರೆ. ‘ಕೊವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿ, ಎಲ್ಲ ಸಮಸ್ಯೆಗಳು ಪರಿಹಾರ ಆದಮೇಲೆ ಹೊಸ ಡೇಟ್ ಅನೌನ್ಸ್ ಮಾಡುತ್ತೇನೆ’ ಎಂದು ಪ್ರೇಮ್ ಹೇಳಿದ್ದಾರೆ.
ಇದನ್ನೂ ಓದಿ: ಟ್ರೆಂಡ್ ಸೃಷ್ಟಿಸುತ್ತಿದೆ 'ಏಕ್ ಲವ್ ಯಾ' ಎಣ್ಣೆಗೂ ಹೆಣ್ಣಿಗೂ ಸಾಂಗ್: ಎಲ್ಲೆಲ್ಲೂ ಹಾಡಿನ ಗುನುಗುನು!
ರಕ್ಷಿತಾ ಫಿಲ್ಮ್ ಫ್ಯಾಕ್ಟರಿಯಲ್ಲಿ ನಿರ್ಮಾಣವಾಗಿರುವ ಏಕ್ ಲವ್ ಯಾ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಹಲವು ಹಾಡುಗಲು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಸೃಷ್ಟಿಸಿವೆ.