2022 ರಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದ ಹಲವು ಚಿತ್ರಗಳಿಗೆ ಓಮಿಕ್ರಾನ್ ಬ್ರೇಕ್, ಚಿತ್ರೋದ್ಯಮಕ್ಕೆ ಮತ್ತಷ್ಟು ನಷ್ಟ
ದೇಶದಲ್ಲಿ ದಿನದಿಂದ ದಿನಕ್ಕೆ ಓಮಿಕ್ರಾನ್ ಹೆಚ್ಚುತ್ತಿದ್ದು, ಮಹಾಮಾರಿ ನಿಯಂತ್ರಿಸಲು ಹಲವು ರಾಜ್ಯಗಳು ಥಿಯೇಟರ್ಗಳನ್ನು ಬಂದ್ ಮಾಡಿವೆ ಅಥವಾ ಶೇ. 50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿವೆ.
Published: 07th January 2022 04:06 PM | Last Updated: 07th January 2022 05:25 PM | A+A A-

ಸಾಂದರ್ಭಿಕ ಚಿತ್ರ
ಮುಂಬೈ: ದೇಶದಲ್ಲಿ ದಿನದಿಂದ ದಿನಕ್ಕೆ ಓಮಿಕ್ರಾನ್ ಹೆಚ್ಚುತ್ತಿದ್ದು, ಮಹಾಮಾರಿ ನಿಯಂತ್ರಿಸಲು ಹಲವು ರಾಜ್ಯಗಳು ಥಿಯೇಟರ್ಗಳನ್ನು ಬಂದ್ ಮಾಡಿವೆ ಅಥವಾ ಶೇ. 50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿವೆ.
ಈ ಮಧ್ಯೆ 2022ರ ಆರಂಭದಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ದೊಡ್ಡ ಬಜೆಟ್ ಚಿತ್ರಗಳ ಪಟ್ಟಿ ಸಹ ದೊಡ್ಡದಿದ್ದು, ಓಮಿಕ್ರಾನ್ ನಿಂದಾಗಿ ಪ್ರೇಕ್ಷಕರು ಸಹ ಚಿತ್ರಮಂದಿರಕ್ಕೆ ಬರಲು ಭಯಪಡುತ್ತಿರುವುದರಿಂದ ಬಿಡುಗಡೆ ಮುಂದೂಡಲು ಮುಂದಾಗಿವೆ. ಇದು ಈಗಾಗಲೇ ಸಂಕಷ್ಟದಲ್ಲಿರುವ ಚಿತ್ರೋದ್ಯಮಕ್ಕೆ ಮತ್ತೊಂದು ಹೊಡೆತ ನೀಡುತ್ತಿದೆ.
ಎಸ್ಎಸ್ ರಾಜಮೌಳಿ ಅವರ "ಆರ್ಆರ್ಆರ್", ಅಕ್ಷಯ್ ಕುಮಾರ್ ಅವರ "ಪೃಥ್ವಿರಾಜ್", ಶಾಹಿದ್ ಕಪೂರ್ ಸ್ಟಾರ್ಟರ್ "ಜೆರ್ಸಿ", ಪ್ರಭಾಸ್ ಅವರ "ರಾಧೆ ಶ್ಯಾಮ್ ಮತ್ತು ಅಜಿತ್ ಕುಮಾರ್ ಅವರ ತಮಿಳು ಆಕ್ಷನ್-ಡ್ರಾಮಾ "ವಲಿಮೈ" ಈ ತಿಂಗಳು ಬಿಡುಗಡೆಯಾಗಬೇಕಿದ್ದ ಚಿತ್ರಗಳು". ಆದರೆ ಓಮಿಕ್ರಾನ್ ನಿಂದಾಗಿ ಬಿಡುಗಡೆ ಮುಂದೂಡುವ ಸಾಧ್ಯತೆ ಇದೆ.
ಇದನ್ನು ಓದಿ: ಟಾಲಿವುಡ್ ಅಂಗಳದಲ್ಲಿ ಕೊರೋನಾ ಅಬ್ಬರ: ಮಹೇಶ್ ಬಾಬು, ನಿತಿನ್, ಮೀನಾರಲ್ಲಿ ಸೋಂಕು ಪತ್ತೆ
ಸನ್ನಿವೇಶವು ಇಷ್ಟು ಬೇಗ ಕಠೋರವಾಗಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು "ಜೆರ್ಸಿ" ನಿರ್ಮಾಪಕ ಅಮನ್ ಗಿಲ್ ಅವರು ಹೇಳಿದ್ದಾರೆ. ಜೆರ್ಸಿ ಡಿಸೆಂಬರ್ 31ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಈಗ ಚಿತ್ರದ ಬಿಡುಗಡೆ ಮುಂದೂಡಲಾಗಿದೆ.
"ಕಳೆದ ವರ್ಷ ದೀಪಾವಳಿಗೂ ಮುನ್ನ ನಾವೆಲ್ಲರೂ ಏನು ಮಾಡುತ್ತಿದ್ದೆವೋ ಅದೇ ಪರಿಸ್ಥಿತಿ ಈಗಲೂ ಇದೆ. ಪರಿಸ್ಥಿತಿಗಳು ಯಾವಾಗ ಉತ್ತಮವಾಗುತ್ತವೆ ಮತ್ತು ಮುಂಬರುವ ದಿನಗಳು ಮತ್ತು ತಿಂಗಳುಗಳು ಹೇಗೆ ಇರುತ್ತವೆ ಎಂಬುದು ಯಾರಿಗೂ ತಿಳಿದಿಲ್ಲ" ಎಂದು ಗಿಲ್ ಪಿಟಿಐಗೆ ಹೇಳಿದ್ದಾರೆ.
ಕೊರೋನಾ ಹೆಚ್ಚುತ್ತಿರುವುದರಿಂದ ಅನೇಕ ರಾಜ್ಯಗಳಲ್ಲಿ ನಿರ್ಬಂಧಗಳನ್ನು ವಿಧಿಸಿವೆ. ಫೆಬ್ರವರಿಯಲ್ಲೂ ಯಾವುದೇ ಚಲನಚಿತ್ರಗಳು ಬಿಡುಗಡೆಯಾಗುವುದಿಲ್ಲ ಎಂದು ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು ತಿಳಿಸಿದ್ದಾರೆ.