ಕೌಟುಂಬಿಕ ಮನರಂಜನಾ ಚಿತ್ರದಲ್ಲಿ ಅನೀಶ್ ತೇಜೇಶ್ವರ್
ನಮ್ ಏರಿಯಾದಲ್ಲಿ ಒಂದು ದಿನ, ಪೊಲೀಸ್ ಕ್ವಾರ್ಟರ್ಸ್ ಹಾಗೂ 2021 ರಲ್ಲಿ ರಾಮಾರ್ಜುನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟ ಅನೀಶ್ ತೇಜೇಶ್ವರ್ ಹೊಸ ಪ್ರಾಜೆಕ್ಟ್ ಗಾಗಿ ಸಿದ್ಧತೆ ಆರಂಭಿಸಿದ್ದಾರೆ.
Published: 08th January 2022 12:31 PM | Last Updated: 08th January 2022 12:31 PM | A+A A-

ಅನೀಶ್ ತೇಜೇಶ್ವರ್
ನಮ್ ಏರಿಯಾದಲ್ಲಿ ಒಂದು ದಿನ, ಪೊಲೀಸ್ ಕ್ವಾರ್ಟರ್ಸ್ ಹಾಗೂ 2021 ರಲ್ಲಿ ರಾಮಾರ್ಜುನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟ ಅನೀಶ್ ತೇಜೇಶ್ವರ್ ಹೊಸ ಪ್ರಾಜೆಕ್ಟ್ ಗಾಗಿ ಸಿದ್ಧತೆ ಆರಂಭಿಸಿದ್ದಾರೆ.
ಜನವರಿ 12 ರಂದು ನಟ ಅನೀಶ್ ತೇಜೇಶ್ವರ್ ಹುಟ್ಟಹಬ್ಬವಿದ್ದು, ಮುಂದಿನ ಸಿನಿಮಾ ಟೈಟಲ್ ಘೋಷಣೆಯಾಗಲಿದೆ. ನಿರ್ದೇಶಕ ಶಾನ್ ಅವರ ಚೊಚ್ಚಲ ಸಿನಿಮಾ ಇದಾಗಿದ್ದು, ಈಗಾಗಲೇ ಟಾಕಿ ಪೋರ್ಸನ್ ಕಂಪ್ಲೀಟ್ ಆಗಿದೆ, ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ ಎಂದು ಮೂಲಗಳು ತಿಳಿಸಿವೆ.
ಕೌಟುಂಬಿಕ ಮನರಂಜನಾ ಸಿನಿಮಾದಲ್ಲಿ ಅನೀಶ್ ತೇಜೇಶ್ವರ್ ಅವರಿಗೆ ಸಹೋದರಿಯಾಗಿ ಶೃತಿ ಪಾಟೀಲ್ ನಟಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ರೈಡರ್ ಸಿನಿಮಾದಲ್ಲಿ ನಟಿಸಿದ್ದ ಸಂಪದ ಹುಲಿವಾನ ಈ ಚಿತ್ರದಲ್ಲಿ ಅನೀಶ್ ಗೆ ನಾಯಕಿಯಾಗಿದ್ದಾರೆ. ಅಚ್ಯುತ ಕುಮಾರ್ ಮತ್ತು ಉಗ್ರಂ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.