'ಗೋಲ್ಡನ್ ಗ್ಯಾಂಗ್' ಜೊತೆ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್
ಸಾಲು ಸಾಲು ವಿನೂತನ ರಿಯಾಲಿಟಿ ಶೋಗಳ ಮೂಲಕ ಕನ್ನಡಿಗರ ಮನೆ-ಮನಗಳನ್ನು ಮೆಚ್ಚಿಸಿ ಕಿರುತೆರೆಯಲ್ಲಿ ನಂಬರ್ 1 ಸ್ಥಾನದಲ್ಲಿದೆ. ಸದ್ಯ ಈ ವಾಹಿನಿಯಲ್ಲಿ 'ಗೋಲ್ಡನ್ ಸ್ಟಾರ್' ಗಣೇಶ್ ಸಾರಥ್ಯದಲ್ಲಿ 'ಗೋಲ್ಡನ್ ಗ್ಯಾಂಗ್' ಅನ್ನೋ ರಿಯಾಲಿಟಿ ಶೋವೊಂದು ಶುರುವಾಗಲಿದೆ.
Published: 08th January 2022 01:04 PM | Last Updated: 08th January 2022 01:13 PM | A+A A-

ಗಣೇಶ್
ಕನ್ನಡ ಕಿರುತೆರೆಯಲ್ಲಿ ಜೀ ಕನ್ನಡ ವಾಹಿನಿ ಕೇವಲ ಮನರಂಜನೆ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗದೇ ಸದಭಿರುಚಿಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಎಲ್ಲಾ ವರ್ಗದ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.
ಸಾಲು ಸಾಲು ವಿನೂತನ ರಿಯಾಲಿಟಿ ಶೋಗಳ ಮೂಲಕ ಕನ್ನಡಿಗರ ಮನೆ-ಮನಗಳನ್ನು ಮೆಚ್ಚಿಸಿ ಕಿರುತೆರೆಯಲ್ಲಿ ನಂಬರ್ 1 ಸ್ಥಾನದಲ್ಲಿದೆ. ಸದ್ಯ ಈ ವಾಹಿನಿಯಲ್ಲಿ 'ಗೋಲ್ಡನ್ ಸ್ಟಾರ್' ಗಣೇಶ್ ಸಾರಥ್ಯದಲ್ಲಿ 'ಗೋಲ್ಡನ್ ಗ್ಯಾಂಗ್' ಅನ್ನೋ ರಿಯಾಲಿಟಿ ಶೋವೊಂದು ಶುರುವಾಗಲಿದೆ.
ಕಿರುತೆರೆಯ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಸ್ನೇಹಿತರಿಗಾಗಿ ವಿಶೇಷ ಕಾರ್ಯಕ್ರಮವನ್ನು ರೂಪಿಸಿದೆ. ಪ್ರತಿಸಲ ರಿಯಾಲಿಟಿ ಶೋಗಳಲ್ಲಿ ಮನೋರಂಜನೆಯ ಜೊತೆಗೆ ಒಂದು ಭಾವನಾತ್ಮಕ ಸತ್ಯ ಸಂದೇಶವನ್ನು ನೀಡುವ ನಮ್ಮ ವಾಹಿನಿ ಈ ಬಾರಿ ನಮ್ಮ ಚಂದನವನದ ಬಹುಕಾಲದ ಗೆಳೆಯ-ಗೆಳತಿಯರ ಸ್ನೇಹ ಸಮ್ಮಿಲನದ ಬುತ್ತಿಯನ್ನು ಬಿಚ್ಚಿ ಅಲ್ಲಿ ಎಷ್ಟೋ ಜನ ತಮ್ಮ ಜೊತೆಯಾದ ಕಥೆಯನ್ನು ವೀಕ್ಷಕರಿಗೆ ಉಣಬಡಿಸಲು ವೇದಿಕೆ ಸಜ್ಜಾಗಿದೆ.
ಪ್ರಮುಖ ನಟರು ಮತ್ತು ಚಲನಚಿತ್ರ ನಿರ್ಮಾಪಕರು ಕಾರ್ಯಕ್ರಮದ ಭಾಗವಾಗಲಿದ್ದು, ಮೊದಲ ಸಂಚಿಕೆಯಲ್ಲಿ ಶರಣ್, ತರುಣ್ ಕಿಶೋರ್ ಸುಧೀರ್ ಮತ್ತು ಪ್ರೇಮ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಕೂಡ ಗ್ಯಾಂಗ್ ಆಗಿ ಬರಲಿದ್ದು, ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ, ಮತ್ತು ಸುನೀಲ್ ಜೋಶಿ ಕಾರ್ಯಕ್ರಮದ ಭಾಗವಾಗಲಿದ್ದಾರೆ.
ಇದನ್ನೂ ಓದಿ: ಸಖತ್ ನಲ್ಲಿ ಪ್ರೇಕ್ಷಕರಿಗೆ ಮನರಂಜನೆ ಗ್ಯಾರಂಟಿ: ಗೋಲ್ಡನ್ ಸ್ಟಾರ್ ಗಣೇಶ್
ಈ ಕಾರ್ಯಕ್ರಮದ ನಿರೂಪಣೆಯನ್ನು "ಗೋಲ್ಡನ್ ಸ್ಟಾರ್" ಗಣೇಶ್ ನಿರ್ವಹಿಸುತ್ತಿರುವುದು ಈ ಕಾರ್ಯಕ್ರಮದ ಮತ್ತೊಂದು ಹೆಗ್ಗಳಿಕೆ. ಗೆಳೆತನವೆಂಬ ಸಿರಿತನಕ್ಕೆ ಸೋಲದವರಾರೂ ಇಲ್ಲ, ಗೋಲ್ಡನ್ ತಾರೆಗಳ ಗೋಲ್ಡನ್ ಕ್ಷಣಗಳನ್ನು ಸೆರೆಹಿಡಿದು ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ನೀಡಲಿದೆ ಈ ಗೋಲ್ಡನ್ ಗ್ಯಾಂಗ್. ಈ ಕಾರ್ಯಕ್ರಮ ಮನೋರಂಜನೆಯ ಜೊತೆಗೆ ನಗೆಯ ರಸದೌತಣವನ್ನೂ ನೀಡಲಿದೆ. ಕರ್ನಾಟಕದ ಬಹುನಿರೀಕ್ಷೆಯ ಈ ರಿಯಾಲಿಟಿ ಶೋ ಇದೇ ಜನವರಿ 8 ರಿಂದ ಪ್ರತಿ ಶನಿ-ಭಾನು ರಾತ್ರಿ 9ಕ್ಕೆ ಪ್ರಸಾರವಾಗಲಿದೆ.