ಅಣ್ಣನ ಅಗಲಿಕೆಯಿಂದ ಭಾವುಕರಾಗಿ ಪೋಸ್ಟ್ ಮಾಡಿದ ಮಹೇಶ್ ಬಾಬು
ತೆಲುಗು ಸೂಪರ್ಸ್ಟಾರ್ ಕೃಷ್ಣ ಅವರ ಹಿರಿಯ ಪುತ್ರ, ಮಹೇಶ್ ಬಾಬು ಅವರ ಸಹೋದರ ಘಟ್ಟಮನೇನಿ ರಮೇಶ್ ಬಾಬು(56) ಅವರು ಕೆಲವು ದಿನಗಳಿಂದ ಯಕೃತ್ತು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು ಶನಿವಾರ...
Published: 09th January 2022 10:31 PM | Last Updated: 10th January 2022 01:09 PM | A+A A-

ಮಹೇಶ್ ಬಾಬು ಹಾಗೂ ಕುಟುಂಬ
ಹೈದರಬಾದ್: ತೆಲುಗು ಸೂಪರ್ಸ್ಟಾರ್ ಕೃಷ್ಣ ಅವರ ಹಿರಿಯ ಪುತ್ರ, ಮಹೇಶ್ ಬಾಬು ಅವರ ಸಹೋದರ ಘಟ್ಟಮನೇನಿ ರಮೇಶ್ ಬಾಬು (56) ಅವರು ಕೆಲವು ದಿನಗಳಿಂದ ಯಕೃತ್ತು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು ಶನಿವಾರ (ಜನವರಿ 8) ರಾತ್ರಿ ನಿಧನರಾದರು. ಅಣ್ಣನ ಸಾವಿಗೆ ಮಹೇಶ್ ಬಾಬು ಅವರು, ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
“ನೀವು ನನಗೆ ಸ್ಫೂರ್ತಿ, ನನ್ನ ಶಕ್ತಿ, ನನ್ನ ಧೈರ್ಯ, ನನ್ನ ಎಲ್ಲಾ ನೀವೆ. ನೀವಿಲ್ಲದಿದ್ದರೆ ನಾನೇನು ಅಲ್ಲ. ನೀವು ನನಗಾಗಿ ತುಂಬಾ ಮಾಡಿದ್ದೀರಿ. ನನಗೆ ಇನ್ನೊಂದು ಜನ್ಮವಿದ್ದರೆ ನೀವು ನನ್ನ ಅಣ್ಣನಾಗಿರಬೇಕು. ಇಂದಿಗೂ, ಎಂದೆಂದಿಗೂ ನಿನ್ನನ್ನ ಪ್ರೀತಿಸುತ್ತೇನೆ” ಎಂದು ಮಹೇಶ್ ಬಾಬು ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಟಾಲಿವುಡ್ ನಟ ಮಹೇಶ್ ಬಾಬು ಸಹೋದರ ರಮೇಶ್ ಬಾಬು ನಿಧನ
ಸದ್ಯ ಮಹೇಶ್ ಬಾಬು ಕೋವಿಡ್ನಿಂದಾಗಿ ಹೋಮ್ ಕ್ವಾರಂಟೈನ್ನಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಣ್ಣನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ನೋವಿನಲ್ಲಿದ್ದಾರೆ.